ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ

ಉಚಿತವಾಗಿ ಪಡಿತರ (ration) ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಹೊಂದಿರುವವರು ನ್ಯಾಯಬೆಲೆ ಅಂಗಡಿ (fair price shop) ಗೆ ಹೋಗಲೇಬೇಕು

ಉಚಿತವಾಗಿ ಪಡಿತರ (ration) ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಹೊಂದಿರುವವರು ನ್ಯಾಯಬೆಲೆ ಅಂಗಡಿ (fair price shop) ಗೆ ಹೋಗಲೇಬೇಕು. ಇನ್ನು ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಕನಿಷ್ಠ ಇಷ್ಟು ಪಡಿತರ ಚೀಟಿ ಗಳಿಗೆ ಪಡಿತರ ವಿತರಣೆ ಮಾಡಬೇಕು ಎನ್ನುವ ನಿಯಮ ಇರುತ್ತದೆ.

ಒಂದು ವೇಳೆ ನ್ಯಾಯ ಬೆಲೆ ಅಂಗಡಿಯಲ್ಲಿ ಇದಕ್ಕಿಂತ ಹೆಚ್ಚಿನ ಪಡಿತರ ಚೀಟಿ ಇದ್ದರೆ ಆಗ ಇನ್ನೊಂದು ನ್ಯಾಯಬೆಲೆ ಅಂಗಡಿಯನ್ನು ಅದೇ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ.

ಸ್ಥಳೀಯ ಸ್ವಸಹಾಯ ಸಂಘ (local self help group) ಮತ್ತು ಸಂಸ್ಥೆಗಳಿಂದ ನ್ಯಾಯ ಬೆಲೆ ಅಂಗಡಿ ಆರಂಭಿಸಲು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ - Kannada News

ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ

ಯಾವೆಲ್ಲ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬಹುದು ಗೊತ್ತಾ? (Where you can start fair price shop?)

ರಾಮೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ – 600 ಪಡಿತರ ಚೀಟಿ

ತಾವರೆಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿ – 800 ಪಡಿತರ ಚೀಟಿ

ಅಗರ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮೀಪುರ ಪ್ರದೇಶ – 600 ಪ.ಚೀಟಿ,

ಅಗರ ಗ್ರಾ.ಪಂ ವ್ಯಾಪ್ತಿಯ ಬಂಜಾರಪಾಳ್ಯ ಪ್ರದೇಶ – 600 ಪ.ಚೀಟಿ,

ವಾರ್ಡ್ 192 ಬೇಗೂರು – 800 ಪ.ಚೀಟಿ

ವಾರ್ಡ್ 187 ಪುಟ್ಟೇನಹಳ್ಳಿ – 800 ಪ.ಚೀಟಿ

ವಾರ್ಡ್ 190 ಮಂಗಮ್ಮನ ಪಾಳ್ಯ – 800 ಪ.ಚೀಟಿ

ವಾರ್ಡ್ 194 ಗೊಟ್ಟಿಗೆರೆ 800 ಪ.ಚೀಟಿ.

ಇಷ್ಟು ಪಡಿತರ ಚೀಟಿ ಹೊಂದಿರುವ ಪ್ರದೇಶಗಳಿಗೆ ಒಂದರಂತೆ ನ್ಯಾಯಬೆಲೆ ಅಂಗಡಿಯನ್ನು ಹೊಸದಾಗಿ ಆರಂಭಿಸಲು ಆಹ್ವಾನ ನೀಡಲಾಗಿದೆ.

ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

Ration Shopಯಾರು ಅರ್ಜಿ ಸಲ್ಲಿಸಬಹುದು? (Who can apply)

ಬೆಂಗಳೂರಿನ (Bengaluru) ವಿವಿಧ ಪ್ರದೇಶದಲ್ಲಿ ಆರಂಭಿಸಬಹುದಾದ ನ್ಯಾಯಬೆಲೆ ಅಂಗಡಿಗೆ ಈ ಕೆಳಗಿನ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಹಿಳಾ ವಿವಿಧೋದ್ದೇಶ ಸಂಘಗಳು

ತೋಟಗಾರಿಕೆ ಉತ್ಪನ್ನ ಬಳಕೆದಾರರ ಸಂಘ,

ನೊಂದಾಯಿತ ಪ್ರಾಥಮಿಕ ಬಳಕೆದಾರರ ಸಂಘ

ಕೃಷಿ ಪತ್ತಿನ ಸಹಕಾರಿ ಸಂಘ

ತಾಲೂಕು ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ

ಆದಿವಾಸಿ ವಿವಿದ್ಧೋದ್ದೇಶ ಸಹಕಾರಿ ಸಂಘ

ನೊಂದಾಯಿತ ನೌಕರರ ಸಹಕಾರಿ ಸಂಘ

ಸಹಕಾರಿ ಬ್ಯಾಂಕುಗಳು

ಸ್ತ್ರೀಶಕ್ತಿ ಗುಂಪುಗಳು

ವಿಕಲಚೇತನರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು

ಈ ಮೊದಲದ ಸಂಘ ಸಂಸ್ಥೆಗಳ ನೋಂದಾಯಿಸಿಕೊಂಡಿರುವ ಜನರು ನ್ಯಾಯಬೆಲೆ ಅಂಗಡಿ (Ration Shop) ತೆರೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯೋಕೆ ಕಡ್ಡಾಯ ರೂಲ್ಸ್ ಜಾರಿ!

ಅರ್ಜಿ ಸಲ್ಲಿಸುವ ವಿಧಾನ! (How to apply)

ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸೂಕ್ತ ದಾಖಲೆಗಳ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ!

ವಿಳಾಸ (Address) : ಉಪನಿರ್ದೇಶಕರು, ಅಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ನಗರ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last date to apply)

ಫೆಬ್ರುವರಿ 3 ತಾರೀಖಿನಂದು ಸಂಜೆ 5:00 ಒಳಗೆ ಅರ್ಜಿ ಕಳುಹಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Opportunity to open a new Ration shop, Apply Today

Follow us On

FaceBook Google News