ಈ ಕಾರ್ಡ್ ನಂಬರ್ ಬಳಸಿ ಗೃಹಲಕ್ಷ್ಮಿ ಯೋಜನೆ ಹಣ ಬಂತಾ ಇಲ್ವಾ? ನೋಡಬಹುದು
ಪ್ರತಿ ತಿಂಗಳು ರೂ.2,000ಗಳನ್ನು ಮನೆಯ ಖರ್ಚಿಗಾಗಿ ಮಹಿಳೆಯರಿಗೆ ಸರ್ಕಾರ ಉಚಿತ (government free money) ವಾಗಿ ನೀಡುತ್ತಿದೆ. ಸಾಕಷ್ಟು ಮಹಿಳೆಯರ ಖಾತೆಗೆ (Bank Account) ರೂ.8,000ಗಳನ್ನು ಸರ್ಕಾರ ಜಮಾ (DBT) ಮಾಡಿದೆ. ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿಗಳಂತೆ ನಾಲ್ಕು ಕಂತು ಬಿಡುಗಡೆ ಆಗಿದ್ದು 8,000 ಮಹಿಳೆಯರ ಖಾತೆ ಸೇರಿವೆ (Money Deposit).
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆ (state government guarantee schemes) ಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಈಗ ಯುವ ನಿಧಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಅನ್ನಭಾಗ್ಯ ಯೋಜನೆ ಹಣ ಬಂತಾ? ಸ್ಟೇಟಸ್ ಈ ರೀತಿ ತೋರಿಸಿದ್ರೆ ಹಣ ಬರೋಲ್ಲ
ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ನೋಡಿದರೆ ಅವುಗಳಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ (Gruha lakshmi scheme)ಗೆ ಹೆಚ್ಚು ಅನುದಾನ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಬಹುದು.
ಸಾಕಷ್ಟು ಗೊಂದಲಗಳ ನಡುವೆಯೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇಂದು ಕೋಟ್ಯಾಂತರ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿಗಳನ್ನು ಪಡೆದುಕೊಳ್ಳುವಂತೆ ಆಗಿದೆ.
ಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ವಾ? ಹಾಗಾದ್ರೆ ಹೀಗೆ ಮಾಡಿ!
ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ ಮಹಿಳೆಯರ ಸಂಖ್ಯೆ ಸುಮಾರು 1.17 ಕೋಟಿಯಷ್ಟು. ಆದರೆ ಇದರಲ್ಲಿ ಇನ್ನೂ ಸುಮಾರು 10% ಗಿಂತಲೂ ಹೆಚ್ಚಿನ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ ಇದಕ್ಕೆ ಸರ್ಕಾರದಿಂದ ತಾಂತ್ರಿಕ ದೋಷ (technical issues) ಗಳು ಒಂದು ಕಾರಣವಾಗಿದ್ದರೆ, ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆ ಇನ್ನೊಂದು ಕಾರಣ.
ಈ ಸಮಸ್ಯೆಯನ್ನು ಪರಿಹರಿಸುವುದುಕ್ಕಾಗಿ ಗೃಹಲಕ್ಷ್ಮಿ ಅದಾಲತ್, ಗೃಹಲಕ್ಷ್ಮಿ ಕ್ಯಾಂಪ್ (gruhalakshmi camp) ಗಳನ್ನು ಸರ್ಕಾರ ಆಯೋಜನೆ ಮಾಡಿತ್ತು. ಇದರಿಂದಾಗಿ ಇನ್ನೂ ಸಾಕಷ್ಟು ಮಹಿಳೆಯರಿಗೆ ಪ್ರಯೋಜನ ಆಗಿರುವುದಂತೂ ಸುಳ್ಳಲ್ಲ.
ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಉಚಿತ ಸೈಟ್ ಹಂಚಿಕೆ! ಅರ್ಜಿ ಹಾಕಿ
ನಿಮ್ಮ ಖಾತೆಗೆ ಇನ್ನೂ ಹಣ ಬಾರದೆ ಇದ್ದರೆ ಸಿಡಿಪಿಓ ಕಚೇರಿಗೆ ಹೋಗಿ ಮತ್ತೆ ದೂರು ಸಲ್ಲಿಸಬಹುದು. ಅಷ್ಟೇ ಅಲ್ಲದೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಲಾಗಿದ್ದು, ಇದುವರೆಗೆ ಅರ್ಜಿ ಸಲ್ಲಿಸದೆ ಇರುವವರು ಅಥವಾ ಅರ್ಜಿ ಸಲ್ಲಿಸಿ ಸಾಕಷ್ಟು ಸಮಸ್ಯೆ ಎದುರಿಸಿರುವವರು ಮತ್ತೆ ಅರ್ಜಿ ಸಲ್ಲಿಸಿ ಹಣ ಬರುವಂತೆ ಮಾಡಿಕೊಳ್ಳಬಹುದು.
ಗೃಹಜ್ಯೋತಿ ಫ್ರೀ ಕರೆಂಟ್! ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್
ರೇಷನ್ ಕಾರ್ಡ್ ನಂಬರ್ ಬಳಸಿ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿ!
ನೀವು ಮೊಬೈಲ್ ನಲ್ಲಿ DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ (download) ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದು. ಅಥವಾ ಮಾಹಿತಿ ಕಣಜ ವೆಬ್ಸೈಟ್ ಮೂಲಕ ತಿಳಿಯಬಹುದು.
https://mahitikanaja.karnataka.gov.in/Service/Service/3136 ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಮುಖಪುಟದಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಎರಡನೇ ಹಂತದಲ್ಲಿ ನೀವು ನಿಮ್ಮ 12 ನಂಬರ್ ಗಳಿರುವ ರೇಷನ್ ಕಾರ್ಡ್ (Ration Card no) ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಎಂದು ಕೊಡಿ.
ಈಗ ನೀವು ಅರ್ಜಿ ಸಲ್ಲಿಸಿದ ದಿನಾಂಕ, ಅರ್ಜಿ ಸ್ಥಿತಿ ಅರ್ಜಿ ಅನುಮೋದನೆಗೊಂಡ ದಿನಾಂಕ, ಎಷ್ಟು ಹಣ ಜಮಾ ಆಗಿದೆ ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ.
ಗೃಹಲಕ್ಷ್ಮಿ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಸುಲಭ ಮಾರ್ಗ; ಡೈರೆಕ್ಟ್ ಲಿಂಕ್
Check Gruha Lakshmi Scheme Money Status Using Ration Card Number