ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ

ಅನೇಕ ರೈತರು ಕೃಷಿ (Agriculture) ಉದ್ದೇಶಕ್ಕೆ ಮಾತ್ರ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಂತಹವರಿಗೆ ಹಕ್ಕುಪತ್ರ ನೀಡಲಾಗುವುದು

ನಮ್ಮ ರಾಜ್ಯದ ಕರಾವಳಿ (coastal area) , ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರದೇಶ ಕಾಡಿನಿಂದ ಆವೃತವಾಗಿದೆ. ಇಲ್ಲಿ ತಲತಲಾಂತರದಿಂದ ಜನರು ತಮ್ಮ ಜೀವನ ನಡೆಸುವ ಸಲುವಾಗಿ ಅರಣ್ಯ ಒತ್ತುವರಿ (Forest encroachment) ಮಾಡಿಕೊಂಡು ತೋಟಗಳಾಗಿ ಪರಿವರ್ತಿಸಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.

ಇಷ್ಟಾದರೂ ಜಮೀನು ಅತಿಕ್ರಮಣ ಆಗಿರುವುದರಿಂದ ಅವರ ಹೆಸರಿನಲ್ಲಿ ಇಲ್ಲ. ಹಾಗಾಗಿ ಅತಿಕ್ರಮಣ ಮಾಡಿದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡಿ ಎಂದು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಪಿಯುಸಿ ಪಾಸ್ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಕೆಲಸ; ಈಗಲೇ ಅಪ್ಲೈ ಮಾಡಿ

ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ - Kannada News

ಇದೀಗ ಈ ಹೋರಾಟಕ್ಕೆ ಫಲ ಸಿಗುವ ಸಮಯ ಬಂದಿದ್ದು, ಇದೇ ತಿಂಗಳು ಏಳು ಸಾವಿರ ಜನರಿಗೆ ಜಮೀನಿನ ಹಕ್ಕುಪತ್ರ (hakku Patra) ನೀಡಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಅರಣ್ಯ ಇಲಾಖೆ (Forest department) ಸಚಿವರಾದ ಈಶ್ವರ ಖಂಡ್ರೆ (minister Ishwar khandre) ಅವರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲರಿಗೂ ಜಮೀನಿನ ಹಕ್ಕುಪತ್ರ ಸಿಗುವುದಿಲ್ಲ. ಸರ್ಕಾರ ರೂಪಿಸಿದ ನಿಯಮಗಳಿಗನುಸಾರವಾಗಿ ಇರುವವರಿಗೆ ಮಾತ್ರ ಹಕ್ಕುಪತ್ರ ಸಿಗಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಆದರೆ ಕೆಲವೊಬ್ಬರು ತಮ್ಮ ಪ್ರಭಾವ ಬಳಸಿ ಅರಣ್ಯ ಭೂಮಿ (Forest land) ಯನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಈಗ ಅಂತಹ ಅತಿಕ್ರಮಣ ತೆರವು ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.

ನಿಮ್ಮ ಗ್ರಾಮದಲ್ಲಿಯೇ ಉದ್ಯೋಗ! ಜಲಜೀವನ್ ಮಿಷನ್ ಅಡಿಯಲ್ಲಿ ಹುದ್ದೆಗಳ ನೇಮಕಾತಿ

Agriculture Landಬೆಂಗಳೂರು ಸಮೀಪದ ಕೊತ್ತುರು ಪ್ರದೇಶದಲ್ಲಿ ಒತ್ತುವರಿಯಾಗಿದ್ದ 4೦೦ ಎಕರೆ ಅರಣ್ಯ ಪ್ರದೇಶವನ್ನು ಸರಂಕ್ಷಣೆ ಮಾಡಲಾಗಿದೆ. ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಈ ಪ್ರದೇಶವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿದ್ದರು ಎಂದು ಸ್ವತಃ ಸಚಿವರೇ ವಿವರಿಸಿದ್ದಾರೆ.

ಈಗ ಈ ರೀತಿ ಅಕ್ರಮ ಮಾಡಲು ಸಹಕಾರ ನೀಡಿದ ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಆದರೆ ಅನೇಕ ರೈತರು ಕೃಷಿ (Agriculture) ಉದ್ದೇಶಕ್ಕೆ ಮಾತ್ರ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅಂತಹವರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.

ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆ ಹಣ ಬಂದಿದ್ಯಾ ಇಲ್ವಾ ಚೆಕ್ ಮಾಡಿ

ಅಕ್ರಮ-ಸಕ್ರಮ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಈಗಾಗಲೇ ಸಾಕಷ್ಟು ಜಮೀನು (Agriculture Land) ಇದ್ದವರು, ಕೃಷಿಯೇತರ ಚಟುವಟಿಕೆಗೆ ಬಳಸುವ ಉದ್ದೇಶದಿಂದ ಒತ್ತುವರಿ ಮಾಡಿದವರು ಸೇರಿದ್ದಾರೆ.

ಹಾಗಾಗಿ ಎಲ್ಲ ಅರ್ಜಿಗಳನ್ನು ಕುಲಂಕುಷವಾಗಿ ಪರಿಶೀಲನೆ ನಡೆಸಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಯಾರು ಕೃಷಿ ಉದ್ದೇಶಕ್ಕಾಗಿ ಮಾತ್ರ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದರಲ್ಲೂ ಕಳೆದ ಮೂರು ತಲೆಮಾರುಗಳಿಂದ ಅದೇ ಜಮೀನನ್ನು ಬಳಕೆ ಮಾಡುತ್ತಿದ್ದಾರೆ ಅಂತಹವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ.

1980ರ ಅರಣ್ಯ ರಕ್ಷಣಾ ಕಾಯ್ದೆ (Forest Conservation Act) ಯು ಬಹಳ ಕಟ್ಟುನಿಟ್ಟಾಗಿದ್ದು, ಇದರ ಅಡಿಯಲ್ಲಿ ಐದು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಒತ್ತುವರಿ ಮಾಡಿಕೊಂಡ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ.

ಪಡಿತರ ಚೀಟಿದಾರರಿಗೆ 5 ಹೊಸ ರೂಲ್ಸ್ ಜಾರಿ; ಪಾಲಿಸದೇ ಇದ್ದರೆ ರೇಷನ್ ಕಾರ್ಡ್ ರದ್ದು!

Allotment of government land to such farmers, 7000 people will get Hakku Patra

Follow us On

FaceBook Google News

Allotment of government land to such farmers, 7000 people will get Hakku Patra