ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆ ಹಣ ಬಂದಿದ್ಯಾ ಇಲ್ವಾ ಚೆಕ್ ಮಾಡಿ
ನಿಮ್ಮ ಆಧಾರ್ ನಂಬರ್ (Aadhaar number) ನಿಂದಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) DBT ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಇನ್ನು ನಿಮ್ಮ ಖಾತೆಗೆ ತಲುಪಿದೆಯಾ ಇಲ್ವಾ ಎನ್ನುವುದನ್ನು ಚೆಕ್ ಮಾಡಿಕೊಂಡಿಲ್ವಾ? ಹಾಗಾದ್ರೆ ಚಿಂತೆ ಬೇಡ, ಹೀಗೆ ನಿಮ್ಮ ಆಧಾರ್ ನಂಬರ್ (Aadhaar number) ನಿಂದಲೇ DBT ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ರಾಜ್ಯ ಸರ್ಕಾರ (state government) ಜಾರಿಗೆ ತಂದಿರುವ ಪ್ರತಿಯೊಂದು ಯೋಜನೆಗಳಿಂದ, ರಾಜ್ಯದ ಜನತೆಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು. ಅದರಲ್ಲೂ ಗೃಹಿಣಿಯರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆಯಿಂದ ಆರ್ಥಿಕವಾಗಿ ಸಾಕಷ್ಟು ಸಹಾಯವಾಗಿದೆ.
ಪಡಿತರ ಚೀಟಿದಾರರಿಗೆ 5 ಹೊಸ ರೂಲ್ಸ್ ಜಾರಿ; ಪಾಲಿಸದೇ ಇದ್ದರೆ ರೇಷನ್ ಕಾರ್ಡ್ ರದ್ದು!
4ನೇ ಕಂತಿನ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆ! (4th installment released)
ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು 26 ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ 15 ಜಿಲ್ಲೆಗಳಿಗೆ (district) ಹಣ ಬಿಡುಗಡೆ ಮಾಡಲಾಗಿತ್ತು. ಇದೀಗ ಜನವರಿ ಮೂರನೇ ತಾರೀಕಿನಂದು ಒಟ್ಟು 26 ಜಿಲ್ಲೆಗಳಿಗೆ ಹಣ ಸಂದಾಯವಾಗಿದೆ. ಹಾಗೂ ಉಳಿದ ಎಲ್ಲಾ ಜಿಲ್ಲೆಗಳಿಗೂ ಸದ್ಯದಲ್ಲಿಯೇ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ (Gruha lakshmi scheme status)
ಆಹಾರ ಇಲಾಖೆ (food department) ಯ ವೆಬ್ಸೈಟ್ ಮೂಲಕ ಅನ್ನ ಭಾಗ್ಯ ಯೋಜನೆ (Annabhagya scheme) ಯ ಹಣ ಸಂದಾಯವಾಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಆದರೆ ಗೃಹಲಕ್ಷ್ಮಿ ಯೋಜನೆಯ DBT ಸ್ಟೇಟಸ್ ಬಗ್ಗೆ ಆಹಾರ ಇಲಾಖೆಯಲ್ಲಿ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರ ಮೊಬೈಲ್ ಅಪ್ಲಿಕೇಶನ್ (mobile application) ಒಂದನ್ನು ಬಿಡುಗಡೆ ಮಾಡಿದೆ.
ಇದರ ಮೂಲಕ ನೀವು ಸುಲಭವಾಗಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರ್ಕಾರದ ಬೇರೆ ಬೇರೆ ಯೋಜನೆಯ ಡಿಬಿಟಿ ಹಣದ ಬಗ್ಗೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ತಿಳಿದುಕೊಳ್ಳಬಹುದು.
ರೇಷನ್ ಕಾರ್ಡ್ ನಂಬರ್ ಹಾಕಿ ಅನ್ನಭಾಗ್ಯ 5ನೇ ಕಂತಿನ ಹಣ ಬಂತಾ ಚೆಕ್ ಮಾಡಿಕೊಳ್ಳಿ
DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ!
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿದ ಬಳಿಕ, ಡಿ ಬಿ ಟಿ ಕರ್ನಾಟಕ ಎನ್ನುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಆದರೆ ಈ ಅಪ್ಲಿಕೇಶನ್ ಮೊದಲು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ ಈಗ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಅಪ್ಡೇಟ್ ಮಾಡಲಾಗಿದ್ದು ನೀವು ನಿಮ್ಮ ಮೊಬೈಲ್ ನಲ್ಲಿ ಕೇವಲ ಆಧಾರ್ ಸಂಖ್ಯೆಯನ್ನು ನೀಡಿ ಈ ಅಪ್ಲಿಕೇಶನ್ ಬಳಸಿಕೊಳ್ಳಬಹುದು.
ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ (smartphone) ನಲ್ಲಿ ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ (Download) ಮಾಡಿಕೊಳ್ಳಿ.
ಡೌನ್ ಲೋಡ್ ಆದ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ಹೊಸ ಅರ್ಜಿ, ತಿದ್ದುಪಡಿ ಮಾಡಿಕೊಳ್ಳಿ
ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು, ಈಗ ನೋಂದಾವಣಿ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ಬಾಕ್ಸ್ ನಲ್ಲಿ ಹಾಕಿ.
ನಂತರ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಆಗಬಹುದು. ಇದಕ್ಕಾಗಿ ನೀವು ನಾಲ್ಕು ಸಂಖ್ಯೆಗಳ mPIN ನಂಬರ್ ಅನ್ನು ಹಾಕಬೇಕು. ಇದನ್ನು ಮತ್ತೊಮ್ಮೆ ನಮೂದಿಸಿ ವೆರಿಫಿಕೇಶನ್ ಮಾಡಿಕೊಳ್ಳಬೇಕು.
ನಂತರ ಸಬ್ಮಿಟ್ ಎಂದು ಕೊಟ್ಟರೆ, ಪೇಮೆಂಟ್ ಸ್ಟೇಟಸ್ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ ಯಾವ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಇದರಲ್ಲಿ ನಿಮ್ಮ ಖಾತೆಗೆ (Bank Account) ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆಯಬಹುದು.
ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ! ಹಕ್ಕುಪತ್ರ ವಿತರಣೆ
Check Gruha Lakshmi Yojana money Credited or not by Aadhaar Number