Karnataka NewsBangalore News

ಪಡಿತರ ಚೀಟಿದಾರರಿಗೆ 5 ಹೊಸ ರೂಲ್ಸ್ ಜಾರಿ; ಪಾಲಿಸದೇ ಇದ್ದರೆ ರೇಷನ್ ಕಾರ್ಡ್ ರದ್ದು!

ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಇರುವ ಪ್ರಮುಖ ಸರ್ಕಾರಿ ದಾಖಲೆಗಳಲ್ಲಿ ಪಡಿತರ ಚೀಟಿಯು (ration card) ಒಂದಾಗಿದೆ. ಇದರಲ್ಲಿ ಎರಡು ರೀತಿಯಲ್ಲಿ ವರ್ಗಿಕರಣ ಮಾಡಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ಹಾಗೂ ಬಡತನ ರೇಖೆಗಿಂತ ಮೇಲಿರುವವರಿಗೆ ಎಎವೈ ಕಾರ್ಡ್ ನೀಡಲಾಗುತ್ತದೆ. ಆದರೆ ಬಡತನ ರೇಖೆಗಿಂತ ಮೇಲೆ ಇರುವವರು ಸಹ ಬಿಪಿಎಲ್ ಕಾರ್ಡ್ (BPL card) ಪಡೆದುಕೊಂಡು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

BPL Ration Card

ಪಡಿತರ ಚೀಟಿಯು ಕೇವಲ ಒಂದು ಗುರುತಿನ ಚೀಟಿಯಾಗಿ ಮಾತ್ರ ಉಳಿದಿಲ್ಲ. ಇದರಿಂದ ಸರ್ಕಾರಿ ಸೇವೆಗಳನ್ನು ಪಡೆಯಬಹುದಾಗಿದೆ. ಶೈಕ್ಷಣಿಕ, ವೈದ್ಯಕೀಯ ಶುಲ್ಕಗಳಲ್ಲಿ ರಿಯಾಯತಿ ಪಡೆಯಬಹುದಾಗಿದೆ.

ರೇಷನ್ ಕಾರ್ಡ್ ನಂಬರ್ ಹಾಕಿ ಅನ್ನಭಾಗ್ಯ 5ನೇ ಕಂತಿನ ಹಣ ಬಂತಾ ಚೆಕ್ ಮಾಡಿಕೊಳ್ಳಿ

ಅದರಲ್ಲೂ ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯ ಲಾಭವೂ ಸಿಗಲಿದೆ. ಹೀಗಾಗಿ ಶ್ರೀಮಂತರೂ ಸಹ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.

ಇದಕ್ಕಾಗಿಯೇ ಕೇಂದ್ರ ಸರ್ಕಾರವು ಒಂದು ನಿರ್ಧಾರ ಕೈಗೊಂಡಿದೆ. ಬಡತನ ರೇಖೆಯಲ್ಲಿರುವವರು (below poverty line) ಹಾಗೂ ಬಡತನ ರೇಖೆಗಿಂತ ಮೇಲಿರುವವರು ಎಂದು ನಿರ್ಧರಿಸಲು 2016ರಲ್ಲಿಯೇ ಕೆಲವೊಂದು ಮಾನದಂಡಗಳನ್ನು ರಚಿಸಲಾಗಿದೆ. ಆದರೆ ಅದಕ್ಕಿಂತ ಅನುಕೂಲಸ್ಥರಾಗಿರುವವರು ತಮ್ಮ ಪ್ರಭಾವ ಬಳಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರಬಹುದು.

ರಾಜ್ಯ ಸರ್ಕಾರ (state government) ವು ಬಡವರ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಲಾಭ ಪಡೆದುಕೊಳ್ಳಲು ಈ ರೀತಿ ಮಾಡಿರಬಹುದು.

ಒಂದು ರಾಜ್ಯದಲ್ಲಿ ಇಂತಿಷ್ಟೇ ಬಿಪಿಎಲ್ ಕಾರ್ಡ್ಗಳು ಇರಬೇಕು ಎಂದಿದೆ. ಆದರೆ ಅದಕ್ಕಿಂತ ಹೆಚ್ಚಿರುವ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲನೆ ನಡೆಸಿ ರದ್ದು ಪಡಿಸಲು ಮುಂದಾಗಿದೆ. ಈಗಾಗಲೇ ಹಲವರ ಪಡಿತರ ಚೀಟಿಗಳು ರದ್ದಾಗಿದೆ.

ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸೆಲೆಕ್ಟ್ ಆದ್ರೆ ಕೈತುಂಬಾ ಸಂಬಳ

BPL Ration Cardರಾಜ್ಯ ಸರ್ಕಾರ ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ರಾಜ್ಯ ಸರ್ಕಾರದ ಅಧಿಕಾರಿಗಳು ಯರ್ಯಾರು ಅನರ್ಹರು ಅಥವಾ ಶ್ರೀಮಂತರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೋ ಅವರನ್ನು ಗುರುತಿಸಿ ಅವರ ಕಾರ್ಡ್ಗಳನ್ನು ರದ್ದುಪಡಿಸಲು (BPL card cancellation) ಮುಂದಾಗಿದೆ.

ನೀವು ಸಹ ನಿಮ್ಮ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ರಾಜ್ಯ ಸರ್ಕಾರದ ಆಹಾರ ಇಲಾಖೆ ವೆಬ್ಸೈಟ್ಗೆ (food department) ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಅಲ್ಲದೆ ಈ ತಿಂಗಳ ಅನ್ನಭಾಗ್ಯ (Annabhagya scheme) ಹಣ ಬಾರದೆ ಇದ್ದರೆ ಇದೂ ಸಹ ಒಂದು ಕಾರಣ ಆಗಿರಬಹುದು.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ಹೊಸ ಅರ್ಜಿ, ತಿದ್ದುಪಡಿ ಮಾಡಿಕೊಳ್ಳಿ

ಸರ್ಕಾರದ ನಿಯಮಗಳು: (government new rules)

*ಕುಟುಂಬದಲ್ಲಿ ಯಾರೂ ಸಹ ಆದಾಯ ತೆರಿಗೆ ಪಾವತಿ ಮಾಡುವವರು ಇರಬಾರದು, ಸರ್ಕಾರಿ ಉದ್ಯೋಗದಲ್ಲಿ ಇರಬಾರದು

*ಸ್ವಂತ ಬಳಕೆಗಾಗಿ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ಕಾರು ಹೊಂದಿರಬಾರದು.

*ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ ಕುಟುಂಬರ ಜಮೀನು 7 ಎಕರೆಗಿಂತ ಹೆಚ್ಚಿಗೆ ಇರಬಾರದು

*ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದವರು ಸಹ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ

ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದಲ್ಲಿ 2 ಲಕ್ಷ ರೂ. ಹಾಗೂ ನಗರ ಭಾಗದಲ್ಲಿ 3 ಲಕ್ಷ ರೂ. ಮೀರಿರಬಾರದು.
ಎಲ್ಲಾ ಮಾನದಂಡಗಳ ಒಳಗೆ ಬರುವವರು ಮಾತ್ರ, ಹೊಸ ಬಿಪಿಎಲ್ ಕಾರ್ಡ್ ಗೂ ಕೂಡ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ! ಹಕ್ಕುಪತ್ರ ವಿತರಣೆ

Implementation of 5 new rules for ration card holders

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories