ಯುವನಿಧಿ ಯೋಜನೆ ಬೆನ್ನಲ್ಲೇ ಯುವಕ-ಯುವತಿಯರಿಗೆ ಇನ್ನೊಂದು ಯೋಜನೆ ಜಾರಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ; ಯುವ ನಿಧಿ ಯೋಜನೆಯ ಜೊತೆ ಇನ್ನೊಂದು ಯೋಜನೆಯೂ ಜಾರಿ

ನಮ್ಮ ದೇಶದಲ್ಲಿ ನಿರುದ್ಯೋಗ (unemployment) ವು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿ ವರ್ಷವು ಲಕ್ಷಾಂತರ ವಿದ್ಯಾರ್ಥಿ (students) ಗಳು ತಮ್ಮ ವಿದ್ಯಾಭ್ಯಾಸ (education) ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದಾರೆ. ಆದರೆ ಇವರಲ್ಲಿ ಅನೇಕರಿಗೆ ಅವರು ಕಲಿತ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಿ ಅಲೆದಾಡುವಂತಾಗಿದೆ.

ಈ ನಿರುದ್ಯೋಗ ಸಮಸ್ಯೆ (unemployment problems) ನಿವಾರಿಸಲು ಸರ್ಕಾರವು ಸಹ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅನೇಕ ಕಡೆ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಖಾಸಗಿ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಅವರು ನಮ್ಮ ರಾಜ್ಯದಲ್ಲಿಯೇ ಕಂಪನಿ ಸ್ಥಾಪನೆ ಮಾಡುವಂತೆ ವಿನಂತಿ ಮಾಡಲಾಗುತ್ತಿದೆ.

ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ, ಆನ್ಲೈನ್ ನಲ್ಲೇ ಅಪ್ಡೇಟ್ ಮಾಡಿಕೊಳ್ಳಿ

ಯುವನಿಧಿ ಯೋಜನೆ ಬೆನ್ನಲ್ಲೇ ಯುವಕ-ಯುವತಿಯರಿಗೆ ಇನ್ನೊಂದು ಯೋಜನೆ ಜಾರಿ - Kannada News

ಇದರ ಜೊತೆ ರಾಜ್ಯ ಸರ್ಕಾರ (state government) ವು ಇದೀಗ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಭತ್ಯೆ ನೀಡುವ ಯುವ ನಿಧಿ ಯೋಜನೆ (Yuva Nidhi scheme) ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ.

ಯುವ ನಿಧಿ ಯೋಜನೆಯು ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಡಿಸೆಂಬರ್ 26ರಿಂದಲೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೆ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಅಡಿಯಲ್ಲಿ ಅವರಿಗೆ ಭತ್ಯೆ ನೀಡಲಾಗುತ್ತದೆ.

ಯುವ ನಿಧಿ ಫಲಾನುಭವಿಗಳಿಗೆ ಶುಭ ಸುದ್ದಿ

2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ ಕಳೆದ ಆರು ತಿಂಗಳಿಂದ ಉದ್ಯೋಗ (Job) ಇಲ್ಲದವರಿಗೆ ಮಾತ್ರ ಯುವ ನಿಧಿ ನೀಡಲಾಗುತ್ತದೆ. ಇನ್ನೆರಡು ವರ್ಷ ಅವರು ಭತ್ಯೆ (allowance) ಪಡೆಯಲು ಅರ್ಹರಾಗಿರುತ್ತಾರೆ.

ಈ ಮಧ್ಯದಲ್ಲಿ ಅವರಿಗೆ ಉದ್ಯೋಗ ದೊರೆತಲ್ಲಿ ಅವರಿಗೆ ಭತ್ಯೆ ಸಿಗುವುದಿಲ್ಲ. ಈ ಕುರಿತು ಸರ್ಕಾರಕ್ಕೆ ಅವರು ಮಾಹಿತಿ ನೀಡಬೇಕು. ಒಂದು ವೇಳೆ ಕೆಲಸಕ್ಕೆ ತೆರಳುತ್ತ ಯುವ ನಿಧಿ ಭತ್ಯೆ ಪಡೆದುಕೊಂಡಿದ್ದು ಕಂಡಲ್ಲಿ ಅವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ಹೊಸ ರೂಲ್ಸ್! ಇಲ್ಲವಾದ್ರೆ ಉಚಿತ ಹಣ ಸಿಗೋಲ್ಲ

Yuva Nidhi Yojana - Yuva Nidhi Schemeಈ ಯುವ ನಿಧಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರವು ಒಂದು ಶುಭ ಸುದ್ದಿ ನೀಡಿದೆ.

ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಯುವತಿಯರಿಗೆ ಸಹಾಯಕವಾಗಲಿ ಎಂದು ಯುವ ನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಭತ್ಯೆ ಪಡೆಯುವ ಫಲಾನುಭವಿಗಳಿಗೆ “ಉದ್ಯಮ ಶೀಲತಾ ತರಬೇತಿ (Entrepreneurship training) ” ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಇನ್ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆ ಹಣ; ರಾತ್ರೋ-ರಾತ್ರಿ ಹೊಸ ಬದಲಾವಣೆ

ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೇ ಅಲ್ಲದೆ ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡಿ ಅವರು ಸಹ ಉದ್ಯಮಿಗಳಾಗಬೇಕು. ಅವರು ಸಹ ಸ್ವಂತ ಉದ್ಯಮ ಪ್ರಾರಂಭಿಸಿ ಉದ್ಯೋಗ ನೀಡುವಂತವರಾಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಹಾಗಾಗಿಯೇ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯಮ ಶೀಲತಾ ತರಬೇತಿ ನೀಡಲು ಸರ್ಕಾರವು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದು ಯಾವಾಗ ಆರಂಭವಾಗಲಿದೆ. ಇದರ ರೂಪುರೇಷೆಗಳು ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯದಲ್ಲಿಯೇ ರಾಜ್ಯ ಸರ್ಕಾರದಿಂದ ಮಾಹಿತಿ ಲಭ್ಯವಾಗಬಹುದು.

After Yuva Nidhi Yojana, another scheme has been implemented

Follow us On

FaceBook Google News

After Yuva Nidhi Yojana, another scheme has been implemented