ಪಿಯುಸಿ ಪಾಸ್ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಕೆಲಸ; ಈಗಲೇ ಅಪ್ಲೈ ಮಾಡಿ

ಪಿಯುಸಿ ಪಾಸ್ ಆಗಿದ್ರೆ ಸಾಕು ಯಾವುದೇ ಪರೀಕ್ಷೆ ಬರೆಯದೆ ಕೆಲಸ ಗಿಟ್ಟಿಸಿಕೊಳ್ಳಬಹುದು; ಈಗಲೇ ಅರ್ಜಿ ಸಲ್ಲಿಸಿ

Bengaluru, Karnataka, India
Edited By: Satish Raj Goravigere

ನೀವು ಪಿಯುಸಿ (PUC) ವಿದ್ಯಾಭ್ಯಾಸ ಮುಗಿಸಿದ್ರು ಸಾಕು. ಯಾವುದೇ ಲಿಖಿತ ಪರೀಕ್ಷೆಯು ಇಲ್ಲದೆ ಸಿಗುವಂತಹ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು. ಈ ಖಾತ್ರಿ ಉದ್ಯೋಗ (permanent job) ವನ್ನು ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಎಲ್ಲಾ ವಿವರಗಳು ಈ ಕೆಳಗಿನಂತೆ ಇದೆ.

ಇಂದು ಅಂದರೆ ಜನವರಿ 8 202 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಕೂಡಲೇ ಅರ್ಜಿ ಸಲ್ಲಿಸಿ.

Government Job

ನಿಮ್ಮ ಗ್ರಾಮದಲ್ಲಿಯೇ ಉದ್ಯೋಗ! ಜಲಜೀವನ್ ಮಿಷನ್ ಅಡಿಯಲ್ಲಿ ಹುದ್ದೆಗಳ ನೇಮಕಾತಿ

ಖಾಲಿ ಇರುವ ಹುದ್ದೆಗಳು! (Available jobs)

ವಿಜಯನಗರ ಗ್ರಾಮ ಪಂಚಾಯತ್ (Vijayanagara Gram Panchayat ) ನಲ್ಲಿ ಒಟ್ಟು 22 ಲೈಬ್ರರಿ ಸೂಪರ್ವೈಸರ್ (library supervisor) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಫ್ಲೈನ್ ಮೂಲಕ ಅಂದರೆ ಪೋಸ್ಟ್ (Post ) ನಲ್ಲಿ ಅರ್ಜಿ ಕಳುಹಿಸಬೇಕು, ಅರ್ಜಿ ಕಳುಹಿಸಲು ಇಂದು ಕೊನೆಯ ದಿನಾಂಕ.

ಶೈಕ್ಷಣಿಕ ಅರ್ಹತೆ! (Qualification)

ವಿಜಯನಗರ ಗ್ರಾಮ ಪಂಚಾಯತ್ ಅದೇ ಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ ಹಾಗೂ ಲೈಬ್ರರಿ ಸೈನ್ಸ್ ಸರ್ಟಿಫಿಕೇಷನ್ ಕೋರ್ಸ್ ಪಡೆದಿರಬೇಕು.

ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆ ಹಣ ಬಂದಿದ್ಯಾ ಇಲ್ವಾ ಚೆಕ್ ಮಾಡಿ

ವಯೋಮಿತಿ! (Age limit)

ಜನವರಿ 8 2024ಕ್ಕೆ 18 ವರ್ಷ ತುಂಬಿದ ಹಾಗೂ 35 ವರ್ಷ ಮೀರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ವಿಜಯನಗರ ಗ್ರಾಮ ಪಂಚಾಯತ್ ಅಧಿಸೂಚನೆ ಹೊರಡಿಸಿದೆ. ಎಸ್ ಸಿ / ಎಸ್ ಟಿ, ಪ್ರವರ್ಗ – 1 ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ, ಪ್ರವರ್ಗ – 2 ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Govt job vacancyಆಯ್ಕೆ ಪ್ರಕ್ರಿಯೆ ಮತ್ತು ವೇತನ! (Selection process and salary)

ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ವಿಜಯನಗರ ಗ್ರಾಮ ಪಂಚಾಯತ್ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15,196 ರೂಪಾಯಿಗಳ ವೇತನ ನೀಡಲಾಗುವುದು. ವಿಜಯನಗರ ಗ್ರಾಮ ಪಂಚಾಯತ್ ನಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು.

ರೇಷನ್ ಕಾರ್ಡ್ ನಂಬರ್ ಹಾಕಿ ಅನ್ನಭಾಗ್ಯ 5ನೇ ಕಂತಿನ ಹಣ ಬಂತಾ ಚೆಕ್ ಮಾಡಿಕೊಳ್ಳಿ

ಅರ್ಜಿ ಸಲ್ಲಿಸುವ ವಿಧಾನ! (How to apply)

ವಿಜಯನಗರ ಗ್ರಾಮ ಪಂಚಾಯಿತಿ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಪೋಸ್ಟ್ ಮೂಲಕ ಅಗತ್ಯ ಇರುವ ದಾಖಲೆಗಳೊಂದಿಗೆ ಕಳುಹಿಸಬೇಕು.

ಅರ್ಜಿ ಕಳುಹಿಸುವ ವಿಳಾಸ! (Address)

ಸದಸ್ಯ ಕಾರ್ಯದರ್ಶಿ, ಆಯ್ಕೆ ಸಮಿತಿ ಮತ್ತು ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ವಿಜಯನಗರ
ಕಲೆಕ್ಟರ್ ಕಚೇರಿ ಕಟ್ಟಡ, ಟಿ.ಬಿ ಅಣೆಕಟ್ಟು ರಸ್ತೆ, ಹೊಸಪೇಟೆ-583225 ಇಲ್ಲಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದು ಅಂದರೆ 8, 2024.

ಪಡಿತರ ಚೀಟಿದಾರರಿಗೆ 5 ಹೊಸ ರೂಲ್ಸ್ ಜಾರಿ; ಪಾಲಿಸದೇ ಇದ್ದರೆ ರೇಷನ್ ಕಾರ್ಡ್ ರದ್ದು!

PUC pass is enough to get a government job, Apply Today