ಮಹಿಳೆಯರಿಗೆ ಗೃಹಲಕ್ಷ್ಮಿ ನಂತರ ಮತ್ತೊಂದು ಯೋಜನೆ; ಸಿಗಲಿದೆ 3 ಲಕ್ಷ ರೂಪಾಯಿ
ಒಂದು ಸರ್ಕಾರ ಎಂದ ಮೇಲೆ ಆ ರಾಜ್ಯದ ಕಟ್ಟ ಕಡೆಯ ಪ್ರಜೆ ಅಭಿವೃದ್ಧಿಯೂ ಅದರ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಸರ್ಕಾರಗಳು (government) , ರೈತರಿಗೆ (farmers) , ಕಾರ್ಮಿಕರಿಗೆ, ಹಿಂದುಳಿದ ಸಮಾಜದವರಿಗೆ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತವೆ. ಹೀಗೆ ಸರ್ಕಾರಗಳು ಮಹಿಳೆಯರ ಸಬಲೀಕರಣ (women empowerment) ಕ್ಕೂ ಆದ್ಯತೆ ನೀಡುತ್ತವೆ.
ಬದಲಾದ ಕಾಲಮಾನದಲ್ಲಿ ಮಹಿಳೆಯರು ಸಹ ಆರ್ಥಿಕವಾಗಿ ಸಬಲ (financial stability) ರಾಗಬೇಕು. ಅವರ ಸ್ವಂತ ಕಾಲ ಮೇಲೆ ಅವರು ನಿಂತು ಸಾಮಾಜಿಕವಾಗಿ ಗೌರವ ಪಡೆದುಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಗೃಹಲಕ್ಷ್ಮಿ 5ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಪ್ರಸ್ತುತ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ತಂದಿದೆ. ಇದೀಗ ಮಹಿಳೆರಿಗಾಗಿ ಮತ್ತೊಂದು ಯೋಜನೆ ಘೋಷಣೆ ಮಾಡಿದೆ.
ಹಾಗಾದರೆ ಆ ಯೋಜನೆ ಏನು? ಯಾರ್ಯಾರು ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಹಾಕುವ ವಿಧಾನ ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ ಜಾರಿ: (Udyogini scheme)
ಮಹಿಳೆಯರು ಇಂದು ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಅವರು ಸಹ ಸ್ವಾವಲಂಬಿಗಳಾಗಬೇಕು. ಸ್ವಂತ ಉದ್ಯಮ ಶುರುಮಾಡಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮೂರು ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.
ಈ ಸಹಾಯಧನವನ್ನು ಬ್ಯಾಂಕುಗಳು (banks) ಹಾಗೂ ವಿವಿಧ ನಿಗಮ ಮಂಡಳಿಗಳ ಮೂಲಕ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳಾದವರು ಸ್ವ-ಉದ್ಯೋಗ (own business) ಶುರು ಮಾಡಬಹುದಾಗಿದೆ.
ಸಾಲಕ್ಕಾಗಿ (Loan) ಯಾವುದೇ ಬ್ಯಾಂಕ್ಗಳಿಗೆ ಅಲೆದಾಡುವ ಸ್ಥಿತಿ ಇರುವುದಿಲ್ಲ. ಅಲ್ಲದೆ ಬಡ್ಡಿ ರಹಿತವಾಗಿ ನೀಡುವುದರಿಂದ ಸಾಲ ಮರುಪಾವತಿ (Loan Re Payment) ಸಹ ಸುಲಭವಾಗಿ ಮಾಡಬಹುದಾಗಿದೆ.
ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿ ವಿತರಣೆಗೆ ದಿನಾಂಕ ಫಿಕ್ಸ್
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು (qualifications to apply)
ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯವು ವಾರ್ಷಿಕವಾಗಿ 1.5 ಲಕ್ಷ ರೂ. ಮೀರಿರಬಾರದು. 18-55 ವರ್ಷದ ಒಳಗಿನ ಮಹಿಳೆಯರು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.
ಮೂರು ಲಕ್ಷ ರೂ. ವರೆಗೆ ಬಡ್ಡಿರ ರಹಿತ ಸಾಲ (Loan) ಸಿಗಲಿದೆ. ಮಹಿಳೆಯರು ಯಾವ ಉದ್ಯಮ ಆರಂಭಿಸಲು ಇಚ್ಚಿಸುತ್ತಾರೆ ಎನ್ನುವ ಮಾಹಿತಿ ನೀಡಿ ಸಾಲ (loan) ಪಡೆದುಕೊಳ್ಳಬಹುದಾಗಿದೆ.
ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ
ಸಾಲ ಮಂಜೂರಿಗೆ ಮುನ್ನ ಮಹಿಳೆಯರಿಗೆ 3 – 6 ದಿನಗಳ ಇಡಿಪಿ ತರಬೇತಿ ನೀಡಲಾಗುತ್ತದೆ. ಮಹಿಳೆಯರು ಉದ್ಯಮ ಶುರು ಮಾಡುವ ಸಲುವಾಗಿ ಹೆಚ್ಚಿನ ಬಡ್ಡಿದರದ ಸಾಲ ಪಡೆಯುವುದು ಹಾಗೂ ಸ್ಥಳೀಯ ಲೇವಾದೇವಿದಾರರಿಂದ ಸಾಲ ಪಡೆದು ನಂತರ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
ಈ ಯೋಜನೆ ಅಡಿಯಲ್ಲಿ ಸಾಲ ಪಡೆದ ಮಹಿಳೆಯರು ಟೈಲರಿಂಗ್, ಸಣ್ಣ ಟಿ ಅಂಗಡಿ, ಹೂವಿನ ವ್ಯಾಪಾರ, ತರಕಾರಿ, ಹಣ್ಣಿನ ವ್ಯಾಪಾರ ಹೀಗೆ ಸಣ್ಣ ವ್ಯಾಪಾರ ಇಲ್ಲವೇ ಕೌಶಲ್ಯ ಪೂರ್ಣವಾದ ಸಣ್ಣ ಪುಟ್ಟ ಉದ್ಯಮ ಆರಂಭಿಸಿ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು. ಈ ಮೂಲಕ ಸಮಾಜದಲ್ಲಿ ಗೌರವ ಸಂಪಾದಿಸಿ, ಉತ್ತಮ ಬದುಕು ಕಟ್ಟಿಕೊಳ್ಳಬಹುದಾಗಿದೆ.
ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ
Another scheme after Gruha Lakshmi Scheme for women
Our Whatsapp Channel is Live Now 👇