ಗೃಹಲಕ್ಷ್ಮಿ 5ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಸರ್ಕಾರದಿಂದ ಒಟ್ಟು ಗೃಹಲಕ್ಷ್ಮಿ ಯೋಜನೆ (Gruha lakshmi Scheme) ಒಟ್ಟಾರೆ ರೂ.10,000 ಮಹಿಳೆಯರ ಖಾತೆಗೆ (Bank Account) ಸೇರುವ ದಿನ ಇನ್ನೇನು ದೂರ ಉಳಿದಿಲ್ಲ
ಸರ್ಕಾರದಿಂದ ಒಟ್ಟು ರೂ.10,000 ಮಹಿಳೆಯರ ಖಾತೆಗೆ (Bank Account) ಸೇರುವ ದಿನ ಇನ್ನೇನು ದೂರ ಉಳಿದಿಲ್ಲ. ಯಾಕೆಂದರೆ ಈಗಾಗಲೇ ನಾಲ್ಕು ಕಂತಿನ ಹಣ ಜಮಾ (4 installment ) ಆಗಿದ್ದು ರೂ.8,000ಗಳನ್ನು ಮಹಿಳೆಯರ ಖಾತೆಗೆ ಜಮಾ (Money Deposit) ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi Scheme) ಸರ್ಕಾರ ಬಿಡುಗಡೆ ಮಾಡಿದ ಮೇಲೆ ಮಹಿಳೆಯರ ಸ್ವಾವಲಂಬಿ (women empowerment) ಜೀವನಕ್ಕೆ ಸ್ವಲ್ಪವಾದರೂ ಅನುಕೂಲವಾಗಿದೆ ಎಂದು ಹೇಳಬಹುದು.
ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ 2,000 ತಿಂಗಳ ಖರ್ಚು ವೆಚ್ಚವನ್ನು ನಿಭಾಯಿಸಲು ನೆರವಾಗುತ್ತಿದೆ. ಜುಲೈ 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಆಗಸ್ಟ್ 30 ಕ್ಕೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿತ್ತು ಸರ್ಕಾರ.
ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿ ವಿತರಣೆಗೆ ದಿನಾಂಕ ಫಿಕ್ಸ್
ಇದೀಗ ಒಂದಾದ ಮೇಲೆ ಒಂದು ಕಂತಿನಂತೆ ಒಟ್ಟು ನಾಲ್ಕು ಕಾಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿ ಮಹಿಳೆಯರಿಗೆ ರೂ.8000ಗಳನ್ನು ಜಮಾ ಮಾಡಲಾಗಿದೆ.
ಇಷ್ಟಾಗಿ ಸಾಕಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ, ಇದಕ್ಕೆ ಕೆಲವು ತಾಂತ್ರಿಕ ದೋಷ (technical issues) ಗಳು ಕಾರಣವಾಗಿವೆ. ಹಾಗೂ ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆ ಕೂಡ ಒಂದು ಪ್ರಮುಖ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದ್ದು, ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಗೃಹಲಕ್ಷ್ಮಿ ಕ್ಯಾಂಪ್ Gruha lakshmi camp) ಗಳನ್ನು ಸರ್ಕಾರ ನಡೆಸಿ ಮಹಿಳೆಯರಿಗೆ ಉಚಿತವಾಗಿರುವ ಸಲಹೆಗಳನ್ನು ನೀಡಿ ಅವರ ಸಮಸ್ಯೆಯನ್ನು ಪರಿಹರಿಸಿದೆ.
ಗೃಹಲಕ್ಷ್ಮಿ ಕ್ಯಾಂಪನಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಭಾಗವಹಿಸಿದ್ದು, ಬಹುತೇಕ ಮಹಿಳೆಯರ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದೇ ಹೇಳಬಹುದು. ಇದೇ ಕಾರಣಕ್ಕೆ ಮೊದಲ ಕಂತಿನ ಹಣಕ್ಕಿಂತ ನಾಲ್ಕನೇ ಕಂತಿನ ಹಣ ಪಡೆದುಕೊಂಡ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ.
ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ
5ನೇ ಕಂತಿನ ಹಣ ಬಿಡುಗಡೆ ಯಾವಾಗ? 5th installment release update
ಐದನೇ ಕಂತಿನ ಹಣ ಬಿಡುಗಡೆ ಯಾವಾಗ ಎಂದು ಮಹಿಳೆಯರು ನಿರೀಕ್ಷೆ ಮಾಡುತ್ತಿದ್ದಾರೆ. ಇದೀಗ ಸರ್ಕಾರ ಹೊಸ ಅಪ್ಡೇಟ್ ನೀಡಿದ್ದು 5ನೇ ಕಂತಿನ ಹಣ ಯಾವ ಸಮಯದಲ್ಲಿ ಬರಬಹುದು ಎಂದು ಮಾಹಿತಿ ನೀಡಿದೆ.
ಗೃಹಲಕ್ಷ್ಮಿ ಯೋಜನೆಯ, ಪ್ರತಿ ಕಂತಿನ ಹಣವನ್ನು ಪ್ರತಿ ತಿಂಗಳು 15 ರಿಂದ 20ನೇ ತಾರೀಖಿನ ಒಳಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಈ ಪರ್ಟಿಕ್ಯೂಲರ್ ದಿನಾಂಕದಂದು ಹಣ ವರ್ಗಾವಣೆ (DBT) ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.
ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ
ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 80% ನಷ್ಟು ಮಹಿಳೆಯರಿಗೆ, ನಾಲ್ಕನೇ ಕಂತಿನ ಹಣ ಜಮಾ ಆಗಿದ್ದು ಇದೇ ಬರುವ ಜನವರಿ 31ರ ಒಳಗೆ ಐದನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
5ನೇ ಕಂತಿನ ಹಣ ಪಡೆದುಕೊಳ್ಳಲು ನೀವು ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ (E-KYC) ಮಾಡಿಸಿಕೊಳ್ಳದೆ ಇದ್ದಲ್ಲಿ ತಕ್ಷಣ ಆ ಕೆಲಸ ಮಾಡಿ. ಅದೇ ರೀತಿ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಿ.
ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
When will the amount of Gruha Lakshmi Scheme 5th installment be deposited