ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಫ್ರೂಟ್ಸ್ ತಂತ್ರಾಂಶ (FRUIRS) software) ದಲ್ಲಿ ಇರುವ ರೈತರ (farmer) ಖಾತೆಗೆ (Bank Account) ಮೊದಲ ಕಂತಿನ ಪರಿಹಾರ ನಿಧಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಫಲಾನುಭವಿ ರೈತರ ಖಾತೆಗೆ ಜನವರಿ 5, 2024 ರಂದು ಬರ ಪರಿಹಾರ ನಿಧಿ (Drought Relief Fund) ಜಮಾ ಮಾಡಲಾಗಿದ್ದು, ರೈತರಿಗೆ ಜನ 2,000ಗಳನ್ನು ಖಾತೆಗೆ ವರ್ಗಾವಣೆ (DBT) ಮಾಡಲಾಗಿದೆ.
ಫ್ರೂಟ್ಸ್ ತಂತ್ರಾಂಶ (FRUIRS) software) ದಲ್ಲಿ ದಾಖಲಿಸಿರುವ ಮಾಹಿತಿಯ ಪ್ರಕಾರ ಬರಪೀಡಿತ ಪ್ರದೇಶದಲ್ಲಿ ವಾಸಿಸುವ ರೈತರ (farmer) ಖಾತೆಗೆ (Bank Account) ಮೊದಲ ಕಂತಿನ ಪರಿಹಾರ ನಿಧಿಯಾಗಿ ರೂ. 2,000ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯೋಕೆ ಕಡ್ಡಾಯ ರೂಲ್ಸ್ ಜಾರಿ!
ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲು!
ಬರಪೀಡಿತ ಪ್ರದೇಶದ ರೈತರಿಗೆ ಹಣ ವರ್ಗಾವಣೆ (Money Deposit) ಆಗಿರುವುದರ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ, ಫ್ರೂಟ್ಸ್ ತಂತ್ರಾಂಶ ಅಂಶದಲ್ಲಿ ಯಾವ ರೈತರು FID ಹೊಂದಿದ್ದಾರೋ ಅಂತವರ ಖಾತೆಗೆ (Bank Account) ಹಣ ಜಮಾ ಮಾಡಲಾಗಿದೆ, ನೀವು ಈ ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ಮೊಬೈಲ್ ಮೂಲಕವೇ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಮೊಬೈಲ್ ನಲ್ಲಿ ತಿಳಿಯಿರಿ ಡಿಬಿಟಿ ಸ್ಟೇಟಸ್! (Check your dbt status in mobile)
ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ನೋಂದಾವಣೆ ಮಾಡಿಕೊಂಡಿರುವ ಹೆಸರಿನ ರೀತಿಯಲ್ಲಿ ಬರ ಪರಿಹಾರ ನಿಧಿಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಪಿ.ಎಂ ಕಿಸಾನ್ ಯೋಜನೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಬರ ಪರಿಹಾರವೂ ಕೂಡ ನಿಮ್ಮ ಖಾತೆಗೆ ಜಮಾ ಆಗುವ ಸಾಧ್ಯತೆ ಇರುತ್ತದೆ.
ಇಂತಹ ರೇಷನ್ ಕಾರ್ಡ್ ಕುಟುಂಬಗಳಿಗೆ ಇನ್ಮುಂದೆ ಸಿಗೋದಿಲ್ಲ ಉಚಿತ ರೇಷನ್!
https://fruitspmk.karnataka.gov.in/MISReport/FarmerDeclarationReport.aspx ಪಿ ಎಂ ಫ್ರೂಟ್ಸ್ ತಂತ್ರಜ್ಞಾನದ ವೆಬ್ಸೈಟ್ಗೆ ಭೇಟಿ ನೀಡಿ.
ನಂತರ ಈ ವೆಬ್ ಸೈಟ್ ನಲ್ಲಿ ಕೇಳಲಾಗಿರುವ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಆಯ್ಕೆ ಮಾಡಿ ಸಲ್ಲಿಸು ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ
ಈಗ ಫಲಾನುಭವಿಗಳ ಲಿಸ್ಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಇದ್ದರೆ ಯಾವುದೇ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ಬರ ಪರಿಹಾರ ನಿಧಿ ರೂ.2,000 ಜಮಾ ಆಗುತ್ತದೆ ಎಂದು ಅರ್ಥ.
ಕೃಷಿ ಮಾಡಲು ಜಮೀನು ಇಲ್ಲದ ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು! ಬಿಗ್ ಅಪ್ಡೇಟ್
ಆಧಾರ್ ನಂಬರ್ ಹಾಕಿ FID ಖಚಿತಪಡಿಸಿಕೊಳ್ಳಿ.
FID ಹೊಂದಿರುವ ರೈತರಿಗೆ ಮಾತ್ರ ಬರ ಪರಿಹಾರದ ನಿಧಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಇದಕ್ಕಾಗಿ ನೀವು ನಿಮ್ಮ ಹೆಸರಿನಲ್ಲಿ FID ಇದಿಯೋ ಇಲ್ಲವೋ ಎಂಬುದನ್ನು ಆಧಾರ್ ನಂಬರ್ ಹಾಕಿ ತಿಳಿದುಕೊಳ್ಳಬಹುದು
https://fruitspmk.karnataka.gov.in/MISReport/GetDetailsByAadhaar.aspx ಈ ವೆಬ್ಸೈಟ್‌ಗೆ ತೆರಳಿ, ನಿಮ್ಮ ಆಧಾರ್ ಸಂಖ್ಯೆ (Aadhaar number) ಯನ್ನು ನಮೂದಿಸಿ, ಸರ್ಚ್ ಎಂದು ಕ್ಲಿಕ್ ಮಾಡಿ.
ಈಗ 16 ಅಂಕಿಯ ಫ್ರೂಟ್ಸ್ ಐಡಿ ಕಾಣಿಸುತ್ತದೆ. ಒಂದು ವೇಳೆ ಡಾಟಾ ನಾಟ್ ಫೌಂಡ್ (data not found) ಎನ್ನುವ ಸಂದೇಶ ಕಾಣಿಸಿದರೆ ನಿಮ್ಮ ಹೆಸರಿನಲ್ಲಿ FID ರಚನೆ ಆಗಿಲ್ಲ ಎಂದು ಅರ್ಥವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಹತ್ತಿರದ ರೈತ ಕೇಂದ್ರಕ್ಕೆ ಹೋಗಿ ತಕ್ಷಣವೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿ.
Release of list of drought relief beneficiary farmers