ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳು ಜಾರಿಗೆ ಬಂದು ಆರು ತಿಂಗಳು ಕಳೆದಿವೆ. ಆದರೂ ಇದುವರೆಗೆ ಉಚಿತ ಅಕ್ಕಿ ಒದಗಿಸಲು ಮಾತ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಹೌದು, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ, ರಾಜ್ಯ ಸರ್ಕಾರವು ಕೂಡ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸುವುದಾಗಿ ಭರವಸೆ ನೀಡಿತ್ತು.

Do this if Annabhagya Yojana money not reached your Bank account yet

ಆದರೆ ಈ ಯೋಜನೆ ಜಾರಿಗೆ ಬಂದ ಆರು ತಿಂಗಳು ಕಳೆದರೂ ಉಚಿತ ಅಕ್ಕಿ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈಗಲೂ ಕೂಡ ಅನ್ನಭಾಗ್ಯ ಯೋಜನೆಯ 5 ಕೆ.ಜಿ ಉಚಿತ ಅಕ್ಕಿ (free rice) ಯ ಬದಲು ಪ್ರತಿ ವ್ಯಕ್ತಿಗೆ ಒಂದು ಕೆಜಿಗೆ 34 ರೂಪಾಯಿಗಳಂತೆ 170ಗಳನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.

ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ಉಚಿತ ಸೈಟ್ ಹಂಚಿಕೆ! ಅರ್ಜಿ ಹಾಕಿ

ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿ! (Check your DBT status)

ಅನ್ನಭಾಗ್ಯ ಯೋಜನೆಯ ಹಣ ರೇಷನ್ ಕಾರ್ಡ್ (Ration Card) ನಲ್ಲಿ ಇರುವ ಯಜಮಾನನ ಹೆಸರಿಗೆ ಪ್ರತಿ ತಿಂಗಳು ಜಮಾ (Money Deposit) ಮಾಡಲಾಗುತ್ತಿದೆ. ಐದು ಕಂತಿನ ಹಣ ಬಿಡುಗಡೆ ಆಗಿದ್ದು, ನೀವು ಅಧಿಕೃತ ವೆಬ್ಸೈಟ್ ಮೂಲಕ ಚೆಕ್ ಮಾಡಬಹುದು.

Data not found ಎಂದು ತೋರಿಸಿದರೆ ಏನರ್ಥ?

Annabhagya Scheme*ನೀವು ಅನ್ನಭಾಗ್ಯ ಯೋಜನೆ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಲಿಂಕ್ ಓಪನ್ ಮಾಡಿ.

*ಈಗ ಎಡ ಭಾಗದಲ್ಲಿ ಕಾಣುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿದ್ರೆ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ.

*ಇದರ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಮೂರು ಲಿಂಕ್ಗಳು ಕಾಣಿಸುತ್ತವೆ. ಅದರ ಕೆಳಗೆ ಇರುವ ಜಿಲ್ಲೆಗಳನ್ನು ನೋಡಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಗುರುತಿಸಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

*ನಂತರ ಮತ್ತೊಂದು ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಡಿ ಬಿ ಟಿ ಸ್ಟೇಟಸ್ (ನೇರ ವರ್ಗಾವಣೆ) ಎನ್ನುವ ಆಯ್ಕೆ ಮಾಡಿ.

*ಬಳಿಕ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ನೀವು ಯಾವ ತಿಂಗಳಿನ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ಬಯಸುತ್ತಿರೋ ಆ ತಿಂಗಳು ಹಾಗೂ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಸುಲಭ ಮಾರ್ಗ; ಡೈರೆಕ್ಟ್ ಲಿಂಕ್

*ಈಗ ನಿಮಗೆ ನಿಮ್ಮ ಖಾತೆಗೆ (Bank Account) ಹಣ ಜಮಾ ಆಗಿದ್ದರೆ ಖಾತೆಯ ವಿವರ ಸದಸ್ಯರ ಸಂಖ್ಯೆ ಎಷ್ಟು ಹಣ ಜಮಾ ಆಗಿದೆ ಎಲ್ಲಾ ವಿವರಗಳನ್ನು ನೋಡಬಹುದು.

ಈ ರೀತಿ ಡಿಬಿಟಿ ಸ್ಟೇಟಸ್ ಚೆಕ್ ಮಾಡುವಾಗ ಒಂದು ವೇಳೆ ಡಾಟಾ ನೋಟ್ ಫೌಂಡ್ (data not found) ಎಂದು ಬಂದರೆ, ನೀವು ಮೂರು ಲಿಂಕ್ ಗಳ ಅಡಿಯಲ್ಲಿ ಇರುವ ಜಿಲ್ಲೆಗಳನ್ನು ಸರಿಯಾಗಿ ಆಯ್ಕೆ ಮಾಡಿ ಲಿಂಕ್ ಕ್ಲಿಕ್ ಮಾಡಿಲ್ಲ ಎಂದು ಅರ್ಥ.

ಅಂತಹ ಸಂದರ್ಭದಲ್ಲಿ ಮೊದಲಿನಿಂದ ಪ್ರೋಸೆಸ್ ಆರಂಭಿಸಿ ಸರಿಯಾದ ಜಿಲ್ಲೆಯನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗುತ್ತದೆ.

ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಗಲಿದೆ ಈ ಯೋಜನೆಯ ಉಚಿತ ಪ್ರಯೋಜನ!

If the Annabhagya Yojana status is shown like this, the money will not come