ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಮಿಸ್ ಆಗದೆ ಪಡೆಯೋಕೆ ಹೊಸ ಅಪ್ಡೇಟ್
ಕರ್ನಾಟಕ ರಾಜ್ಯ ಇಂದು ಇತರ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ. ಉದಾಹರಣೆಗೆ ಕರ್ನಾಟಕ ರಾಜ್ಯ ಸರ್ಕಾರ (Karnataka state government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ (guarantee schemes) ಗಳು ರಾಜ್ಯದಲ್ಲಿ ಯಶಸ್ವಿಯಾಗಿದ್ದು ಬೇರೆ ರಾಜ್ಯದ ಸರ್ಕಾರವೂ ಕೂಡ ಯೋಜನೆಗಳನ್ನು ಅನುಸರಿಸುತ್ತಿದೆ ಎನ್ನಬಹುದು.
ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿತ್ತು. ಅದೇ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಇತರ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವು.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್; ಇನ್ಮುಂದೆ ಮಿಸ್ ಆಗದೇ ಹಣ ಜಮಾ ಆಗುತ್ತೆ
ಇದೀಗ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ತೆಲಂಗಾಣ (Telangana) ದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಕೂಡ ಆರಂಭಿಸಲಾಗಿದೆ. ಅಂದರೆ ಅಷ್ಟರಮಟ್ಟಿಗೆ ಯೋಜನೆ ಫಲ ಕೊಟ್ಟಿದೆ ಎನ್ನಬಹುದು.
ಸಾಮಾನ್ಯವಾಗಿ ಮನೆಯಲ್ಲಿಯೇ ಇದ್ದು ಮನೆಯ ಕೆಲಸ ಮಾಡುವ ಮಹಿಳೆಯರಿಗೆ ತುರ್ತು ಖರ್ಚಿಗಾಗಿ ಹಣದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಸರ್ಕಾರದಿಂದಲೇ ಗೃಹಲಕ್ಷ್ಮಿ ಯೋಜನೆಯ ಮೂಲಕ 2,000ಗಳ ನೆರವು ಸಿಗುತ್ತಿದೆ. ಈಗಾಗಲೇ ಐದು ಕಂತಿನ ಹಣ ಬಿಡುಗಡೆ ಆಗಿದ್ದು ಒಟ್ಟಾರೆಯಾಗಿ 10,000 ಫಲಾನುಭವಿ ಮಹಿಳೆಯರ ಖಾತೆಗೆ (Bank Account) ವರ್ಗಾವಣೆ ಆಗಿದೆ.
5ನೇ ಕಂತಿನ ಹಣ ಬಿಡುಗಡೆ! (5th installment released)
ರಾಜ್ಯ ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 20ನೇ ತಾರೀಕಿನ ಒಳಗೆ ಪ್ರತಿ ಕಂತಿನ ಹಣ ಜಮಾ (Money Deposit) ಆಗುತ್ತದೆ. ಅದೇ ರೀತಿಯಾಗಿ ಈಗ 5ನೇ ಕಂತಿನ ಹಣವನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಜಿಲ್ಲೆಗಳಿಗೆ ಹಣ ವರ್ಗಾವಣೆ (Money Transfer) ಆಗಿದ್ದು, ಹಲವು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಇನ್ನು ಸಾಕಷ್ಟು ಜನರಿಗೆ 5 ನೇ ಕಂತಿನ ಹಣ ಬರುವುದು ಬಾಕಿ ಇದೆ.
ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ! ಕನ್ನಡಿಗರಿಗೆ ಉದ್ಯೋಗ ಮೀಸಲು
ಈ ಲಿಸ್ಟ್ ನಲ್ಲಿ ಹೆಸರು ಇಲ್ದೇ ಇದ್ರೆ ಹಣ ಬರುವುದಿಲ್ಲ! (Check village list)
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಖಾತೆಗೆ ಸರಕಾರ ನೇರವಾಗಿ ಹಣವನ್ನು (Money Deposit) ವರ್ಗಾವಣೆ ಮಾಡುತ್ತಿದೆ. ಆದರೆ ಹಣಕಾಸು ಖರ್ಚು ವೆಚ್ಚಗಳು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಯಾಕಂದ್ರೆ ಎರಡು ಯೋಜನೆಗಳಿಗೆ ಹಣ ವರ್ಗಾವಣೆ (DBT) ಮಾಡಲು ಸರ್ಕಾರಕ್ಕೆ ಅತಿ ಹೆಚ್ಚಿನ ಹಣ ಬೇಕು, ಹಾಗಾಗಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಸಲುವಾಗಿ ರೇಷನ್ ಕಾರ್ಡ್ ನಲ್ಲಿ ಇರುವ ಅಕ್ರಮ ತಡೆಗಟ್ಟಲು ಸರ್ಕಾರ ಮುಂದಾಗಿದೆ.
ಇದೇ ಕಾರಣಕ್ಕೆ ಇಂದು ಸಾಕಷ್ಟು ರೇಷನ್ ಕಾರ್ಡ್ ಗಳು ರದ್ದಾಗಿದ್ದು, ನೀವು ನಿಮ್ಮ ಹೆಸರು ಇದ್ಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಹೆಸರು ಇಲ್ಲದೆ ಇದ್ದರೆ, ಗೃಹಲಕ್ಷ್ಮಿ ಯೋಜನೆಯ ಹಣ ಅಥವಾ ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!
ಹಳ್ಳಿಪಟ್ಟಿ ಚೆಕ್ ಮಾಡಿ!
https://ahara.kar.nic.in/Home/EServices ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಮುಖಪುಟದಲ್ಲಿ ಎಡ ಭಾಗದಲ್ಲಿ ಕಾಣುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ.
ಈಗ E -ration card ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಶೋ ವಿಲೇಜ್ ಲಿಸ್ಟ್ (show village list) ಎನ್ನುವ ಆಯ್ಕೆ ಕಾಣಿಸುತ್ತಿದೆ, ಅದರ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯತ್ ಹಾಗೂ ಹಳ್ಳಿ ಆಯ್ಕೆ ಮಾಡಬೇಕು. ನಂತರ ಗೋ ಎಂದು ಕ್ಲಿಕ್ ಮಾಡಿದರೆ, ರೇಷನ್ ಕಾರ್ಡ್ ದಾರದ ಹೆಸರು ಕಾಣಿಸುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ಮಿಸ್ ಆಗದೆ ಮುಂದಿನ ಕಂತಿನ ಹಣ ಕೂಡ ಖಾತೆಗೆ ಜಮಾ ಆಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್
ಡಿಬಿಟಿ ಸ್ಟೇಟಸ್ ಚೆಕ್ ಮಾಡಿ! (Check your DBT status)
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಕರ್ನಾಟಕ ಸರ್ಕಾರ, DBT Karnataka ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಸಂಖ್ಯೆಯನ್ನು ಹಾಕಿ ಲಾಗಿನ್ ಆಗಿ. ಬಳಿಕ ನಿಮ್ಮ ಗೃಹಲಕ್ಷ್ಮಿ ಹಣ ಖಾತೆಗೆ ಎಷ್ಟು ಜಮಾ ಆಗಿದೆ ಎಂಬುದನ್ನ ತಿಳಿದುಕೊಳ್ಳಬಹುದು.
New update to get Gruha Lakshmi Yojana money every month without missing