ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಗಲಿದೆ ಈ ಯೋಜನೆಯ ಉಚಿತ ಪ್ರಯೋಜನ!
ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಆರೋಗ್ಯ ವಿಮೆ (health insurance) ಎನ್ನುವುದು ಬಹಳ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿದೆ.
ಬಡ ಹಾಗೂ ಮಧ್ಯಮ ವರ್ಗದ (middle class family) ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು ಪರಿಚಯಿಸಿವೆ. ರಾಜ್ಯ ಬಜೆಟ್ (state budget) ನಲ್ಲಿ ಈ ಬಾರಿ ಬಡವರ್ಗದ ಜನರಿಗೆ ಇದೊಂದು ಪ್ರಮುಖವಾದ ಸೌಲಭ್ಯ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯ (health) ದ ಬಗ್ಗೆ ಸ್ವಲ್ಪವೂ ಕಾಳಜಿ ಮಾಡುತ್ತಿಲ್ಲ. ಬರೀ ಕೆಲಸದ ಒತ್ತಡದ ಜೀವನ ಕಳೆಯುತ್ತಿರುವ ಜನರಿಗೆ ಆರೋಗ್ಯದ ಬಗ್ಗೆ ಲಕ್ಷವೇ ಇಲ್ಲ. ಆದರೆ ಈ ಮನುಷ್ಯನ ದೇಹಕ್ಕೆ ಯಾವಾಗ ಕಾಯಿಲೆ ಅಂಟಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಪ್ರತಿಯೊಬ್ಬರ ಬಳಿ ಆರೋಗ್ಯ ವಿಮೆ (Health Insurance) ಇರುವುದು ಬಹಳ ಮುಖ್ಯ.
ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆಗೆ ಸರ್ಕಾರ ನಿರ್ಧಾರ
ಆರೋಗ್ಯ ವಿಮೆ (health Insurance)
ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಆರೋಗ್ಯ ವಿಮೆ (health insurance) ಎನ್ನುವುದು ಬಹಳ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿದೆ. ಯಾಕಂದ್ರೆ ದಿನದಿಂದ ದಿನಕ್ಕೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ (treatment expenses) ಹೆಚ್ಚಾಗುತ್ತಿದೆ. ಇದನ್ನು ಭರಿಸುವುದು ಬಡವರ್ಗದ ಜನರಿಗೆ ಸುಲಭವಲ್ಲ. ಇದಕ್ಕಾಗಿ ಸರ್ಕಾರ ಆಯುಷ್ಮಾನ್ ಯೋಜನೆಯನ್ನು ಆರಂಭಿಸಿದ್ದು.
ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಿ! (Get Ayushman card)
ಬಡವರ್ಗದ ಹಿಂದುಳಿದ ಜನರಿಗೆ, ಬಡತನ ರೇಖೆಗಿಂತ ಕೆಳಗಿನವರಿಗೆ ಆರೋಗ್ಯ ಸೌಲಭ್ಯ ಅದಕ್ಕೆ ಕೊಡಲು ಆಯುಷ್ಮಾನ್ ಕಾರ್ಡ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಕಾರ್ಡ್ ಮೂಲಕ ಪ್ರತಿಯೊಂದು ಕುಟುಂಬದ ಸದಸ್ಯರು ಕಾಯಿಲೆ ಬಿದ್ದರೆ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಮಹಿಳೆಯರಿಗೆ ಗೃಹಲಕ್ಷ್ಮಿ ನಂತರ ಮತ್ತೊಂದು ಯೋಜನೆ; ಸಿಗಲಿದೆ 3 ಲಕ್ಷ ರೂಪಾಯಿ
ಆಯುಷ್ಮಾನ್ ಕಾರ್ಡ್ ಬೆನಿಫಿಟ್! (Benefits of Ayushman card)
ಇದು ಆರೋಗ್ಯ ವಿಮಾ ಕಾಡ ಆಗಿದ್ದು ನೊಂದಾಯಿತ ಆಸ್ಪತ್ರೆ (registered hospital) ಗಳಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ಆಸ್ಪತ್ರೆ ಸೇರುವುದಕ್ಕೂ ಮೂರು ದಿನಗಳ ಮೊದಲು ಹಾಗೂ ಆಸ್ಪತ್ರೆ ಸೇರಿದ ನಂತರ 15 ದಿನಗಳ ವರೆಗಿನ ಖರ್ಚು ವೆಚ್ಚಗಳನ್ನು ಈ ಮೂಲಕ ನೀವು ಬರಿಸಬಹುದು. ಒಂದು ಕುಟುಂಬಕ್ಕೆ 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗುತ್ತದೆ.
ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ!
ಬಿಪಿಎಲ್ ಕಾರ್ಡ್ ಹೊಂದಿರುವವರು ಕೂಡ ಸರ್ಕಾರದಿಂದ ಸಿಗುವ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಬಹುದು. ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದು, ನೀನು ಆಯುಷ್ಮಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸದೇ ಇದ್ದರೆ https://bis.pmjay.gov.in/ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಗ್ರಾಮ ಒನ್, ಪ್ರಧಾನ ಮಂತ್ರಿ ಜನಾರೋಗ್ಯ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆಯುಷ್ಮಾನ್ ಕಾರ್ಡ್ ಗಾಗಿ ರಾಜ್ಯ ಸರ್ಕಾರ 66% ಹಾಗೂ ಕೇಂದ್ರ ಸರ್ಕಾರ 34% ನಷ್ಟು ಅನುದಾನ ನೀಡುತ್ತಿದೆ. ಬಡವರ್ಗದ ಜನರ ಆರೋಗ್ಯಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಆರಂಭಿಸಿದ ಯೋಜನೆ ಇದಾಗಿದೆ.
ಗೃಹಲಕ್ಷ್ಮಿ 5ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ
ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents to apply Ayushman card)
ಅರ್ಜಿದಾರರ ರೇಷನ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಸ್ಥಳದ ಪುರಾವೆ
ಬ್ಯಾಂಕ್ ಖಾತೆಯ ವಿವರ.
ನೀವಿನ್ನು ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳದಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ, ಇದು ಭವಿಷ್ಯದಲ್ಲಿ ಚಿಕಿತ್ಸೆ ಅಗತ್ಯ ಇರುವ ಸಂದರ್ಭದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ.
BPL card family will get free benefit of this scheme