ರೇಷನ್ ಕಾರ್ಡ್ ಸಂಖ್ಯೆ ಹಾಕಿ ಗೃಹಲಕ್ಷ್ಮಿ ಯೋಜನೆ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಈ ಯೋಜನೆಗೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿಯವರು ಸಪ್ಟೆಂಬರ್ ತಿಂಗಳಿನಲ್ಲಿ ಚಾಲನೆ ನೀಡಿದರು.

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) 4 ಕಂತುಗಳ ಹಣ ಜಮಾ (Money Deposit) ಆಗಿದೆ. ಇದೀಗ ಜನವರಿ ತಿಂಗಳ 5ನೇ ಕಂತಿನ ಹಣ ಜಮಾ ಆಗಬೇಕಾಗಿದೆ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಮತ್ತೆ ಪರಿಶೀಲನೆ, ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ

ಇದಕ್ಕೂ ಮೊದಲು ನಾವು ಯಾವ ಯಾವ ತಾರೀಕಿನಂದು ನಮ್ಮ ಖಾತೆಗೆ (Bank Account) ಹಣ ಜಮಾ ಆಗಿದೆ. ಅದು ಯಾವ ತಿಂಗಳ ಕಂತಿನದು ಎಂದು ತಿಳಿದುಕೊಳ್ಳಬೇಕು. ಇದನ್ನು ನೀವು ನಿಮ್ಮ ಪಡಿತರ ಚೀಟಿ ಸಂಖ್ಯೆ (ration card number) ನಮೂದಿಸುವ ಮೂಲಕವೂ ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸರ್ಕಾರದ ಮಾಹಿತಿ ಕಣಜ (mahiti Kannada) ತಂತ್ರಾಂಶದ ಸಹಾಯದಿಂದ ಗೃಹ ಲಕ್ಷ್ಮಿ ಹಣ ಜಮಾ ಆಗಿದೆಯೋ ಇಲ್ಲವೋ? ಯಾವ ಕಂತಿನ ಹಣ ಯಾವ ದಿನಾಂಕದಂದು ಜಮಾ ಆಗಿದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣವೂ ಸಿಗೋಲ್ಲ

ಗೃಹ ಲಕ್ಷ್ಮಿ ಯೋಜನೆಯ ಮಾಹಿತಿ ತಿಳಿದುಕೊಳ್ಳುವ ವಿಧಾನ

Gruha Lakshmi Yojanaಮೊದಲನೆಯದಾಗಿ ನಿಮ್ಮ ಮೊಬೈಲ್ನಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಲು ರಾಜ್ಯ ಸರ್ಕಾರದ ಅಧಿಕೃತ ಇ-ಆಡಳಿತ ವಿಭಾಗದ ಮಾಹಿತಿ ಕಣಜ https://mahitikanaja.karnataka.gov.in/Service/Service/3136 ಜಾಲತಾಣಕ್ಕೆ ಭೇಟಿ ನೀಡಬೇಕು.

ನಂತರ ಮಾಹಿತಿ ಕಣಜ ಜಾಲತಾಣದಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ನಂತರ ಅರ್ಜಿದಾರರ 12 ಅಂಕಿಯ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ನಂತರ ಪಕ್ಕದಲ್ಲೇ ಕಾಣುವ ಸಬ್ಮಿಟ್ (submit ) ಬಟನ್ ಪ್ರೆಸ್ ಮಾಡಬೇಕು.

ಉಚಿತ ಹೊಲಿಗೆ ಯಂತ್ರ ವಿತರಣೆ; ಈ ದಾಖಲೆಯೊಂದಿಗೆ ಮಹಿಳೆಯರು ಅರ್ಜಿ ಸಲ್ಲಿಸಿ

ಈ ರೀತಿ ಕ್ಲಿಕ್ ಮಾಡಿದ ಬಳಿಕ ಅರ್ಜಿ ಸಲ್ಲಿಸಿದ ದಿನಾಂಕ, ನಿಮ್ಮ ಖಾತೆಗೆ ಯಾವಾಗ ಹಣ ಜಮಾ ಆಗಿದೆ, ಯಾವ ದಿನಾಂಕದಂದು ಜಮಾ ಆಗಿದೆ ಎನ್ನುವ ವಿವರಗಳು ಕಾಣಿಸುತ್ತದೆ.

ಇಲ್ಲಿಯ ವರೆಗೆ ಎಷ್ಟು ಸಲ ಜಮಾ ಆಗಿದೆ ಎನ್ನುವ ವಿವರಗಳು ಕಾಣಿಸುತ್ತದೆ. ಹೀಗೆ ನೀವು ಸುಲಭವಾಗಿ ಗೃಹ ಲಕ್ಷ್ಮಿ ವಿವರಗಳನ್ನು ನೀವು ಪಡೆದುಕೊಳ್ಳಬಹುದು.

ಒಂದು ವೇಳೆ ಈ ರೀತಿ ಮಾಡಿದಾಗ ಯಾವುದೇ ವಿವರಗಳು ಕಾಣಿಸಿಕೊಳ್ಳದೆ ಇದ್ದಲ್ಲಿ ನೀವು ಚಿಂತಿಸುವ ಅಗತ್ಯ ಇಲ್ಲ. ನೀವು ಅಗತ್ಯ ದಾಖಲಾತಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು (CDPO) ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಬಹುದು, ಅವರು ಎಲ್ಲವನ್ನು ಸರಿಪಡಿಸಿಕೊಡುತ್ತಾರೆ.

ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸಲು ಅವಕಾಶ, ಆನ್ಲೈನ್ ನಲ್ಲೇ ಅಪ್ಡೇಟ್ ಮಾಡಿಕೊಳ್ಳಿ

Check Gruha Lakshmi Scheme DBT Status by Ration Card Number

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories