ಗೃಹಜ್ಯೋತಿ ಫ್ರೀ ಕರೆಂಟ್! ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್

Story Highlights

ಉಚಿತ ವಿದ್ಯುತ್ ಪಡೆಯುವವರಿಗೆ ಮತ್ತೊಂದು ಆಘಾತಕಾರಿ ಸುದ್ದಿ; 6,000 ಕೋಟಿ ರೂಪಾಯಿಗಳ ಕೊರತೆ!

ಈ ಬಾರಿ ಮಳೆಯ ಕೊರತೆ ( lack of rain) ರೈತರ ಬೆಳೆಗಳಿಗೆ ತೊಂದರೆ ಮಾಡಿರುವುದು ಮಾತ್ರ ಅಲ್ಲದೆ, ರಾಜ್ಯದಲ್ಲಿ ಜನರ ಬೇಡಿಕೆಗೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆ (Power generation) ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಅದು ಅಲ್ಲದೆ ಸರ್ಕಾರ ಈಗಾಗಲೇ ಗೃಹಜ್ಯೋತಿ ಯೋಜನೆ (Gruha jyothi scheme) ಯಡಿಯಲ್ಲಿ ಉಚಿತ ವಿದ್ಯುತ್ (free electricity) ಅನ್ನು ಕೂಡ ನೀಡುತ್ತಿದೆ, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನ ಆಗಿದೆ ನಿಜ. ಆದರೆ ಇದೇ ಉಚಿತ ಯೋಜನೆ ವಿದ್ಯುತ್ ಸರಬರಾಜು ಕಂಪನಿ (power supply companies) ಗಳಿಗೆ ಕಗ್ಗಂಟಾಗಿದೆ.

ಗೃಹಲಕ್ಷ್ಮಿ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಸುಲಭ ಮಾರ್ಗ; ಡೈರೆಕ್ಟ್ ಲಿಂಕ್

ಸಹಾಯಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ವಿದ್ಯುತ್ ಕಂಪನಿಗಳ ಮನವಿ!

ಮೆಸ್ಕಾಂ, ಬೆಸ್ಕಾಂ, ಜೆಸ್ಕಾಂ, ಎಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರಕ್ಕೆ ಒಟ್ಟು 6242.53 ಕೋಟಿ ರೂಪಾಯಿಗಳ ಸಹಾಯಧನ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹಣಕಾಸು ಇಲಾಖೆಯ (department of finance) ಆಯವ್ಯಯ ಹಂಚಿಕೆಯಲ್ಲಿ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಸಹಾಯಧನ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ.

ಆರ್ಥಿಕ ಇಲಾಖೆಗೆ ಹೊರೆಯಾದ ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆ!

ಸರ್ಕಾರ ಈಗಾಗಲೇ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ಇದಕ್ಕಾಗಿ ಸರ್ಕಾರ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಹಣ ನೀಡಬೇಕು. ಇದರ ಜೊತೆಗೆ ರೈತರ ಜಮೀನುಗಳಿಗೆ ಪಂಪ್ ಸೆಟ್ (pump set for irrigation land) ಮೂಲಕ ವಿದ್ಯುತ್ ಸರಬರಾಜು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, 10 ಹೆಚ್ಚು ವರೆಗಿನ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಅನುಕೂಲವಾಗುವಂತೆ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು 6242.53 ಕೋಟಿ ರೂಪಾಯಿಗಳ ಸಹಾಯಧನವನ್ನು ಆರ್ಥಿಕ ಇಲಾಖೆ ಒದಗಿಸಲು ಸಾಧ್ಯವಾಗದೆ ಕಂಗಾಲಾಗಿದೆ.

ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಗಲಿದೆ ಈ ಯೋಜನೆಯ ಉಚಿತ ಪ್ರಯೋಜನ!

Electricity Billಅಯವ್ಯಯ ಹಂಚಿಕೆ ಅನುದಾನದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನ ನೀಡುವ ಬಗ್ಗೆ ಕಂಪನಿಗಳು ಮನವಿ ಸಲ್ಲಿಸಿರುವ ಬಗ್ಗೆ ಆರ್ಥಿಕ ಇಲಾಖೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದೆ.

ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆಗೆ ಸರ್ಕಾರ ನಿರ್ಧಾರ

ಉಚಿತ ವಿದ್ಯುತ್ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಹಣ!

2023 24ನೇ ಸಾಲಿನಲ್ಲಿ ಉಚಿತ ವಿದ್ಯುತ್ ಯೋಜನೆ, ಪಂಪ್ಸೆಟ್ ಗಳಿಗೆ ವಿದ್ಯುತ್, ಕುಟೀರ ಜ್ಯೋತಿ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ 13,143 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಆದರೆ 2023ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ವೆಚ್ಚಕ್ಕಾಗಿ ಒಟ್ಟು 14803.53 ಕೋಟಿ ರೂಪಾಯಿಗಳ ಬೇಡಿಕೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ ನಿಂದ ನವೆಂಬರ್ 2023ರ ವರೆಗೆ ಬೇಡಿಕೆ ಇದ್ದ 14,803 ಕೋಟಿ ರೂಪಾಯಿಗಳಲ್ಲಿ ಮುಂಗಡ (advance) 2000ಗಳನ್ನು ಹೊರತುಪಡಿಸಿ 8,561 ಕೋಟಿ ರೂಪಾಯಿಗಳ ಸಹಾಯಧನ ಹಾಗೂ ಹೆಚ್ಚುವರಿ ವಿದ್ಯುತ್ ಬೇಡಿಕೆಯಿಂದಾಗಿ ಅದನ್ನು ಒದಗಿಸಲು 6,242 ಕೋಟಿ ರೂಪಾಯಿಗಳ ಸಹಾಯಧನವನ್ನು ಒದಗಿಸಲು ಬೇಡಿಕೆ ಇಡಲಾಗಿದೆ.

ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ಸಹಾಯಧನವನ್ನು ಸೀಮಿತಗೊಳಿಸಲು ಆರ್ಥಿಕ ಇಲಾಖೆ ನಿರ್ಧರಿಸಿದೆ. ಇದರಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳು ಕೇಳಿದಷ್ಟು ಹಣವನ್ನು ಸಹಾಯಧನವಾಗಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಇದರಿಂದಾಗಿ ಗ್ರಾಹಕರಿಗೆ ಸಿಗುತ್ತಿರುವ ವಿದ್ಯುತ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಹಿಳೆಯರಿಗೆ ಗೃಹಲಕ್ಷ್ಮಿ ನಂತರ ಮತ್ತೊಂದು ಯೋಜನೆ; ಸಿಗಲಿದೆ 3 ಲಕ್ಷ ರೂಪಾಯಿ

Big update for those who are getting free electricity

Related Stories