ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆಗೆ ಸರ್ಕಾರ ನಿರ್ಧಾರ
ರೈತ (farmers ) ದೇಶದ ಬೆನ್ನೆಲುಬು. ಹಾಗಾಗಿ ರೈತರ ಅಭಿವೃದ್ಧಿಗಾಗಿ ಕೇಂದ್ರ (central government) ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದು ಸರ್ಕಾರಗಳ ಕರ್ತವ್ಯ ಕೂಡ.
ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ (Congress government) ಕೂಡ ರೈತರಿಗೆ ಸಿಹಿ ಸುದ್ದಿ ನೀಡಿದೆ. ರೈತರಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ರೂ. ಸಾಲ (Loan) ವಿತರಣೆ ಮಾಡಲು ಮುಂದಾಗಿದೆ.
ಮಹಿಳೆಯರಿಗೆ ಗೃಹಲಕ್ಷ್ಮಿ ನಂತರ ಮತ್ತೊಂದು ಯೋಜನೆ; ಸಿಗಲಿದೆ 3 ಲಕ್ಷ ರೂಪಾಯಿ
ರೈತರು ಆರ್ಥಿಕವಾಗಿ ಸಬಲರಾಗಬೇಕು (farmers financial stability) . ಬೆಳೆ ಬೆಳೆಯುವ ಸಲುವಾಗಿ ಹೆಚ್ಚಿನ ಬಡ್ಡಿದರದ (rate of interest) ನೀಡುವ ಸಾಲ ಪಡೆಯಬಾರದು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಬಡ್ಡಿರಹಿತವಾಗಿ ಸಾಲ (Loan) ನೀಡುವ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 5700 ಕೋಟಿ ರೂ. ಮೀಸಲಿಟ್ಟಿದೆ.
ಬಡ್ಡಿರಹಿತ ಸಾಲ: (loan without interest)
ರೈತರಿಗೆ ಹಲವು ಯೋಜನೆಗಳಲ್ಲಿ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರವು ವಿಶೇಷವಾಗಿ ಸಣ್ಣ ಹಾಗೂ ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಈ ಬಡ್ಡಿರಹಿತ ಸಾಲ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
ಸಣ್ಣ ಹಾಗೂ ಅತಿ ಸಣ್ಣ ರೈತರು ಬೆಳೆ ಬೆಳೆಯುವ ಉದ್ದೇಶಕ್ಕಾಗಿ ತಮ್ಮ ಊರಿನಲ್ಲಿರುವ ಬಡ್ಡಿಗೆ ಹಣ ನೀಡುವವರ ಬಳಿ ಸಾಲ ಮಾಡುತ್ತಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ.
ಗೃಹಲಕ್ಷ್ಮಿ 5ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ
ರಾಜ್ಯ ಸರ್ಕಾರವು ಕಳೆದ 5 ವರ್ಷಗಳಿಂದ ರೈತರಿಗಾಗಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ 2022-23ರಲ್ಲಿ 32.43 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸಹಕಾರಿ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ. ಸರ್ಕಾರವು ಸೂಚಿಸಿದಂತೆ ಸಾಲ ವಿತರಣೆಯಲ್ಲಿ ತೊಡಗಿರುವ ಸಹಕಾರಿ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರವು ಬಡ್ಡಿ ಸಹಾಯಧನ ಅಥವಾ ಸಹಾಯ ಧನವನ್ನು ನೀಡುತ್ತಿದೆ.
ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿ ವಿತರಣೆಗೆ ದಿನಾಂಕ ಫಿಕ್ಸ್
ಈ ರೀತಿ ಸಹಕಾರಿ ಸಂಘಗಳಿಂದ ಸಾಲ ನೀಡುವುದರಿಂದ ರೈತರು ಸಹ ಸುಲಭವಾಗಿ ಸಾಲ ಪಡೆದುಕೊಳ್ಳಲು ಸಹಕಾರಿಯಾಗಿದೆ. 2023-24 ರಿಂದ 2027-28ರ ವರೆಗೆ ಎಲ್ಲ ಸಹಕಾರಿ ಸಂಘಗಳಿಗೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಈ ಬಡ್ಡಿ ಸಹಾಯಧನ ಯೋಜನೆ ಅನ್ವಯವಾಗುತ್ತದೆ.
ಸಹಕಾರಿ ಬ್ಯಾಂಕ್ಗಳು 2001-೦2 ರಲ್ಲಿ 6.4೦ ಲಕ್ಷ ರೈತರಿಗೆ 438.36 ಕೋಟಿ ರೂ. ಬೆಳೆ ಸಾಲ (crop loan) ವಿತರಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದವು.2022-23 ನೇ ಸಾಲಿನಲ್ಲಿ 32.57 ಲಕ್ಷ ರೈತರಿಗೆ 16683.57 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿದೆ. ಪ್ರಸ್ತುತ ವರ್ಷ ಸಹಕಾರಿ ಸಂಘಗಳು ರಾಜ್ಯದಲ್ಲಿ ವಿತರಿಸಿದ ಬೆಳೆಸಾಲವು ಶೇ.55 ರಷ್ಟನ್ನು ಒದಗಿಸುತ್ತದೆ. ಇದು ರಾಷ್ಟ್ರೀಯ ಸರಾಸರಿಯ ಶೇ17ರಷ್ಟಾಗಿದೆ.
government has decided to issue Up to 1 lakh loan to Farmers without any interest
Our Whatsapp Channel is Live Now 👇