ಇಂತಹ ರೇಷನ್ ಕಾರ್ಡ್ ಕುಟುಂಬಗಳಿಗೆ ಇನ್ಮುಂದೆ ಸಿಗೋದಿಲ್ಲ ಉಚಿತ ರೇಷನ್!

ರೇಷನ್ ಕಾರ್ಡ್ ಇರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಯೋಜನೆ ಪ್ರಯೋಜನ ಪಡೆಯಬಹುದು ಹಾಗೂ ಉಚಿತವಾಗಿ ಪಡಿತರವನ್ನು ಕೂಡ ನೀಡಲಾಗುತ್ತದೆ.

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (state government guarantee schemes) ಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಬಹಳ ಮುಖ್ಯವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಯಾರು ಅಕ್ರಮವಾಗಿ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುತ್ತಾರೋ ಅಂತವರಿಗೆ ಸರ್ಕಾರ ಈಗ ಬಿಸಿ ಮುಟ್ಟಿಸಿದೆ.

The ration card of such families has been cancelled

ಕೃಷಿ ಮಾಡಲು ಜಮೀನು ಇಲ್ಲದ ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು! ಬಿಗ್ ಅಪ್ಡೇಟ್

ಇಂಥ ಕುಟುಂಬಗಳಿಗೆ ಇಲ್ಲ ರೇಷನ್ ಕಾರ್ಡ್! (Ration card cancellation)

ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಹಾಗೂ ಕಡು ಬಡವರಿಗೆ ಯಾವುದೇ ಕಾರಣಕ್ಕೂ ಹಸಿವಿನಿಂದ ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ (central government) ದಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡು ವಿತರಣೆ ಮಾಡಲಾಗಿದೆ.

ಈ ಕಾರ್ಡ್ ಗಳು ಇರುವ ಕುಟುಂಬಗಳಿಗೆ ಸರ್ಕಾರದಿಂದ ಉಚಿತ ಯೋಜನೆ ಪ್ರಯೋಜನ ಪಡೆಯಬಹುದು ಹಾಗೂ ಉಚಿತವಾಗಿ ಪಡಿತರವನ್ನು ಕೂಡ ನೀಡಲಾಗುತ್ತದೆ.

ಇನ್ನು ಬಡತನ ರೇಖೆಗಿಂತ ಮೇಲಿರುವವರು, ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಎಪಿಎಲ್ ಕಾರ್ಡ್ (APL Card) ಅನ್ನು ಪಡೆಯಬಹುದು. ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಪಡಿತರವಾಗಲಿ, ಅಥವಾ ಉಚಿತ ಯೋಜನೆಗಳಾಗಲಿ ಸಿಗುವುದಿಲ್ಲ ಆದರೆ ರೇಷನ್ ಕಾರ್ಡ್ ಅನ್ನು ಗುರುತಿನ ಚೀಟಿಗಾಗಿ ಬಳಸಿಕೊಳ್ಳಬಹುದು.

ಗೃಹಲಕ್ಷ್ಮಿ 4ನೇ ಕಂತು ಬಿಡುಗಡೆ, 5ನೇ ಕಂತಿನ ಹಣಕ್ಕೆ ನಿಯಮದಲ್ಲಿ ಬದಲಾವಣೆ

ಸರ್ಕಾರದ ಮಾನದಂಡ ಗಮನಿಸದೇ ಇರುವವರಿಗೆ ಉಚಿತ ರೇಷನ್ ಇಲ್ಲ!

ಉಚಿತ ರೇಷನ್ (free ration) ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ ಇಂದು ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ನಿಜವಾದ ಫಲಾನುಭವಿಗಳಿಗೆ ಉಚಿತ ಪಡಿತರ ಸಿಗುತ್ತಿಲ್ಲ. ಇದನ್ನು ಗಮನಿಸಿರುವ ಸರ್ಕಾರ ಇಂತಹ ಕುಟುಂಬಗಳಿಗೆ ಇನ್ನು ಮುಂದೆ ಉಚಿತ ಪಡಿತರ ಸಿಗದೇ ಇರುವ ರೀತಿಯಲ್ಲಿ ರೇಷನ್ ಕಾರ್ಡ್ ರದ್ದುಪಡಿ ಮಾಡಲು ಮುಂದಾಗಿದೆ.

ಯಾರು ಸರ್ಕಾರದ ಮಾನದಂಡಗಳನ್ನು ಗಮನಿಸದೆ, ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೋ ಅಂತವರಿಗೆ ಸರ್ಕಾರ ರೇಷನ್ ಕಾರ್ಡ್ ರದ್ದುಪಡಿ ಮಾಡಲು ಆದೇಶ ಹೊರಡಿಸಿದೆ. ಪ್ರತಿ ತಿಂಗಳು ಜಿಲ್ಲಾವಾರು ಪರಿಶೀಲನೆ ನಡೆಸಿ ರೇಷನ್ ಕಾರ್ಡ್ ರದ್ದುಪಡಿ ಮಾಡಲಾಗುತ್ತಿದೆ. ಅದೇ ರೀತಿ ಈಗಾಗಲೇ ಅರ್ಜಿ ಸಲ್ಲಿಸಿದ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.

ಹೊಸ ರೇಷನ್ ಕಾರ್ಡ್ ವಿತರಣೆ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಚೆಕ್ ಮಾಡಿ

ರೇಷನ್ ಕಾರ್ಡ್ ರದ್ದುಪಡಿ ಸ್ಟೇಟಸ್ (How to know ration card status)

BPL Ration Card ನೀವು ನಮ್ಮ ರೇಷನ್ ಕಾರ್ಡ್ ರದ್ದುಪಡಿ ಆಗಿದೆಯೋ ಇಲ್ಲವೋ ಎಂಬುದನ್ನು ಆನ್ಲೈನ್ (online ) ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

*ಇದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ. ಇಲ್ಲಿ ನಿಮಗೆ ಎಡಭಾಗದಲ್ಲಿ ಮೂರು ಲೈನ್ಗಳು ಲಿಂಕ್ ಆಗುವುದನ್ನು ನೋಡಬಹುದು.

*ಈಗ ಆನ್ಲೈನ್ ಗಳ ಮೇಲೆ ಕ್ಲಿಕ್ ಮಾಡಿ ಈ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

*ಈ ಸ್ಥಿತಿಯ ಮೇಲೆ ಕ್ಲಿಕ್ ಮಾಡಿದರೆ, ‘ರದ್ದುಪಡಿಸಲಾಗಿರುವ ಅಥವಾ ತಡೆಹಿಡಿಯಲಾಗಿರುವ ಪಡಿತರ ಚೀಟಿ’ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

*ಈಗ ಬೇರೆ ಬೇರೆ ಜಿಲ್ಲೆಗಳನ್ನು ತೋರಿಸುವಂತ ಲಿಂಕ್ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಹಾಗೂ ಗ್ರಾಮ, ಹೋಬಳಿ ಮೊದಲಾದ ವಿವರಗಳನ್ನು ನಮೂದಿಸಿದರೆ ರದ್ದುಪಡಿ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ ಎಂದು ಅರ್ಥ.

ಹೊಸ ರೇಷನ್ ಕಾರ್ಡ್ ವಿತರಣೆ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಚೆಕ್ ಮಾಡಿ

Such ration card families will no longer get free ration