Karnataka NewsBangalore News

ಹೊಸ ರೇಷನ್ ಕಾರ್ಡ್ ವಿತರಣೆ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಚೆಕ್ ಮಾಡಿ

ಯಾವುದೇ ದೇಶದ ಪ್ರಜೆಯಾಗಿರಲಿ ಆ ದೇಶ ಹೇಳುವ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್(Aadhaar Card) , ಪಾನ್ ಕಾರ್ಡ್, ಪಾಸ್ಪೋರ್ಟ್, ಚಾಲನಾ ಪರವಾನಿಗೆ ಹೀಗೆ ಹಲವು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇವುಗಳ ಸಾಲಿಗೆ ಪಡಿತರ ಚೀಟಿ (Ration Card) ಯು ಸೇರುತ್ತದೆ. ಅರ್ಹ ಎಲ್ಲರೂ ಪಡಿತರ ಚೀಟಿಯನ್ನು ಹೊಂದಿರಬೇಕು.

ಬಿಪಿಎಲ್ ಪಡಿತರ ಚೀಟಿ (BPL Ration Card) ಹೊಂದಿರುವುದರಿಂದ ಪ್ರತಿ ತಿಂಗಳು ಪಡಿತರ ಪಡೆಯುವುದರ ಜೊತೆ ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ರಿಯಾಯತಿ ಪಡೆದುಕೊಳ್ಳಬಹುದಾಗಿದೆ. ಹಾಗಾಗಿಯೇ ಹಲವರು ಬಿಪಿಎಲ್ ಪಡಿತರ ಚೀಟಿ ಮಾಡಿಸಲು ಮುಂದಾಗಿದ್ದಾರೆ. ಇದೀಗ ಸರ್ಕಾರವು ಹೊಸ ಪಡಿತರ ಚೀಟಿದಾರರ ಪಟ್ಟಿ ಬಿಡುಗಡೆ ಮಾಡಿದೆ.

The government has given good news to all families with ration cards

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಸರ್ಕಾರದ ಅಪ್ಡೇಟ್

ರಾಜ್ಯದ ಸಾಮಾನ್ಯ ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿರುತ್ತಾರೆ. ಕೆಲವರು ಈ ವರ್ಷ ಹೊಸ ಪಡಿತರ ಚೀಟಿಗೆ (new ration card) ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿ ಮಂಜೂರಾದ ಪಡಿತರ ಚೀಟಿದಾರರ ಹೆಸರನ್ನು ಸರ್ಕಾರ ಬಿಡುಗಡೆ ಮಾಡಿದೆ. ಅರ್ಹತೆಯ ಆಧಾರದ ಮೇಲೆ ಪಡಿತರ ಚೀಟಿ ನೀಡಲಾಗುತ್ತದೆ. ಇದು ರಾಜ್ಯ ಸರ್ಕಾರದ ಕರ್ತವ್ಯವೂ ಹೌದು.

ಬಡತನ ರೇಖೆಗಿಂತ ಕೆಳಗಿರುವ (below poverty line) ಲಕ್ಷಾಂತರ ಜನರನ್ನು ಗುರುತಿಸಿ ಅವರಿಗೆ ಸೌಲಭ್ಯ ನೀಡಬೇಕು ಎನ್ನುವ ಉದ್ದೇಶದಿಂದ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಈ ಪಡಿತರ ಚೀಟಿ ಇದ್ದವರು ಕಾಲ ಕಾಲಕ್ಕೆ ಪಡಿತರ ಪಡೆದುಕೊಳ್ಳಬೇಕು. ಈ ಮೂಲಕ ಯಾರೂ ಕೂಡ ಹಸಿವಿನಿಂದ ಇರಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ರಾಜ್ಯ ಸರ್ಕಾರ ನೀಡುವ ಹಲವಾರು ಯೋಜನೆಗಳಿಗೆ ಇದನ್ನೇ ಮಾನದಂಡವಾಗಿ ಪರಿಗಣಿಸಲಾಗಿದೆ.

ರೇಷನ್ ಕಾರ್ಡ್ ಸಂಖ್ಯೆ ಹಾಕಿ ಗೃಹಲಕ್ಷ್ಮಿ ಯೋಜನೆ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

BPL Ration Cardಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ನೋಡೋದು ಹೇಗೆ?: (how to check Ration card list)

ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹೊಸ ಪಡಿತರ ಚೀಟಿ ಮಂಜೂರು ಮಾಡಿದ ಗ್ರಾಹಕರ ಹೆಸರನ್ನು ಪ್ರಕಟಿಸಿದೆ. ಅದನ್ನು ನೋಡುವುದು ಹೀಗೆ.

ಮೊದಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.

ಅಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಹುಡುಕು ಬಟನ್ ಒತ್ತಬೇಕು.

ಮುಖಪುಟದ ಮೂಲೆಯಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹಾಗೂ ರೇಶನ್ ಕಾರ್ಡ್ 2024 ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ಪಡಿತರದಾರರ ವಿವರಗಳು, ವಿಭಾಗ, ಜಿಲ್ಲೆ, ತಾಲೂಕು, ಗ್ರಾಮವನ್ನು ಭರ್ತಿ ಮಾಡಬೇಕು. ನಂತರ ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಗೃಹಲಕ್ಷ್ಮಿ ಯೋಜನೆ ಅರ್ಜಿ ಮತ್ತೆ ಪರಿಶೀಲನೆ, ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ

ಈಗ ನಿಮ್ಮ ಮುಂದೆ ನಿಮ್ಮ ಗ್ರಾಮದಲ್ಲಿ ಯಾರ್ಯಾರು ಪಡಿತರ ಚೀಟಿ ಪಡೆದುಕೊಂಡಿದ್ದಾರೆ ಎನ್ನುವ ಲಿಸ್ಟ್ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

New ration card Beneficiaries list release, Check your name

Our Whatsapp Channel is Live Now 👇

Whatsapp Channel

Related Stories