ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ

Ration Card : ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರ ಹೆಸರು ಸೇರಿಕೊಳ್ಳದೆ ಇದ್ದರೆ ಅಥವಾ ಇದ್ದ ಹೆಸರು ಡಿಲೀಟ್ (delete) ಆಗಿದ್ದರೆ ನೀವು ಅದನ್ನು ಪುನಃ ಸೇರಿಸಿಕೊಳ್ಳಲು ಅವಕಾಶವಿದೆ

ಪಡಿತರ ಚೀಟಿ (Ration Card) ಹೊಂದಿರುವವರಿಗೆ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಸರ್ಕಾರದ ಉಚಿತ ಯೋಜನೆಯ ಪ್ರಯೋಜನ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಹಿಡಿದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳ ವರೆಗೆ ರೇಷನ್ ಕಾರ್ಡ್ ಬಹಳ ಪ್ರಮುಖವಾಗಿರುವ ದಾಖಲೆ ಎನಿಸಿದೆ.

ಅನ್ನಭಾಗ್ಯ ಯೋಜನೆ ಉಚಿತ ಹಣ ಇನ್ಮುಂದೆ ಸಿಗೋದಿಲ್ಲ; ಸರ್ಕಾರದ ಹೊಸ ಅಪ್ಡೇಟ್

ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ - Kannada News

ಬಡ ವರ್ಗದವರು, ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ. ಇನ್ನು ಬಡವರಿಗೆ ಅನುಕೂಲವಾಗಲು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಕೂಡ ಇದ್ರೆ ಆ ಕುಟುಂಬಕ್ಕೆ ಹೆಚ್ಚಿನ ಪಡಿತರ ಕೂಡ ಸಿಗುತ್ತದೆ.

ಡಿಲೀಟ್ ಆದ ಹೆಸರನ್ನು ತಕ್ಷಣ ಸೇರಿಸಿಕೊಳ್ಳಿ! (Add names in Ration card)

ಒಂದು ವೇಳೆ ಯಾವುದಾದ್ರೂ ತಾಂತ್ರಿಕ ದೋಷ (technical issues) ದಿಂದ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಸದಸ್ಯರ ಹೆಸರು ಸೇರಿಕೊಳ್ಳದೆ ಇದ್ದರೆ ಅಥವಾ ಇದ್ದ ಹೆಸರು ಡಿಲೀಟ್ (delete) ಆಗಿದ್ದರೆ ನೀವು ಅದನ್ನು ಪುನಃ ಸೇರಿಸಿಕೊಳ್ಳಲು ಅವಕಾಶವಿದೆ

ಮೊಬೈಲ್ (mobile) ನಲ್ಲಿ ಅಥವಾ ಕಂಪ್ಯೂಟರ್ (computer) ಮೂಲಕ ಆನ್ಲೈನ್ (online) ನಲ್ಲಿಯೇ ರೇಷನ್ ಕಾರ್ಡ್ ನಲ್ಲಿ ತಪ್ಪಿ ಹೋಗಿರುವ ಹೆಸರುಗಳನ್ನು ಸೇರಿಸಿಕೊಳ್ಳಲು ಸಾಧ್ಯವಿದೆ. ಅದು ಹೇಗೆ ನೋಡೋಣ?

ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಮಿಸ್ ಆಗದೆ ಪಡೆಯೋಕೆ ಹೊಸ ಅಪ್ಡೇಟ್

BPL Ration Cardಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ. ಮುಖ್ಯವಾಗಿ ನಿಮ್ಮ ಪಡಿತರ ಚೀಟಿ ಆಧಾರ್ ಕಾರ್ಡ್ (Aadhaar Card) ಹಾಗೂ ವಿಳಾಸ ಪುರಾವೆ ನೀಡುವಂತಹ ವಾಹನ ಚಾಲನಾ ಪರವಾನಗಿ, ವೋಟರ್ ಐಡಿ (voter ID) ಪಾನ್ ಕಾರ್ಡ್ (PAN card) ಯಾವುದೇ ಒಂದು ಗುರುತಿನ ಚೀಟಿ ಒದಗಿಸಬೇಕು.

ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್; ಇನ್ಮುಂದೆ ಮಿಸ್ ಆಗದೇ ಹಣ ಜಮಾ ಆಗುತ್ತೆ

ಆನ್ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಿ!

ರೇಷನ್ ಕಾರ್ಡ್ ನಲ್ಲಿ ಆನ್ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://epds.nic.in/ ಭೇಟಿ ನೀಡಿ.

ಮುಖಪುಟದಲ್ಲಿ ರೇಷನ್ ಕಾರ್ಡ್ ಕರೆಕ್ಷನ್ (ration card correction) ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ ನಿಮ್ಮ ಪಡಿತರ ಚೀಟಿ ಹಾಗೂ ಆಧಾರ್ ಸಂಖ್ಯೆ ಎರಡನ್ನು ನಮೂದಿಸಬೇಕು.

ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!

ಈಗ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ. ರೇಷನ್ ಕಾರ್ಡ್ ಎಲ್ಲಾ ಮಾಹಿತಿಯು ಲಭ್ಯವಾಗುತ್ತದೆ. ನಂತರ ಹೆಸರು ನವೀಕರಣಕ್ಕೆ ಇಲ್ಲಿ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಅಗತ್ಯ ಇರುವ ಹೆಸರು ಸೇರ್ಪಡೆ ಮಾಡಿದ ನಂತರ ಸಬ್ಮಿಟ್ (submit) ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

ಈ ರೀತಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮರೆಯಾದ ಅಥವಾ ಡಿಲೀಟ್ ಆಗಿರುವ ಹೆಸರನ್ನು ಸೇರ್ಪಡೆ ಮಾಡಬಹುದು. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡಲು ಕೂಡ ಅವಕಾಶವಿದೆ ಹಾಗಾಗಿ ನೀವು ಹೆಸರು ಸೇರ್ಪಡೆ ಮಾಡಿದ ನಂತರ ಸ್ಟೇಟಸ್ ಚೆಕ್ ಮಾಡಬಹುದು.

Add deleted name in ration card online, Here is the detail

Follow us On

FaceBook Google News

Add deleted name in ration card online, Here is the detail