ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಉಚಿತ ಸೈಟ್ ಹಂಚಿಕೆ! ಅರ್ಜಿ ಹಾಕಿ

ರಾಜ್ಯ ಸರ್ಕಾರ (State government) ವಿಶೇಷವಾಗಿ ಬಡವರಿಗಾಗಿ ನಿವೇಶನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಆಶ್ರಯ ಯೋಜನೆಯ ಅಡಿಯಲ್ಲಿ ಸೂರು ನಿರ್ಮಾಣ! (Government Ashraya scheme)

ಸರ್ಕಾರ ಕೆಲವು ಪ್ರಮುಖ ವಸತಿ ಯೋಜನೆಗಳ ಮೂಲಕ ಜನರಿಗೆ ಸ್ವಂತ ಮನೆ (Own house) ನಿರ್ಮಿಸಿ ಕೊಡುತ್ತಿದೆ. ಆದರೆ ಅದಕ್ಕೂ ಮೊದಲು ಸಾಕಷ್ಟು ಜನ ಒಂದು ಗೇಣಿನಷ್ಟು ಕೂಡ ಆಸ್ತಿಯನ್ನು ಹೊಂದಿಲ್ಲ. ಹಾಗಾಗಿ ಅಂತವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅಗತ್ಯ ಇರುವ ಸೈಟ್ ವಿತರಣೆ (site distribution) ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸುಮಾರು 527 ಎಕರೆ ಜಮೀನನ್ನು ಮೀಸಲಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೃಹಜ್ಯೋತಿ ಫ್ರೀ ಕರೆಂಟ್! ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್

ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ (Bengaluru) ಭಾಗದಲ್ಲಿ ವಾಸಿಸುವವರಿಗೆ ಸೈಟ್ ವಿತರಣೆ ಮಾಡಲು 527 ಎಕರೆ ಜಾಗವನ್ನು ಸರ್ಕಾರ ಮೀಸಲಿಟ್ಟಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಕಾರಣಕ್ಕೆ ವಲಸೆ ಬಂದು ಇಲ್ಲಿಯೇ ನೆಲೆಸುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಎಲ್ಲರಿಗೂ ಸ್ವಂತ ಮನೆ ಇಲ್ಲ, ಬಹುತೇಕ ಎಲ್ಲರೂ ಬಾಡಿಗೆ ಮನೆಯಲ್ಲಿ (Rented House) ವಾಸಿಸುತ್ತಾರೆ. ಇಂಥವರಲ್ಲಿ ಸಾಕಷ್ಟು ಬಡ ಕುಟುಂಬಗಳು ಇದ್ದು ಅವರಿಗೆ ತಮ್ಮದೇ ಆಗಿರುವ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಜಾಗವನ್ನು ಒದಗಿಸಿ ಕೊಡಲಿದೆ.

ಆಶ್ರಯ ಯೋಜನೆಯ ಅಡಿಯಲ್ಲಿ ಮೀಸಲಾಗಿರುವ ಸರ್ಕಾರದ ಗೋಮಾಳ!

ಆಶ್ರಯ ಯೋಜನೆಯ ಅಡಿಯಲ್ಲಿ ಈಗಾಗಲೇ ಸಾಕಷ್ಟು ಬಡ ಕುಟುಂಬಗಳು ನಿವೇಶನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದೆ. ಇಂತಹ ಬಡವರಿಗೆ ನಿವೇಶನ ಒದಗಿಸಲು ಸರ್ಕಾರ ಕೆಲವು ಪ್ರದೇಶಗಳಲ್ಲಿ, ಗೋಮಾಳದ ಭೂಮಿಯನ್ನು ಹಂಚಿಕೆ ಮಾಡಲು ನಿರ್ಧರಿಸಿ. ಸರ್ಕಾರ ಮೀಸಲಿಟ್ಟ ಜಾಗ (ಬೆಂಗಳೂರಿನ ಸುತ್ತಮುತ್ತದ ಪ್ರಮುಖ ನಾಲ್ಕು ತಾಲೂಕುಗಳು) ಎಷ್ಟಿದೆ ಎಂದರೆ,

ದೇವನಹಳ್ಳಿ 62.14 ಎಕರೆ.
ದೊಡ್ಡಬಳ್ಳಾಪುರ 93.39 ಎಕರೆ.
ಹೊಸಕೋಟೆ 324.20 ಎಕರೆ.
ನೆಲಮಂಗಲ 46.37 ಎಕರೆ. ಒಟ್ಟು 527 ಎಕರೆ ಜಾಗವನ್ನು ಮೀಸಲಿಟ್ಟಿದೆ.

ಗೃಹಲಕ್ಷ್ಮಿ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಸುಲಭ ಮಾರ್ಗ; ಡೈರೆಕ್ಟ್ ಲಿಂಕ್

ಅರ್ಜಿ ಸಲ್ಲಿಸಿದವರಿಗೆ ನಿವೇಶನ ವಿತರಣೆ!

housing schemeಸುಮಾರು ಐದು ವರ್ಷಗಳ ಹಿಂದೆ ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯಡಿಯಲ್ಲಿ ಅರ್ಹ ಫಲಾನುಭವಿಗಳ ಸಮೀಕ್ಷೆ ಮಾಡಲಾಗಿತ್ತು. ಕಡು ಬಡವರು, ನಿವೇಶನ ರಹಿತ ಕುಟುಂಬವನ್ನು ಗುರುತಿಸಿ ಅಂತವರ ಲಿಸ್ಟ್ ಗ್ರಾಮ ಪಂಚಾಯಿತಿಗೆ ಕಳುಹಿಸಲಾಗಿದೆ.

ಈಗ ಗ್ರಾಮ ಪಂಚಾಯತ್ (grama panchayat) ಗೆ ರವಾನೆ ಮಾಡಲಾಗಿರುವ ಲಿಸ್ಟ್ ಮರು ಪರಿಶೀಲಿಸಿ ಅಂತವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಮೇಲಿನ ನಾಲ್ಕು ತಾಲೂಕುಗಳಲ್ಲಿ ಮೀಸಲಾಗಿರುವ ಗೋಮಾಳದ ಜಾಗವನ್ನು ಸೈಟ್ ಜಾಗ ಎಂದು ಪರಿಗಣಿಸಿ ಪಹಣಿಯಲ್ಲಿಯೂ ಅದನ್ನು ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಗಲಿದೆ ಈ ಯೋಜನೆಯ ಉಚಿತ ಪ್ರಯೋಜನ!

ನಿವೇಶನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ! (Apply for site)

ನೀವು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿದ್ದರೆ, ಅರ್ಜಿ ಸಲ್ಲಿಸಿದೆ ಆಶ್ರಯ ಯೋಜನೆಯಡಿಯಲ್ಲಿ ಸೈಟ್ ಪಡೆಯಬಹುದು. ಈ ಹಿಂದೆ ಯಾವುದೇ ವಸತಿ ಯೋಜನೆ ಅಥವಾ ನಿವೇಶನ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಂಡಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಮಹಿಳೆಯರು, ವಿಧವೆಯರು, ವಿಶೇಷ ಚೇತನರು, ಮಾಜಿ ಯೋಧರು ಅರ್ಜಿ ಸಲ್ಲಿಸಿದರೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಮುಖ್ಯವಾಗಿ ರೇಶನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ವಾಸ ಸ್ಥಳದ ಪ್ರಮಾಣ ಪತ್ರ ಮೊದಲಾದ ವಿವರಗಳನ್ನು ನೀಡಬೇಕು.

Free site allocation for homeless people under Ashraya Yojana

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories