ಜನವರಿ 22, 2024 ಹಿಂದೆಂದೂ ಕೇಳರಿಯದ ಅದ್ಭುತಕ್ಕೆ ಸಾಕ್ಷಿ ಆಗಲಿದೆ. ಇಷ್ಟು ವರ್ಷಗಳಿಂದ ಅಥವಾ ಶತಮಾನಗಳಿಂದ ಕಾಯುತ್ತಿದ್ದ ಬಹುದೊಡ್ಡ ಕೆಲಸ ಜನವರಿ 22ರಂದು ನೆರವೇರಲಿದೆ. ಯಂತರ ಜನರು ಈ ಒಂದು ಅದ್ಭುತ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ.
ಅದುವೇ ಶ್ರೀ ರಾಮ ಮಂದಿರದ ಉದ್ಘಾಟನೆ (Sri Rama Mandir inauguration) ಹಾಗೂ ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ. ಈಗಾಗಲೇ ಮನೆ ಮನೆಗಳಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ಬಗ್ಗೆ ಕುತೂಹಲ ಮೂಡಿದೆ. ಸಾಕಷ್ಟು ಮನೆಗಳಿಗೆ ಜನರು ಹೋಗಿ ರಾಮಮಂದಿರ ಉದ್ಘಾಟನೆಯ ದಿನ ದೀಪ ಹಚ್ಚುವಂತೆ ಅಥವಾ ದೀಪಾವಳಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಚೆಕ್ ಮಾಡುವ ಲಿಂಕ್ ಇಲ್ಲಿದೆ
ಈ ಐತಿಹಾಸಿಕ ಕ್ಷಣಕ್ಕೆ ಪ್ರತಿಯೊಬ್ಬರೂ ಸಾಕ್ಷಿ ಆಗಬೇಕು ಎನ್ನುವ ಕಾರಣಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿ ಶಾಲಾ ಕಾಲೇಜು (holiday for school and colleges) ಗಳಿಗೆ ಸರ್ಕಾರಿ ಕಚೇರಿಗಳಿಗೆ (government office) ರಜೆ ಘೋಷಣೆ ಮಾಡಲಾಗಿದೆ.
ಒಂದು ವೇಳೆ ಅಯೋಧ್ಯೆ (Ayodhya) ಗೆ ಹೋಗಲು ಸಾಧ್ಯವಾಗದೆ ಇದ್ದಲ್ಲಿ ಮನೆಯಲ್ಲಿಯೇ ಕುಳಿತು ಅಯೋಧ್ಯೆಯ ಉದ್ಘಾಟನಾ ಸಂಭ್ರಮವನ್ನು ಮಾಧ್ಯಮಗಳ ಮೂಲಕ ನೋಡಿ ಶ್ರೀರಾಮನ ಭಕ್ತಿಗೆ ಪಾತ್ರರಾಗಬೇಕು ಎಂದು ಸರ್ಕಾರ ಮಾಹಿತಿ ನೀಡಿದೆ.
ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಸೈಟ್; ಅಪ್ಲೈ ಮಾಡಿ
ಕರ್ನಾಟಕದ ಶಾಲೆಗಳಿಗೂ ಇದೆಯಾ ರಜೆ?
ಶ್ರೀರಾಮ ಮಂದಿರ ಎನ್ನುವುದು ಕೇವಲ ಉತ್ತರ ಪ್ರದೇಶ (Uttar Pradesh) ರಾಜ್ಯಕ್ಕೆ ಸಂಬಂಧಪಟ್ಟಿದ್ದಲ್ಲ. ಇದು ಇಡೀ ದೇಶಕ್ಕೆ ಸಂಬಂಧಪಟ್ಟಿದ್ದು. ಹಾಗೂ ವಿಶ್ವವೇ ಇಂದು ಅಯೋಧ್ಯೆಯ ಕಡೆಗೆ ಮುಖ ಮಾಡಿ ನೋಡಲು ಶ್ರೀರಾಮ ಮಂದಿರ ಎನ್ನುವುದು ಕಾರಣವಾಗಲಿದೆ.
ಹಾಗಾಗಿ ಶ್ರೀರಾಮ ಮಂದಿರ ಉದ್ಘಾಟನೆಯ ದಿನ ಪ್ರತಿಯೊಬ್ಬರಿಗೂ ಕೂಡ ಕೆಲಸಕ್ಕೆ ರಜೆ ಕೊಟ್ಟರೆ ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಲು ಸಹಾಯವಾಗುತ್ತದೆ ಎನ್ನುವುದು ಹಲವರ ಆಗ್ರಹ. ಹಾಗಾಗಿ ಇತರ ರಾಜ್ಯಗಳಂತೆ ಕರ್ನಾಟಕ (Karnataka) ದಲ್ಲಿಯೂ ಕೂಡ ಜನವರಿ 22, 2024 ಸಾರ್ವತ್ರಿಕ ರಜೆ (public holiday) ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ
ರಾಜ್ಯಪಾಲರಿಗೆ ಮನವಿ!
ಹಲವು ಹಿಂದೂ ಸಂಸ್ಥೆಗಳು, ಶ್ರೀ ರಾಮ ಸೇನೆ, ಶ್ರೀರಾಮ ಸಂಘಟನೆಗಳು ರಜೆ ಘೋಷಣೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಗೆ ಮಕ್ಕಳು ಕೂಡ ಸಾಕ್ಷಿ ಆಗಬೇಕು ಹಾಗಾಗಿ ಅವರಿಗೂ ಕೂಡ ರಾಜ್ಯದಲ್ಲಿ ಜನವರಿ 22ಕ್ಕೆ ರಜೆ ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಹನುಮನ ನಾಡು. ಅಯೋಧ್ಯ ರಾಮಮಂದಿರದ ಲೋಕಾರ್ಪಣೆಯ ದಿನ ಮಕ್ಕಳಿಗೆ ರಜೆಯನ್ನು ಘೋಷಿಸಿ, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು, ಮುಂದಿನ ಪೀಳಿಗೆಗೂ ತಿಳಿಸಲು ಮಕ್ಕಳನ್ನು ಸಿದ್ಧಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅನ್ನಭಾಗ್ಯ ಯೋಜನೆ ಉಚಿತ ಹಣ ಇನ್ಮುಂದೆ ಸಿಗೋದಿಲ್ಲ; ಸರ್ಕಾರದ ಹೊಸ ಅಪ್ಡೇಟ್
ಒಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಜನವರಿ 22, 2024 ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
Is January 22 a holiday for schools and colleges in Karnataka, Here is the information
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.