ಸಾಮಾನ್ಯವಾಗಿ ಕೈಯಲ್ಲಿ ಹಣ (money) ಇಲ್ಲದೆ ಇದ್ರೆ ಬದುಕು ನಡೆಸುವುದೇ ಕಷ್ಟವಾಗುತ್ತದೆ. ಅದರಲ್ಲೂ ಮನೆಯಲ್ಲಿಯೇ ಇರುವ ಗೃಹಿಣಿಯರಿಗೆ ಹಣಕಾಸಿನ ಅವಶ್ಯಕತೆ ಇದ್ದಾಗಲೂ ಕೂಡ ಹಣ ಇಲ್ಲದೆ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಎದುರಾಗುತ್ತೆ.

ಈ ಪರಿಸ್ಥಿತಿಯನ್ನು ಚೆನ್ನಾಗಿ ಅರಿಯುತ್ತಿರುವ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದಿದೆ.

These 4 rules are mandatory to get Gruha Lakshmi money

ಹೌದು, ಇಂದು ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ರೂ.2,000ಗಳನ್ನು ಸರ್ಕಾರದಿಂದ 2000 ಉಚಿತವಾಗಿ ಪಡೆದು ತಮ್ಮ ಜೀವನದ ತಿಂಗಳ ಖರ್ಚಿನ ಒಂದು ಭಾಗವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಹಣ ಜಮಾ (Money Deposit) ಮಾಡಲು ಸರ್ಕಾರ ಶತಾಯಗತಾಯ ಪ್ರಯತ್ನಿಸಿದೆ.

ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಗಲಿದೆ ಈ ಯೋಜನೆಯ ಉಚಿತ ಪ್ರಯೋಜನ!

ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು 2000 ಗಳಂತೆ ಮಹಿಳೆಯರ ಖಾತೆಗೆ (Bank Account) ಜಮಾ (DBT) ಆಗುತ್ತದೆ. ಈಗಾಗಲೇ ನಾಲ್ಕು ಕಂತಿನ ಹಣ ಬಿಡುಗಡೆ ಆಗಿದ್ದು 5ನೇ ಕಂತಿನ ಹಣವನ್ನು ಜನವರಿ 30ರ ಒಳಗೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಲಿಗೆ, ಮಹಿಳೆಯರ ಬಳಿ ಸರ್ಕಾರದಿಂದ ಬರೋಬ್ಬರಿ ಹತ್ತು ಸಾವಿರ ರೂಪಾಯಿಗಳು ಖಾತೆಗೆ ಬಂದು ತಲುಪಿವೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಹಣ ಸರ್ಕಾರಿ ಚಿಟ್ ಫಂಡ್ ನಲ್ಲಿ ಹೂಡಿಕೆ! (Chitfund investment)

ಕೇರಳ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸರ್ಕಾರಿ ಚಿಟ್ ಫಂಡ್ ನಲ್ಲಿ ಮಹಿಳೆಯರು ಹೂಡಿಕೆ ಮಾಡಲು ಸರ್ಕಾರ ಆಹ್ವಾನ ನೀಡಿದೆ.

ಈಗಾಗಲೇ ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಕೂಡ ಬರುತ್ತದೆ.

ಅಷ್ಟೇ ಅಲ್ಲದೆ ಉಚಿತ ವಿದ್ಯುತ್ ನಿಂದಾಗಿ ವಿದ್ಯುತ್ ಬಿಲ್ಲು ಕೂಡ ಉಳಿಯುತ್ತಿದೆ. ಇಷ್ಟೆಲ್ಲ ಸೌಲಭ್ಯ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪ್ರತಿ ತಿಂಗಳು ಅಷ್ಟೋ ಇಷ್ಟೋ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ.

ಉಳಿತಾಯ ಮಾಡಿದ ಹಣವನ್ನು ಮನೆಯ ಸಾಸಿವೆ ಡಬ್ಬಿಯಲ್ಲಿ ಹಾಕಿರುವುದಕ್ಕಿಂತ, MSII ಮೂಲಕ ಸರ್ಕಾರಿ ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ. ಸದ್ಯದಲ್ಲಿ ಸ್ವಸಹಾಯ ಗುಂಪುಗಳ (self help group) ಮೂಲಕ ಮಹಿಳೆಯರಿಗೆ ಚೀಟಿ ಹೂಡಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು.

ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆಗೆ ಸರ್ಕಾರ ನಿರ್ಧಾರ

Gruha Lakshmi Yojanaಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಿ (Check your gruha lakshmi status)

ಇಷ್ಟು ದಿನಗಳವರೆಗೆ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದಿತ್ತೆ ಹೊರತು, ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ನೀವು ಸರ್ಕಾರದ ಇದೊಂದು ವೆಬ್ಸೈಟ್ನಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಟೇಟಸ್ ಕೂಡ ತಿಳಿದುಕೊಳ್ಳಬಹುದು.

ಮಹಿಳೆಯರಿಗೆ ಗೃಹಲಕ್ಷ್ಮಿ ನಂತರ ಮತ್ತೊಂದು ಯೋಜನೆ; ಸಿಗಲಿದೆ 3 ಲಕ್ಷ ರೂಪಾಯಿ

ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ತಿಳಿದುಕೊಳ್ಳಿ

ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ಬ್ರೌಸರ್ ಗೆ ಹೋಗಿ ಮಾಹಿತಿ ಕಣಜ ಎಂದು ಟೈಪ್ ಮಾಡಿ. ಅಥವಾ https://mahitikanaja.karnataka.gov.in/Service/Service/3136 ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಮುಂದಿನ ಹಂತದಲ್ಲಿ ನಿಮಗೆ ಮುಖಪುಟ ಕರೆದುಕೊಂಡಾಗ ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ನಂತರ ಅರ್ಜಿದಾರರು ತಮ್ಮ 12 ಅಂಕೆಯ ರೇಷನ್ ಕಾರ್ಡ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು. ಬಳಿಕ ಸಬ್ಮಿಟ್ ಎಂದು ಕ್ಲಿಕ್ ಮಾಡಿ.

ಇಷ್ಟು ಮಾಡಿದ್ರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ನಿಮ್ಮ ಖಾತೆಯ ಎಲ್ಲಾ ವಿವರಗಳು ತಿಳಿಯುತ್ತದೆ. ನೀವು ಅರ್ಜಿ ಹಾಕಿರುವ ದಿನಾಂಕ ಅರ್ಜಿ ಸ್ವೀಕಾರಗೊಂಡ ದಿನಾಂಕ, ಇದುವರೆಗೆ ನಿಮ್ಮ ಖಾತೆಗೆ ಜಮಾ ಆಗಿರುವ ಹಣದ ಮೊತ್ತ ಹೀಗೆ ಎಲ್ಲಾ ಗೃಹಲಕ್ಷ್ಮಿ ಡಿ ಬಿ ಟಿ ಸ್ಟೇಟಸ್ ತಿಳಿಯಬಹುದು.

ಗೃಹಲಕ್ಷ್ಮಿ 5ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ

ಒಂದು ವೇಳೆ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ನಿಮ್ಮ ಗೃಹಲಕ್ಷ್ಮಿ ಖಾತೆಯ ಮಾಹಿತಿ ತಿಳಿಯದೆ ಇದ್ದಲ್ಲಿ, ಹಣ ಜಮಾ ಆಗಿದ್ಯೋ ಇಲ್ವೋ ಎಂಬುದನ್ನು ಬ್ಯಾಂಕಿಗೆ ಹೋಗಿ ನೇರವಾಗಿ ಖಾತೆಯನ್ನು ಚೆಕ್ ಮಾಡಿ ತಿಳಿಯಬಹುದು. ಅಥವಾ ಹತ್ತಿರದ ಸಿಡಿಪಿಓ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು. ಮಾಹಿತಿ ಕಣಜ ವೆಬ್ಸೈಟ್ ಚೆಕ್ ಮಾಡುವಾಗ ಕಚೇರಿ ಅವಧಿಯಲ್ಲಿಯೇ (ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00) ಚೆಕ್ ಮಾಡಿ.

An easy way to check the status of Gruha Lakshmi Money Deposit