ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!

ಗೃಹಲಕ್ಷ್ಮಿ ಯೋಜನೆ (gruha lakshmi scheme) ಅಡಿಯಲ್ಲಿ ಅರ್ಜಿ ಸಲ್ಲಿಸಿದ ಶೇಕಡ 90ರಷ್ಟು ಮಹಿಳೆಯರು ನಾಲ್ಕನೇ ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಇತ್ತೀಚಿನ ದಿನಗಳಲ್ಲಿ ಸರ್ಕಾರ ನಡೆಸಿದ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಂಪ್ (Gruha lakshmi camp) ಎನ್ನಬಹುದು.
ಹೌದು, ಇಲ್ಲಿಯವರೆಗೆ ಸಾಕಷ್ಟು ಮಹಿಳೆಯರ ಖಾತೆಯಲ್ಲಿ (Bank Account) ಇರುವ ಸಮಸ್ಯೆಯನ್ನು ಈ ಕ್ಯಾಂಪ್ ಮೂಲಕ ಪರಿಹರಿಸಿಕೊಳ್ಳಲಾಗಿದೆ ಎನ್ನಬಹುದು. ಪ್ರತಿ ಬಾರಿ ಹಣ ಬಿಡುಗಡೆ ಮಾಡುವಾಗ ಅಭ್ಯರ್ಥಿಗಳ ಅರ್ಜಿಯನ್ನು ಸರ್ಕಾರ ಪರಿಶೀಲನೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿ ತಿಂಗಳು ಬಿಡುಗಡೆ ಆಗುವ ಹಣ ಒಬ್ಬೊಬ್ಬರಿಗೆ ಒಂದೊಂದು ಸಮಯದಲ್ಲಿ ಜಮಾ ಆಗಬಹುದು.
ಹಾಗಾಗಿ ಈಗ ಐದನೇ ಕಂತಿನ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ (update) ಸಿಕ್ಕಿದ್ದು ನಿಮ್ಮ ಖಾತೆಗೆ ಯಾವಾಗ ಹಣ ಜಮಾ (Money Deposit) ಆಗಲಿದೆ ಎಂಬುದನ್ನು ತಿಳಿದುಕೊಳ್ಳಿ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್
ಈ ಕೆಲಸ ಮಾಡದೆ ಇದ್ರೆ ಅಕೌಂಟ್ ಗೆ ಬರುವುದಿಲ್ಲ ಹಣ!
ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬ್ಯಾಂಕ್ ಖಾತೆಗೆ ಕೆವೈಸಿ (E-KYC) ಆಗಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಕೂಡ ಸಾಕಷ್ಟು ಜನ ಆಧಾರ್ ಲಿಂಕ್ (Aadhaar link) ಮಾಡಿಕೊಳ್ಳದೆ ಇರುವುದರಿಂದ ಅಂತವರ ಖಾತೆಗೆ ಹಣ ಜಮಾ ಆಗಿಲ್ಲ.
ಇದರ ಜೊತೆಗೆ ಸಾಕಷ್ಟು ಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ (bank account) ಹೊಂದಿರುತ್ತಾರೆ ಆದರೆ ಅದನ್ನು ಅಪ್ಡೇಟ್ ಮಾಡಿಕೊಂಡಿರುವುದಿಲ್ಲ. ಈಗ ಸರ್ಕಾರ ಮಹತ್ವದ ಸೂಚನೆಯನ್ನು ನೀಡಿದ್ದು, ನಿಮಗೆ 5ನೇ ಕಂತಿನ ಹಣ ಜಮಾ ಆಗಬೇಕು ಅಂದ್ರೆ ಬ್ಯಾಂಕ್ ಖಾತೆಯ ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇದಕ್ಕಾಗಿ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ, ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ಮೊದಲಾದ ದಾಖಲೆಗಳನ್ನು ನೀಡಿ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಿ.
ಅನ್ನಭಾಗ್ಯ ಯೋಜನೆಯ ಮಹತ್ವದ ಅಪ್ಡೇಟ್; ಸ್ಕೀಮ್ ನಲ್ಲಿ ಧಿಡೀರ್ ಬದಲಾವಣೆ

5ನೇ ಕಂತಿನ ಹಣ ಜಮಾ!
ಜನವರಿ 20ನೇ ತಾರೀಖಿನ ಒಳಗೆ, 5ನೇ ಕಂತಿನ ಹಣ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದ್ದು, ಈಗ ಸಂಕ್ರಾಂತಿ ಗಿಫ್ಟ್ ಎನ್ನುವಂತೆ 15ನೇ ತಾರೀಖಿನಿಂದಲೇ 5ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ. ಹಂತ ಹಂತವಾಗಿ ಒಂದೊಂದು ಜಿಲ್ಲೆಯಂತೆ 5ನೇ ಕಂತಿನ ಹಣ ಜನವರಿ 30ರ ಒಳಗೆ ಮಹಿಳೆಯರ ಖಾತೆಯನ್ನು ತಲುಪಲಿದೆ.
ಈ ಕಾರ್ಡ್ ನಂಬರ್ ಬಳಸಿ ಗೃಹಲಕ್ಷ್ಮಿ ಯೋಜನೆ ಹಣ ಬಂತಾ ಇಲ್ವಾ? ನೋಡಬಹುದು
ರದ್ದಾಗಿದೆ ರೇಷನ್ ಕಾರ್ಡ್! (Ration card cancellation)
2016ರ ಮಾನದಂಡಗಳನ್ನು ನಿರ್ಲಕ್ಷಿಸಿ ಯಾರು ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೋ ಅಂತವರ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (minister K.H. Muniyappa) ತಿಳಿಸಿದ್ದಾರೆ.
ಒಂದು ವೇಳೆ ನಿಮ್ಮ ಕಾರ್ಡ್ ಕೂಡ ರದ್ದಾಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಖಾತೆಗೆ ಬರುವುದಿಲ್ಲ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ನಿಮ್ಮ ರೇಷನ್ ಕಾರ್ಡ್ ರದ್ದುಪಡಿ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
Sankranti Gift for Women, Gruha Lakshmi Yojana 5th installment release



