ಜುಲೈ 19, 2023ರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಗಸ್ಟ್ 30ರ ಒಳಗೆ ಸುಮಾರು 1.10 ಕೋಟಿ ಅರ್ಜಿಗಳು ಸಲ್ಲಿಕೆ ಆಗಿದ್ದವು.

ಈಗ ಒಟ್ಟು 1.17 ಕೋಟಿ, ಅರ್ಜಿಗಳು (application) ಸಲ್ಲಿಕೆ ಆಗಿದ್ದು ಫಲಾನುಭವಿಗಳಿಗೆ (beneficiaries) ಈಗಾಗಲೇ ನಾಲ್ಕು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಮಹಿಳೆಯರು 5ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಇದ್ದಾರೆ.

Gruha Lakshmi pending money is also deposited for the women of this district

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣವೂ ಸಿಗೋಲ್ಲ

ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ವಾ?

ಕೆಲವು ಮಹಿಳೆಯರು (women) ತಮ್ಮ ಆಧಾರ್ ಕಾರ್ಡ್ (Aadhaar card) ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ (bank account link) ಮಾಡಿಕೊಳ್ಳದೆ ಇರುವ ಕಾರಣಕ್ಕೆ, ಇ ಕೆ ವೈ ಸಿ (E-KYC) ಮಾಡಿಸಿಕೊಳ್ಳದೆ ಇರುವ ಕಾರಣಕ್ಕೆ, ರೇಷನ್ ಕಾರ್ಡ್ (ration card correction) ನಲ್ಲಿ ತಿದ್ದುಪಡಿ ಮಾಡಿಕೊಳ್ಳದೆ ಇರುವ ಕಾರಣಕ್ಕೆ ಹಾಗೂ ಸರ್ಕಾರದ ಕಡೆಯಿಂದ ಆಗಿರುವ ತಾಂತ್ರಿಕ ದೋಷಗಳ (technical issues) ಕಾರಣದಿಂದಾಗಿ ಇನ್ನೂ ಕೂಡ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಹಾಗೂ ಕ್ಯಾಂಪ್ (camp) ಗಳ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸಮಸ್ಯೆಗೆ ಪರಿಹಾರವನ್ನು ನೀಡಿದೆ. ಇದುವರೆಗೆ ಮೂರು ಕಂತಿನ ಹಣ ಪಡೆಯದೆ ಇರುವವರು ಕೂಡ, ನಾಲ್ಕನೇ ಕಂತಿನ 2,000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಉಚಿತ ಹೊಲಿಗೆ ಯಂತ್ರ ವಿತರಣೆ; ಈ ದಾಖಲೆಯೊಂದಿಗೆ ಮಹಿಳೆಯರು ಅರ್ಜಿ ಸಲ್ಲಿಸಿ

Gruha Lakshmi Yojanaಮತ್ತೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಬಹುದು (Apply for Gruha lakshmi scheme)

ಗೃಹಲಕ್ಷ್ಮಿ ಹಣ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿವೆ. ಮೊದಲ ಕಂತಿನ ಹಣ ಬಿಡುಗಡೆ ಆಗಿ ಉಳಿದ ಕಂತಿನ ಹಣ ಬಿಡುಗಡೆ ಆಗದೇ ಇರುವ ಸಮಸ್ಯೆಗಳು ಆಗಿವೆ.

ಕೆಲವು ಸರ್ಕಾರದ ನಿಯಮಗಳ ಅನುಸಾರ, 2000ಗಳನ್ನು ಪಡೆದುಕೊಳ್ಳಲು, ಮಹಿಳೆಯರು ಅರ್ಜಿ ಸಲ್ಲಿಸಬೇಕಿತ್ತು. ಕೆಲವು ಲೋಪ ದೋಷಗಳಿಂದಾಗಿ ನಿಮ್ಮ ಖಾತೆಗೆ (Bank Account) ಹಣ ಬಾರದೆ ಇದ್ದರೆ ಈಗ ನೀವು ಮತ್ತೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ.

ನೀವು ನಿಮ್ಮ ಹೊಸ ರೇಷನ್ ಕಾರ್ಡ್ ಪಡೆದುಕೊಂಡಿದ್ದರೆ, ಅಥವಾ ಸರ್ಕಾರದ ನಿಯಮಾನುಸಾರ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ, ಈಗ ನೀವು ಹೊಸದಾಗಿ ಅರ್ಜಿ ಸಲ್ಲಿಸಬಹುದು.

ಕಳೆದ ಕೆಲವು ದಿನಗಳಿಂದ ಹೊಸ ಗೃಹಲಕ್ಷ್ಮಿ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮಹಿಳೆಯರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಯುವನಿಧಿ ಯೋಜನೆ ಬೆನ್ನಲ್ಲೇ ಯುವಕ-ಯುವತಿಯರಿಗೆ ಇನ್ನೊಂದು ಯೋಜನೆ ಜಾರಿ

ಹೀಗೆ ಅರ್ಜಿ ಸಲ್ಲಿಸಿ! (Apply Gruha lakshmi scheme)

ಸದ್ಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಆನ್ಲೈನ್ ಪ್ರಕ್ರಿಯೆ (online process) ಇಲ್ಲ ನೀವು ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಮೊಬೈಲ್ ಸಂಖ್ಯೆ ಇವಿಷ್ಟು ದಾಖಲೆಗಳ ಸಹಿತ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಕ್ಕೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಪಡೆದುಕೊಳ್ಳುವುದನ್ನು ಮರೆಯಬೇಡಿ.

ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ, ಆನ್ಲೈನ್ ನಲ್ಲೇ ಅಪ್ಡೇಟ್ ಮಾಡಿಕೊಳ್ಳಿ

Gruha Lakshmi Yojana application verification and new application submission