ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿ ವಿತರಣೆಗೆ ದಿನಾಂಕ ಫಿಕ್ಸ್

ಕರ್ನಾಟಕ ಸರ್ಕಾರದ (state government) ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿರುವಂತೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ.

ನೀವು ಹೊಸ ಪಡಿತರ ಚೀಟಿ (Ration card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾಯುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಹೊಸ ಪಡಿತರ ಚೀಟಿಯನ್ನು ಯಾವಾಗ ವಿತರಣೆ ಮಾಡಲಾಗುವುದು ಎನ್ನುವುದರ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ಸರ್ಕಾರದ (state government) ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿರುವಂತೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದೆ.

ಕೇವಲ ಗುರುತಿನ ಚೀಟಿ ಆಗಿ ಮಾತ್ರವಲ್ಲದೆ ಪಡಿತರ ಉಚಿತವಾಗಿ ಪಡೆದುಕೊಳ್ಳುವುದರ ಜೊತೆಗೆ ಸರ್ಕಾರದ ಇತರ ಯೋಜನೆಗಳ ಪ್ರಯೋಜನವನ್ನು ಕೂಡ ರೇಷನ್ ಕಾರ್ಡ್ ಹೊಂದಿರುವವರು ಪಡೆದುಕೊಳ್ಳುತ್ತಾರೆ.

Ration card correction allowed again, Here is the information

School Holiday: ಶಾಲಾ ಕಾಲೇಜುಗಳಿಗೆ ಸತತ 7 ದಿನಗಳ ರಜೆ ಘೋಷಿಸಿದ ಸರ್ಕಾರ!

ಹೊಸ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್! (New ration card distribution)

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರು ಹೊಸ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು ಮೂರು ಲಕ್ಷದಷ್ಟು ಪಡಿತರ ಚೀಟಿ ಅರ್ಜಿಗಳ ವಿತರಣೆ ಪೆಂಡಿಂಗ್ ಇದೆ. ಕರೋನಾ ಸಮಯದಲ್ಲಿ ಹಾಗೂ ಚುನಾವಣೆಯ ಕಾರಣಗಳಿಂದಾಗಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗಿಲ್ಲ.

ಇದೀಗ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಯ ಲಾಭ ಪಡೆದುಕೊಳ್ಳಲು ಬಿಪಿಎಲ್ ಪಡಿತರ ಚೀಟಿ ಅನಿವಾರ್ಯ ಆಗಿರುವುದರಿಂದ ತಮಗೆ ಹೊಸ ಪಡಿತರ ಚೀಟಿ ಕೊಡಿ ಎಂದು ಜನರು ಸರ್ಕಾರದ ಮೊರೆ ಹೋಗಿದ್ದಾರೆ.

ಇದನ್ನು ಗಮನಿಸಿರುವ ಸರ್ಕಾರ ಹೊಸ ಪಡಿತರ ವಿತರಣೆಗೆ ದಿನಾಂಕವನ್ನು ನಿಗದಿಪಡಿಸಿದೆ. ಕಳೆದ ಎರಡುವರೆ ವರ್ಷಗಳಿಂದಲೂ ಕೂಡ ಅರ್ಜಿ ಸಲ್ಲಿಸಿ ಇಂದು ಬರಬಹುದು, ನಾಳೆ ಬರಬಹುದು ಎಂದು ಹೊಸ ಪಡಿತರ ಚೀಟಿಗಾಗಿ ಕಾದು ಕುಳಿತವರಿಗೆ ಇದು ಸಂತೋಷದ ವಿಷಯವಾಗಿದೆ.

ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ

BPL Ration Cardರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಅಪ್ಡೇಟ್! (Ration card district new update)

ತಮ್ಮ X ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಕೆ.ಎಚ್ ಮುನಿಯಪ್ಪ ಅವರು ಹಂಚಿಕೊಂಡಿದ್ದಾರೆ. ಹೊಸ ರೇಷನ್ ಕಾರ್ಡ್ ಎಲ್ಲರಿಗೂ ವಿತರಣೆ ಆಗಬೇಕು. ಸದ್ಯದಲ್ಲೇ ಹಣದ ಬದಲು ಉಚಿತ ಅಕ್ಕಿಯನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

ಇದರ ಜೊತೆಗೆ ಹೊಸ ಪಡಿತರ ಚೀಟಿ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಇನ್ನು ಕೇವಲ 15 ದಿನಗಳಲ್ಲಿ ಆಯ್ದ ಫಲಾನುಭವಿಗಳಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಮಾನ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ

ರೇಷನ್ ಕಾರ್ಡ್ ರದ್ದುಪಡಿಗೂ ತೀರ್ಮಾನ! (Ration card cancellation)

ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದರ ಜೊತೆಗೆ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಇದ್ದು, ಪಡಿತರ ತೆಗೆದುಕೊಳ್ಳದೆ ಇರುವ ಕುಟುಂಬದ ರೇಷನ್ ಕಾರ್ಡ್ ರದ್ದು ಪಡಿಗೆ ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಮಾನದಂಡಗಳನ್ನು ಗಮನಿಸಿದೆ ಸಾಕಷ್ಟು ಕುಟುಂಬಗಳು ಬಿಪಿಎಲ್ ಪಡಿತರ ಕಾರ್ಡ್ ಹೊಂದಿವೆ. ಉಳ್ಳವರು ಕೂಡ ಈ ರೀತಿ ಬಿಪಿಎಲ್ ಕಾರ್ಡ್ ಹೊಂದಿರುವುದನ್ನು ಸರ್ಕಾರ ಗಮನಿಸಿದ್ದು, ಈಗಾಗಲೇ ರದ್ದುಪಡಿ ಪ್ರಕ್ರಿಯೆ ಆರಂಭವಾಗಿದೆ.

ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಗೆ ಹೋಗಿ ನೀವು ಈ ಸರ್ವಿಸ್ ಭಾಗದಲ್ಲಿ, ಎಡ ಭಾಗದಲ್ಲಿ ಕಾಣುವ ಈ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ಇಲ್ಲಿ ಪಡಿತರ ತಿದ್ದುಪಡಿ ಹಾಗೂ ರದ್ದುಪಡಿ ಬಗ್ಗೆ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆಬೇರೆ ಲಿಂಕ್ ಕೊಡಲಾಗಿರುತ್ತದೆ, ಕೊಟ್ಟಿರುವ ಮೂರು link ಗಳ ಕೆಳಗೆ ಇರುವ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.

ಈಗ ನಿಮ್ಮ ಹಳ್ಳಿಯಲ್ಲಿ ರದ್ದಾಗಿರುವ ಎಲ್ಲಾ ರೇಷನ್ ಕಾರ್ಡ್ ವಿವರವನ್ನು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದು ಅರ್ಥ.

Update for ration card applicants, date Announced for issue of new ration card

Related Stories