ಉಚಿತ ಹೊಲಿಗೆ ಯಂತ್ರ ವಿತರಣೆ; ಈ ದಾಖಲೆಯೊಂದಿಗೆ ಮಹಿಳೆಯರು ಅರ್ಜಿ ಸಲ್ಲಿಸಿ
ಸರ್ಕಾರ ಮಹಿಳೆಯರ ಸ್ವಾವಲಂಬನೆಗಾಗಿ (independent women), ಮಹಿಳೆಯರ ಸಬಲೀಕರಣ (women empowerment)ಕ್ಕಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ.
ಈ ಯೋಜನೆಗಳ ಮೂಲಕ ಮಹಿಳೆಯರು ಸುಲಭವಾಗಿ ತಮ್ಮ ಸ್ವಂತ ಉದ್ಯೋಗ ( Own business) ಗಳನ್ನು ಕೂಡ ಮಾಡಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿದೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ (free sewing machine) ಯಂತ್ರವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾಸಿಸುವ ಮಹಿಳೆಯರು ಸ್ವ ಉದ್ಯೋಗ ಆರಂಭಿಸಲು ಸಹಾಯವಾಗುವಂತೆ ಹೊಲಿಗೆ ಯಂತ್ರ ವಿತರಣೆ ( sewing Machine distribution) ಮಾಡಲು ನಿರ್ಧರಿಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಉಚಿತವಾದ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು.
ಯುವನಿಧಿ ಯೋಜನೆ ಬೆನ್ನಲ್ಲೇ ಯುವಕ-ಯುವತಿಯರಿಗೆ ಇನ್ನೊಂದು ಯೋಜನೆ ಜಾರಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)
ಜೆಪಿಜಿ ಫಾರ್ಮೆಟ್ ನಲ್ಲಿ ಇರುವ ಪಾಸ್ಪೋರ್ಟ್ ಅಳತೆಯ ಫೋಟೋ (Photo)
ಜನ್ಮ ದಿನಾಂಕ ನಮೂದಿಸುವ ದಾಖಲೆ ಪತ್ರ (10ನೇ ತರಗತಿ ಅಂಕ ಪಟ್ಟಿ ಇತ್ಯಾದಿ)
ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ರೇಷನ್ ಕಾರ್ಡ್
ಗ್ರಾಮ ಪಂಚಾಯತ್ ವತಿಯಿಂದ ದೃಢೀಕರಿಸಿದ ಹೊಲಿಗೆ ತರಬೇತಿ ಪ್ರಮಾಣ ಪತ್ರ
ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ, ಆನ್ಲೈನ್ ನಲ್ಲೇ ಅಪ್ಡೇಟ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಆಸಕ್ತ ಅಭ್ಯರ್ಥಿಗಳು, https://sevasindhuservices.karnataka.gov.in/login.do? ಈ ವೆಬ್ ಸೈಟ್ ನಲ್ಲಿ ಲಾಗಿನ್ ಆಗುವ ಮೂಲಕ ಅರ್ಜಿ ಫಾರ್ಮ್ ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಬಳಿ ಮಾಹಿತಿ ಪಡೆಯಬಹುದು.
ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ಹೊಸ ರೂಲ್ಸ್! ಇಲ್ಲವಾದ್ರೆ ಉಚಿತ ಹಣ ಸಿಗೋಲ್ಲ
ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗಿರುವ ಅರ್ಹತೆಗಳು (Qualification)
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನೀಡಲಾಗುವ ಉಚಿತ ಹೋಲಿಕೆ ಯಂತ್ರ ಪಡೆದುಕೊಳ್ಳಲು, ಗ್ರಾಮ ಪಂಚಾಯತ್ ಅಡಿಯಲ್ಲಿ ಅಥವಾ ಇತರ ಸಂಸ್ಥೆಗಳಲ್ಲಿ ಹೊಲಿಗೆ ತರಬೇತಿ ಪಡೆದು, ಹೊಲಿಗೆ ವೃತ್ತಿ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಯಾವುದೇ ಸರ್ಕಾರಿ ನೌಕರಿಯಲ್ಲಿ ಇರುವವರು ಅರ್ಜಿ ಸಲ್ಲಿಸಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 15, 2024.
Free Sewing Machine Scheme, apply with this document