Karnataka NewsBangalore News

ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಸೈಟ್; ಅಪ್ಲೈ ಮಾಡಿ

ಆಶ್ರಯ ಯೋಜನೆ (Ashraya scheme) ಯ ಅಡಿಯಲ್ಲಿ ಈಗಾಗಲೇ ಸಾಕಷ್ಟು ಸರ್ಕಾರಿ ಸೈಟ್ (site distribution) ಗಳನ್ನು ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಯೋಜನೆ ಅಡಿಯಲ್ಲಿ ಇದೀಗ ಲಕ್ಷಾಂತರ ಜನ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ.

Housing Scheme

ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ

ರಾಜ್ಯ ಸರ್ಕಾರದ ಆಶ್ರಯ ಯೋಜನೆ (Ashraya scheme)

ಸ್ವಂತ ಮನೆ ಇಲ್ಲದವರಿಗೆ ನಿವೇಶನ ಭಾಗ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿ ಕೊಡಲಿದೆ. ಇದರಿಂದಾಗಿ ಲಕ್ಷಾಂತರ ಜನ ತಮ್ಮದೇ ಆಗಿರುವ ಸ್ವಂತ ಜಾಗವನ್ನು (Own Land) ಪಡೆದುಕೊಂಡು ಅಲ್ಲಿ ಸ್ವಂತ ಮನೆಯನ್ನು (Own House) ಕೂಡ ನಿರ್ಮಾಣ ಮಾಡಿಕೊಳ್ಳಬಹುದು.

ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಪ್ರತಿಯೊಬ್ಬರೂ ಕೂಡ ತಮ್ಮದೇ ಆಗಿರುವ ಸ್ವಂತ ಸೂರು ಹೊಂದಿರಬೇಕು ಎನ್ನುವ ಉದ್ದೇಶದಿಂದ ಕೆಲವು ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಾಣ ಮಾಡಿ ಕೊಟ್ಟರೆ, ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನವನ್ನು ಜನರಿಗೆ ನೀಡಲಿದೆ.

ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಎಲ್ಲರಿಗೂ ಇರುತ್ತೆ ನಿಜ. ಆದ್ರೆ ಬಡವರು, ಹಿಂದುಳಿದ ವರ್ಗದವರು, ಅಲೆಮಾರಿಗಳು ಮೊದಲಾದವರಿಗೆ ಹಣಕಾಸಿನ ಸಮಸ್ಯೆಯಿಂದಾಗಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಸಣ್ಣ ಪುಟ್ಟ ಗುಡಿಸಲು ಅಥವಾ ಬಾಡಿಗೆ ಮನೆಯಲ್ಲಿ (rented house) ಜೀವನ ಕಳೆಯಬೇಕಾಗುತ್ತದೆ. ಆದರೆ ಮನೆ ಎನ್ನುವುದು ಮೂಲಭೂತ ಅವಶ್ಯಕತೆಯಾಗಿದ್ದು ಎಲ್ಲಾ ಫಲಾನುಭವಿಗಳಿಗೆ ನಿವೇಶನ ನೀಡುವ ಮೂಲಕ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸನ್ನು ಈಡೇರಿಸಲು ಸರ್ಕಾರ ಹೊರಟಿದೆ.

ಅನ್ನಭಾಗ್ಯ ಯೋಜನೆ ಉಚಿತ ಹಣ ಇನ್ಮುಂದೆ ಸಿಗೋದಿಲ್ಲ; ಸರ್ಕಾರದ ಹೊಸ ಅಪ್ಡೇಟ್

housing schemeಆಶ್ರಯ ಯೋಜನೆಯ ಅಡಿಯಲ್ಲಿ ನಿರಾಶ್ರಿತರಿಗೆ ನಿವೇಶನ!

ಕಳೆದ ಐದು ವರ್ಷಗಳ ಹಿಂದೆ ರಾಜೀವ್ ಗಾಂಧಿ ನಿವೇಶನ ನಿಗಮ (Rajiv Gandhi niveshan scheme) ದಿಂದ ಸರ್ವೆ ಕಾರ್ಯ ನಡೆಸಲಾಗಿತ್ತು. ಅತಿ ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ನಿವೇಶನದ ಅಗತ್ಯ ಇದ್ದರೆ ಅವರಿಂದ ಅರ್ಜಿ ಪಡೆದು ಅವರಿಗೆ ನಿವೇಶನ ನೀಡಲು ಸರ್ಕಾರ ಯೋಜನೆ ರೂಪಿಸಿತ್ತು.

ಇದೀಗ ಕಡುಬಡತನದಲ್ಲಿ ಇರುವ ಹಾಗೂ ಬಹಳ ಕೆಟ್ಟ ಪರಿಸ್ಥಿತಿಯ ಮನೆಯಲ್ಲಿ ಉಳಿದುಕೊಂಡಿರುವ ಫಲಾನುಭವಿಗಳ ಜಾಗಕ್ಕೆ ಹೋಗಿ ಅವರ ಪರಿಸ್ಥಿತಿ ಬಿಂಬಿಸುವಂತಹ ಫೋಟೋವನ್ನು ತೆಗೆದು ಸರ್ಕಾರಕ್ಕೆ ರವಾನಿಸಲಾಗಿದೆ. ಈ ಫೋಟೋ, ದಾಖಲೆಗಳು ಗ್ರಾಮ ಪಂಚಾಯತ್ ಗೆ ಕೂಡ ಕಳುಹಿಸಲಾಗಿದೆ.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್; ಇನ್ಮುಂದೆ ಮಿಸ್ ಆಗದೇ ಹಣ ಜಮಾ ಆಗುತ್ತೆ

ಬೆಂಗಳೂರು ನಗರ (Bengaluru City) ದಲ್ಲಿ ನಿವೇಶನ ರಹಿತರಿಗೆ (landless people) ನಿವೇಶನ ಒದಗಿಸಲು 527.30 ಎಕರೆ ಜಮೀನನ್ನು ಸರ್ಕಾರ ಮೀಸಲಿಟ್ಟಿದೆ. ಇದನ್ನು ಈಗಾಗಲೇ ಸೈಟ್ ಗಳಾಗಿ ಪರಿವರ್ತಿಸಲಾಗಿದ್ದು, ಫಲಾನುಭವಿಗಳಿಗೆ ವಿತರಣೆ ಮಾಡಲಿದೆ. ಹಾಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆದಷ್ಟು ಬೇಗ ನಿವೇಶನ ವಿತರಣೆ ಮಾಡಲಾಗುವುದು ಎಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to apply)

*ಅರ್ಜಿದಾರರು ಯಾವುದೇ ಆಸ್ತಿಯನ್ನು ಹೊಂದಿರುವಂತಿಲ್ಲ. ಸ್ವಂತ ಮನೆ ಇರುವ ಕುಟುಂಬ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

*ಅರ್ಜಿ ಸಲ್ಲಿಸುವಾಗ ನೋಟರಿ ಅಫಿಡವಿಟ್ (notary affidavit) ಲಗತ್ತಿಸುವುದು ಕಡ್ಡಾಯ.

*ಅರ್ಜಿ ಸಲ್ಲಿಸುವಾಗ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ವಿಶೇಷವಾಗಿ ಅರ್ಜಿ ಸಲ್ಲಿಸಬಹುದು.

*ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಅಳತೆಯ ಫೋಟೋ ಮೊದಲಾದ ದಾಖಲೆಗಳನ್ನು ಹೊಂದಿರಬೇಕು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್

*ವಿಕಲಚೇತನರು ಅರ್ಜಿ ಸಲ್ಲಿಸುವುದಾದರೆ ಸರ್ಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಹೊಂದಿರಬೇಕು.

*ಮಹಿಳೆಯರು, ವಿಚ್ಛೇದಿತ ಮಹಿಳೆ, ವಿಕಲಚೇತನರಿಗೆ (physically challenged) ಮೊದಲ ಆದ್ಯತೆಯಲ್ಲಿ ನಿವೇಶನ ನೀಡಲಾಗುವುದು.

ಸದ್ಯದಲ್ಲಿಯೇ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸರ್ಕಾರ ನಿರ್ಧರಿಸಿದ್ದು ಬೆಂಗಳೂರು ನಗರದಲ್ಲಿ ವಾಸಿಸುವ ಹಲವು ಕುಟುಂಬಗಳು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ.

free site by the government Those who dont have Own House

Our Whatsapp Channel is Live Now 👇

Whatsapp Channel

Related Stories