ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್! ರಾಜ್ಯ ಸರ್ಕಾರದಿಂದ ಹೊಸ ಸ್ಕೀಮ್

ಶಕ್ತಿ ಯೋಜನೆ (shakti Yojana) ಹಾಗೂ ಗೃಹಲಕ್ಷ್ಮಿ ಯೋಜನೆಗಳು (Gruha Lakshmi Scheme) ಮಹಿಳಾ ಸಬಲೀಕರಣಕ್ಕಾಗಿ (Women empowerment) ತಂದ ಯೋಜನೆ ಆಗಿದೆ

ಒಂದು ಸರ್ಕಾರದ (Government) ಕೆಲಸವೇ ರಾಜ್ಯದ ಎಲ್ಲ ಜನರ ಅಭಿವೃದ್ಧಿ. ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಆರ್ಥಿಕವಾಗಿ (Financially), ಸಾಮಾಜಿಕವಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ.

ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress government) ವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್! ರಾಜ್ಯ ಸರ್ಕಾರದಿಂದ ಹೊಸ ಸ್ಕೀಮ್ - Kannada News

ಅವುಗಳಲ್ಲಿ ಶಕ್ತಿ ಯೋಜನೆ (shakti Yojana) ಹಾಗೂ ಗೃಹಲಕ್ಷ್ಮಿ ಯೋಜನೆಗಳು (Gruha Lakshmi Scheme) ಮಹಿಳಾ ಸಬಲೀಕರಣಕ್ಕಾಗಿ (Women empowerment) ತಂದ ಯೋಜನೆ ಆಗಿದೆ. ಇದೀಗ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದ್ದು, ಇದರಲ್ಲಿ ಹೂಡಿಕೆ (investment) ಮಾಡುವಂತೆ ವಿನಂತಿಸಿದೆ. ಹಾಗಾದರೆ ಯಾವ ಯೋಜನೆ, ಎಷ್ಟು ಹೂಡಿಕೆ ಮಾಡಬೇಕು, ಯಾವ ರೀತಿ ಲಾಭ ಸಿಗುತ್ತದೆ ಎನ್ನುವ ಕುರಿತು ಈಗ ತಿಳಿದುಕೊಳ್ಳೊಣ.

ಮಹಿಳೆಯರಿಗಾಗಿ ಚಿಟ್ ಫಂಡ್ ಸ್ಕೀಂ: (chit fund scheme)

ಎಂಎಸ್ಐಎಲ್ನಿಂದ (MSIL) ಈ ವರ್ಷದ ಎಪ್ರಿಲ್ನಲ್ಲಿ ಮಹಿಳೆಯರಿಗಾಗಿ ಹೊಸ ಸ್ವರೂಪದ ಚಿಟ್ ಫಂಡ್ ಸ್ಕೀಂ ಆರಂಭವಾಗಲಿದೆ. ಮಹಿಳೆಯರು ಸಹ ಚಿಟ್ ಫಂಡ್ನಲ್ಲಿ ತೊಡಗಿಸಿ ಲಾಭ ಗಳಿಸುವಂತಾಗಲಿ ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಕೇರಳ ಮಾದರಿಯ ಚಿಟ್ ಫಂಡ್ ಸ್ಕೀಂ ಜಾರಿಗೆ ತರಲು ರಾಜ್ಯ ಸರ್ಕಾರ ಸದ್ದುಗದ್ದಲವಿಲ್ಲದೆ ತಯಾರಿ ನಡೆಸಿದೆ ಎನ್ನಲಾಗಿದೆ.

ಪಿಯುಸಿ ಪಾಸ್ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಕೆಲಸ; ಈಗಲೇ ಅಪ್ಲೈ ಮಾಡಿ

ಯಾವ ರೀತಿ ಇರುತ್ತದೆ ಯೋಜನೆ: (information about chit fund)

chit fund Schemeಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2,000 ರೂ. ಪಡೆದುಕೊಳ್ಳುತ್ತಿದ್ದು, ಈ ಹಣವನ್ನು ಈ ಚಿಟ್ ಫಂಡ್ನಲ್ಲಿ ತೊಡಗಿಸಿ ಎಂಎಸ್ಐಎಲ್ (Mysore sales international limited) ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ.

ಕೇರಳ (Kerala) ರಾಜ್ಯದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ನಮ್ಮ ರಾಜ್ಯದಲ್ಲಿ ಕೇವಲ 300 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದನ್ನು ೧೦ ಸಾವಿರ ಕೋಟಿ ರೂ.ಗೆ ಏರಿಕೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

ಗ್ರಾಮೀಣ (village ) ಭಾಗದ ಸ್ವ-ಸಹಾಯ ಸಂಘಗಳ ಮೂಲಕವೂ ಚಿಟ್ ಫಂಡ್ ಉದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಆದರೆ ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.

ನಿಮ್ಮ ಗ್ರಾಮದಲ್ಲಿಯೇ ಉದ್ಯೋಗ! ಜಲಜೀವನ್ ಮಿಷನ್ ಅಡಿಯಲ್ಲಿ ಹುದ್ದೆಗಳ ನೇಮಕಾತಿ

ಹೀಗೆ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಕೊಟ್ಟ ಹಣವನ್ನು ಸಹ ಚಿಟ್ ಫಂಡ್ನಲ್ಲಿ ತೊಡಗಿಸುವಂತೆ ಮಾಡಿ ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ (financial independence) ಹಾಗೂ ಚಿಟ್ ಫಂಡ್ ಉದ್ಯಮವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಉದ್ದೇಶವಾಗಿದೆ.

ಕಾಂಗ್ರೆಸ್ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ರಾಜ್ಯದ ಕೋಟ್ಯಂತರ ಜನರು ಪಡೆದುಕೊಳ್ಳುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಮುಟ್ಟಿಸುವ ಸಲುವಾಗಿ ಅದಾಲತ್ಗಳನ್ನು ಸಹ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವು ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.

Another good news for women, A new scheme by the State Govt

Follow us On

FaceBook Google News

Another good news for women, A new scheme by the State Govt