Karnataka NewsBangalore News

ಇನ್ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆ ಹಣ; ರಾತ್ರೋ-ರಾತ್ರಿ ಹೊಸ ಬದಲಾವಣೆ

ರಾಜ್ಯದಲ್ಲಿ ಸುಮಾರು 70% ರಿಂದ 80% ನಷ್ಟು ಜನ ಉಚಿತ ಅಕ್ಕಿಯನ್ನೇ ವಿತರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ದೊಡ್ಡಬಳ್ಳಾಪುರ (doddaballapura) ದಲ್ಲಿ ಮಾತನಾಡಿದ ಆಹಾರ ಸಚಿವ ಕೆಎಚ್ ಮುನಿಯಪ್ಪ (food department minister K.H muniyappa) ಅವರು ಉಚಿತ ಅಕ್ಕಿ ಬದಲು ಹಣ ವಿತರಣೆ ಮಾಡುವ ಬಗ್ಗೆ ಮಹತ್ವದ ಅಪ್ಡೇಟ್ (update) ನೀಡಿದ್ದಾರೆ.

Money of Annabhagya Yojana for the month of May is released, Check status

ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ

ಕೆಲವು ಕಡೆ ಉಚಿತ ಅಕ್ಕಿ ಬೇಕು ಎಂದು ಕೇಳಿದರೆ ಇನ್ನು ಕೆಲವು ಕಡೆ ಹಣ ಕೊಡುವುದನ್ನೇ ಮುಂದುವರೆಸಿ ಎಂದು ಹೇಳುತ್ತಿದ್ದಾರೆ. ಆದರೆ 70% -80% ನಷ್ಟು ಜನ ಉಚಿತ ಅಕ್ಕಿಯನ್ನು ಪಡೆದುಕೊಳ್ಳಲು ಬಯಸಿದ್ದಾರೆ. ಹೀಗಾಗಿ ವಿತರಣೆಯ ಬಗ್ಗೆ ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸದ್ಯದಲ್ಲಿಯೇ ಉಚಿತ ಅಕ್ಕಿ ವಿತರಣೆ! (Free rice distribution)

ಬಿಪಿಎಲ್ ಕಾರ್ಡ್ ಹೊಂದಿರುವವರು (BPL card holders) ಅನ್ನಭಾಗ್ಯ ಯೋಜನೆ (AnnaBhagya scheme) ಯ ಅಡಿಯಲ್ಲಿ 5 ಕೆಜಿ ರಾಜ್ಯ ಸರಕಾರದ ಉಚಿತ ಅಕ್ಕಿಯ ಬದಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಕುಟುಂಬದ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಗೆ 170 ರೂಪಾಯಿ ನೇರವಾಗಿ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಅಕ್ಕಿಯನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್! ರಾಜ್ಯ ಸರ್ಕಾರದಿಂದ ಹೊಸ ಸ್ಕೀಮ್

Annabhagya Scheme“ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬೇರೆ ಕಡೆ ಅಕ್ಕಿ ಖರೀದಿ (rice purchase) ಮಾಡಲು ನಿರ್ಧರಿಸಿದ್ದೇವೆ. ಆದರೆ ಬೆಲೆ ಇನ್ನು ನಿಗದಿ ಪಡಿಸಿಲ್ಲ. ಎಲ್ಲಾ ಕಡೆ ಈ ಬಾರಿ ಅಕ್ಕಿ ಬೆಳೆ ಕಡಿಮೆ ಆಗಿದೆ. ಆದರೂ ಫಲಾನುಭವಿಗಳಿಗೆ ಅಕ್ಕಿ ಒದಗಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಚಿವ ಕೆಎಚ್ ಮುನಿಯಪ್ಪ (K.H muniyappa) ತಿಳಿಸಿದ್ದಾರೆ.

ಪಿಯುಸಿ ಪಾಸ್ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಕೆಲಸ; ಈಗಲೇ ಅಪ್ಲೈ ಮಾಡಿ

ಅಕ್ಕಿಯನ್ನು ಸಮರ್ಪಕವಾಗಿ ಒದಗಿಸುವವರೆಗೆ ಫಲಾನುಭವಿಗಳ ಖಾತೆಗೆ (Bank Account) ಅಕ್ಕಿಯ ಬದಲು ಹಣವನ್ನೇ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿಯನ್ನೇ ಪಡೆದುಕೊಳ್ಳಲು ಬಯಸುವ ಫಲಾನುಭವಿಗಳು ಇನ್ನೂ ಸ್ವಲ್ಪ ದಿನ ಇದಕ್ಕಾಗಿ ಕಾಯಬೇಕು. ಅಲ್ಲಿಯವರೆಗೂ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ (Money Deposit) ಆಗಲಿದೆ.

Annabhagya Yojana money will not be available anymore

Our Whatsapp Channel is Live Now 👇

Whatsapp Channel

Related Stories