ರೇಷನ್ ಕಾರ್ಡ್ (Ration card) ಎನ್ನುವುದು ಈಗ ಕೇವಲ ಪಡಿತರ ಪಡೆದುಕೊಳ್ಳುವುದಕ್ಕೆ ಅಥವಾ ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ತೆಗೆದುಕೊಳ್ಳುವುದಕ್ಕೆ ಮಾತ್ರವಲ್ಲದೆ ರೇಷನ್ ಕಾರ್ಡ್ ಅನ್ನು ನಿಮ್ಮ ಗುರುತಿನ ಪುರಾವೆಯಾಗಿಯೂ ಬಳಸಿಕೊಳ್ಳಬಹುದು.
ರಾಜ್ಯದ ಜನತೆಗೆ ಇತ್ತೀಚೆಗೆ ಹೊಸ ಪಡಿತರ ಚೀಟಿ ವಿತರಣೆ (new ration card distribution) ಮಾಡಲಾಗುತ್ತಿದೆ. ಒಂದಷ್ಟು ಅಕ್ರಮ ಪಡಿತರ ಚೀಟಿ ರದ್ದುಪಡಿ ಮಾಡಲಾಗುತ್ತಿದ್ದರು ಕೂಡ, ಕಳೆದ ಎರಡುವರೆ ವರ್ಷಗಳಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲಿಸಿ ಪ್ರತಿ ಜಿಲ್ಲೆಗೂ ಕೂಡ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ಹೊಸ ರೂಲ್ಸ್! ಇಲ್ಲವಾದ್ರೆ ಉಚಿತ ಹಣ ಸಿಗೋಲ್ಲ
ನೀವು ಬಿಪಿಎಲ್ ಕಾರ್ಡ್ (BPL card) ಹೊಂದಿದ್ದರೆ ಉಚಿತ ಪಡಿತರ ಪಡೆದುಕೊಳ್ಳುವುದು ಮಾತ್ರ ಅಲ್ಲವೇ ಸರ್ಕಾರದ ಉಚಿತ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ (Gruha lakshmi scheme), ಅನ್ನಭಾಗ್ಯ ಯೋಜನೆ ಹಾಗೂ ಕೇಂದ್ರ ಸರಕಾರದಿಂದ ಬಿಡುಗಡೆ ಆಗಿರುವ ಹಲವು ಯೋಜನೆಗಳ ಪ್ರಯೋಜನ ಪಡೆಯಬಹುದು. ಪ್ರಯೋಜನಗಳಿಗೆ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಬೇಕು.
ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆ ಮಾಡಿ (Add your children’s name in the Ration card)
ರೇಷನ್ ಕಾರ್ಡ್ ತಿದ್ದುಪಡಿ (ration card correction)ಗೂ ಕೂಡ ರಾಜ್ಯ ಸರ್ಕಾರ ಅವಕಾಶ ಮಾಡಿ ಕೊಟ್ಟಿದ್ದು, ನೀವು ನಿಮ್ಮ ಮಕ್ಕಳ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಹೊಸದಾಗಿ ಸೇರ್ಪಡೆ ಮಾಡಬಹುದು.
ಇನ್ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆ ಹಣ; ರಾತ್ರೋ-ರಾತ್ರಿ ಹೊಸ ಬದಲಾವಣೆ
ಮಕ್ಕಳ ಹೆಸರು ಸೇರ್ಪಡೆ ಮಾಡಲು ಬೇಕಾಗಿರುವ ದಾಖಲೆಗಳು (Needed documents)
ಮಗುವಿನ ಜನನ ಪ್ರಮಾಣ ಪತ್ರ (birth certificate)
ಕುಟುಂಬದ ಮುಖ್ಯಸ್ಥರ (ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರ ಹೆಸರು) ಆಧಾರ್ ಕಾರ್ಡ್
ಪಡಿತರ ಚೀಟಿ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಮಕ್ಕಳ ಹೆಸರನ್ನು ಹೊಸದಾಗಿ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಲು ನೀವು ಆನ್ಲೈನ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್, https://ahara.kar.nic.in/Home/EServices ಅನ್ನು ಕ್ಲಿಕ್ ಮಾಡಿ. ಆಹಾರ ಇಲಾಖೆಯ ಇ – ಸರ್ವಿಸ್ ಪೇಜ್ ತೆರೆದುಕೊಳ್ಳುತ್ತದೆ.
ಇಲ್ಲಿ ನೀವು ಪಡಿತರ ಖಾತೆಗೆ ಹೊಸ ಸದಸ್ಯರ ಹೆಸರು ಸೇರಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಬೇಕು.
ಇಂತಹ ರೈತರಿಗೆ ಸರ್ಕಾರಿ ಭೂಮಿ ಮಂಜೂರು! 7000 ಜನರಿಗೆ ಸಿಗಲಿದೆ ಹಕ್ಕುಪತ್ರ
ಹೆಸರು ಸೇರಿಸಲು ಸರಿಯಾದ ದಾಖಲೆಗಳನ್ನು ನೀಡಬೇಕು. ನೀವು ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ತಿದ್ದುಪಡಿ ಮನವಿ ಸಲ್ಲಿಕೆ ಆಗುತ್ತದೆ. ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು “ಫಲಾನುಭವಿಗಳ ಸ್ಥಿತಿ” ಯಲ್ಲಿ ತಿಳಿದುಕೊಳ್ಳಬಹುದು.
ಹೀಗೆ ಅತ್ಯಂತ ಸುಲಭವಾಗಿ ನೀವು ನಿಮ್ಮ ಮನೆಯ ಹೊಸ ಸದಸ್ಯರ ಅಥವಾ ಈಗ ತಾನೆ ಹುಟ್ಟಿದ ಮಗುವಿನ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಬಹುದು.
Allow to add name of children in ration card, update online
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.