ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್; ಇನ್ಮುಂದೆ ಮಿಸ್ ಆಗದೇ ಹಣ ಜಮಾ ಆಗುತ್ತೆ
10 ಕೆಜಿ ಉಚಿತ ಅಕ್ಕಿ (free rice) ವಿತರಣೆಯ ಬದಲು 5 ಕೆಜಿ ಅಕ್ಕಿ ವಿತರಣೆ ಹಾಗೂ ಐದು ಕೆಜಿ ಅಕ್ಕಿಯ ಹಣ ವರ್ಗಾವಣೆ ಪ್ರಕ್ರಿಯೆ ಇಂದಿಗೂ ಮುಂದುವರೆದಿದೆ. ರಾಜ್ಯ ಸರ್ಕಾರ (State government) ಕ್ಕೆ ಕಳೆದ ಆರು ತಿಂಗಳಿನಿಂದ ಇಲ್ಲಿಯವರೆಗೂ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ಈಗಲೂ ಕೂಡ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಜನರು ಹಣ ಪಡೆದುಕೊಳ್ಳುತ್ತಿದ್ದಾರೆ.
ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ! ಕನ್ನಡಿಗರಿಗೆ ಉದ್ಯೋಗ ಮೀಸಲು
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಲು ಈ ಕೆಲಸ ಮಾಡಿ!
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಒಂದು ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಪ್ರತಿಯೊಬ್ಬ ಫಲಾನುಭವಿ ಸದಸ್ಯರು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಯಾರ ಬ್ಯಾಂಕ್ ಖಾತೆಗೆ (Bank Account) ಈ ಕೆವೈಸಿ (E-KYC) ಆಗಿಲ್ಲವೋ ಅಂತವರ ಖಾತೆಗೆ ಹಣ ಜಮಾ (Money Deposit) ಆಗಲು ಸಾಧ್ಯವೇ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಇದರ ಜೊತೆಗೆ ಸಾಕಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ (pradhanmantri Jan dhan Yojana) ಯ ಖಾತೆಯನ್ನು ಹೊಂದಿರುವವರು ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡದೆ ಇದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲು (bank account inactivated) ಬ್ಯಾಂಕಿಗೆ ಆದೇಶ ಹೊರಡಿಸಲಾಗಿತ್ತು.
ಹೀಗಾಗಿ ಹಳ್ಳಿಯಲ್ಲಿ ವಾಸಿಸುವ ಜನರು, ಖಾತೆಯನ್ನು ಬಳಕೆ ಮಾಡದೆ ಇದ್ದಿದ್ದಕ್ಕಾಗಿ, ಅಂತವರ ಖಾತೆಯನ್ನು ನಿಷ್ಪ್ರಿಯಗೊಳಿಸಲಾಗಿದೆ. ಆದರೆ ಇದೇ ಖಾತೆ ಅನ್ನಭಾಗ್ಯ ಯೋಜನೆಗೆ ಕೂಡ ಕನೆಕ್ಟ್ ಆಗಿತ್ತು. ಖಾತೆ ಆಕ್ಟಿವ್ (active account) ಆಗಿರದೆ ಇರುವುದರಿಂದ, ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಿಲ್ಲ.
ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!
ಹೀಗಾಗಿ ಯಾರ ಖಾತೆ ಸಕ್ರಿಯವಾಗಿಲ್ಲವೋ ಅಂತವರು, ತಕ್ಷಣವೇ ಬ್ಯಾಂಕ್ ಗೆ ಹೋಗಿ ಅಗತ್ಯ ಇರುವ ಮಾಹಿತಿ, ದಾಖಲೆ ನೀಡಿ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಿ. ಬಳಿಕ ಸಕ್ರಿಯೆಗೊಂಡ ಖಾತೆಯ ಮಾಹಿತಿಯನ್ನು, ತಶೀಲ್ದಾರರ ಕಛೇರಿ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ನೀಡಬೇಕು. ಜೊತೆಗೆ ನ್ಯಾಯ ಬೆಲೆ ಅಂಗಡಿಗೆ ನೀಡಬೇಕು.
ಆಧಾರ್ ಕಾರ್ಡ್ (Aadhaar Card) ಮತ್ತು ಮೊಬೈಲ್ ಸಂಖ್ಯೆಯ ಜೊತೆಗೆ ಬ್ಯಾಂಕ್ ಖಾತೆಯನ್ನು ಮತ್ತೆ ಆಕ್ಟಿವ್ ಮಾಡಿಸಿಕೊಳ್ಳಬಹುದು. ಪ್ರತಿಯೊಂದು ಖಾತೆಗೂ ಕೂಡ ಈಕೆವೈಸಿ ಕಡ್ಡಾಯ ಆಗಿರುವುದರಿಂದ, ರೇಷನ್ ಕಾರ್ಡ್ ನಲ್ಲಿ ಯಾವ ಸದಸ್ಯರ ಹೆಸರು ಇರುತ್ತದೆಯೋ ಎಲ್ಲ ಸದಸ್ಯರು ಕೂಡ ಈಕೆವೈಸಿ ಮಾಡಿಸಿಕೊಂಡಿರಬೇಕು.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್
ಅನ್ನಭಾಗ್ಯ ಹಣ ಖಾತೆಗೆ ಬಂದಿದ್ಯೋ ಇಲ್ಲವೊ ತಿಳಿಯುವುದು ಹೇಗೆ? (Check DBT status)
ಇದಕ್ಕೆ ನೀವು ಸುಲಭವಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/status2/ ಹೋಗಿ, ನೇರ ನಗದು ವರ್ಗಾವಣೆ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. Status of DBT ಯಲ್ಲಿ ರೇಷನ್ ಕಾರ್ಡ್ ಸಂಖ್ಯೆ, ಕ್ಯಾಪ್ಚ ಸಂಖ್ಯೆ ಹಾಗೂ ತಿಂಗಳು ಆಯ್ಕೆ ಮಾಡಿ ಗೋ ಎಂದು ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ಖಾತೆಗೆ (Bank Account) ಜಮಾ ಮಾಡಲಾಗಿರುವ ಹಣದ ವಿವರ ಕಾಣಿಸುತ್ತದೆ.
ಅನ್ನಭಾಗ್ಯ ಯೋಜನೆಯ ಮಹತ್ವದ ಅಪ್ಡೇಟ್; ಸ್ಕೀಮ್ ನಲ್ಲಿ ಧಿಡೀರ್ ಬದಲಾವಣೆ
Annabhagya Yojana Update, Money will be deposited without missing from now on