Karnataka News

ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್

Story Highlights

ಕಂದಾಯ ಇಲಾಖೆಯ ಹೊಸ ಅಪ್ಡೇಟ್; ರೈತರು ಸುಲಭವಾಗಿ ತಮ್ಮ ಜಮೀನಿಗೆ ದಾರಿ ಪಡೆಯಬಹುದು

Ads By Google

ಹಳ್ಳಿಗಳಲ್ಲಿ (villages) ರೈತರಿಗೆ (farmers) ಇರುವ ಸಮಸ್ಯೆಗಳಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಸಮಸ್ಯೆ ಕೂಡ ಒಂದು. ತಮಗೆ ಜಮೀನಿಗೆ ಹೋಗಲು ಸುತ್ತಮುತ್ತಲು ಬೇರೆ ಖಾಸಗಿ ಜಮೀನುಗಳು ಇದ್ರೆ ಅದನ್ನ ದಾಟಿಕೊಂಡು ತಮ್ಮ ಜಮೀನಿಗೆ (farmer land) ಹೋಗಲು ದಾರಿ ಇಲ್ಲದೆ ರೈತರು ಪರದಾಡುವಂತೆ ಆಗಿದೆ. ಇದೇ ದಾರಿ ಜಗಳ ಕೋರ್ಟ್ ಮೆಟ್ಟಿಲೇರುತ್ತದೆ.

ಇಂತಹ ವ್ಯಾಜ್ಯಗಳನ್ನು ಪರಿಹರಿಸಲು ಸರ್ಕಾರ, ರೈತರಿಗೆ ಅನುಕೂಲವಾಗುವಂತೆ, ಹೊಸ ಯೋಜನೆಯನ್ನು ರೂಪಿಸಿದೆ, ಈ ಮೂಲಕ ರೈತರು ತಮ್ಮ ಜಮೀನಿಗೆ ಹೋಗಲು ಕಾಲು ದಾರಿ ಪಡೆದುಕೊಳ್ಳಲು ಸಾಧ್ಯವಿದೆ.

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ

ಈ ಹಿಂದೆ ರೈತರು ತಮ್ಮ ಜಮೀನಿಗೆ ಹೋಗಬೇಕಾದರೆ ಕಾಲು ದಾರಿ ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ದೂರು ಸಲ್ಲಿಸಿ, ಇದರ ಪ್ರಕ್ರಿಯೆ ಬಹಳ ವಿಸ್ತಾರವಾಗಿದ್ದು ಸಾಮಾನ್ಯ ಜನರಿಗೆ ಈ ಕೆಲಸ ಮಾಡಲು ಸಾಧ್ಯವಿರಲಿಲ್ಲ.

ಜಮೀನಿಗೆ ಸಂಬಂಧಪಟ್ಟ ವ್ಯಾಜ್ಯ ತಲೆದೂರಿದಾಗ DDLR (deputy directors land record) ಕಚೇರಿಗೆ ಹೋಗಿ ದೂರು (complaint) ಸಲ್ಲಿಸಬೇಕಿತ್ತು. ಅವರು ಅದನ್ನು ನೋಡಿ ನಂತರ ಕಾಲುದಾರಿ ಅಥವಾ ಬಂಡಿದಾರಿ ಅವಶ್ಯಕತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದರು. ಆದರೆ ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಸಾಮಾನ್ಯ ರೈತರಿಗೆ ಈ ರೀತಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಕೆಲಸ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಸ್ಥಳೀಯ ತಹಶೀಲ್ದಾರರಿಗೆ ದೂರು!

ಆದರೆ ಈಗ ಕಾಲುದಾರಿ ಅಥವಾ ಬಂಡಿದಾರಿ ವ್ಯಾಜ್ಯವನ್ನ ಪರಿಹರಿಸಿಕೊಳ್ಳಲು ರೈತರಿಗೆ ಸುಲಭವಾಗಿ ಮಾರ್ಗ ಸೂಚಿಸಿದೆ. ಕಂದಾಯ ಇಲಾಖೆ, (revenue department) ಇನ್ನು ಮುಂದೆ ಸ್ಥಳೀಯ ತಹಶೀಲ್ದಾರರ ಬಳಿ ದೂರು ಸಲ್ಲಿಸಲು ರೈತರಿಗೆ ತಿಳಿಸಿದೆ.

ಜನವರಿ 22ಕ್ಕೆ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದಿಯಾ? ಇಲ್ಲಿದೆ ಮಾಹಿತಿ

ಭೂ ಕಂದಾಯ ಅಧಿನಿಯಮ ಕಾಯ್ದೆ ಪ್ರಕಾರ, ಹೋಗಿ ಬರಲು ದಾರಿ ಬಿಟ್ಟಿಡಲಾಗುತ್ತದೆ. ಆದರೆ ಜಮೀನಿನ ನಕ್ಷೆಯಲ್ಲಿ ಕಾಲುದಾರಿ ಕಾಣಿಸುತ್ತಿದ್ದು ಅದನ್ನು ಈಗ ಖಾಸಗಿ ಜಮೀನುದಾರರು ಅಥವಾ ಬೇರೆ ಯಾವುದೇ ವ್ಯಕ್ತಿ ಒತ್ತುವರಿ ಮಾಡಿ ರೈತರ ಜಮೀನಿಗೆ (Agriculture Land) ಹೋಗಲು ದಾರಿ ಇಲ್ಲದಂತೆ ಮಾಡಿದರೆ, ಅಂಥವರ ಬಗ್ಗೆ ತಹಶೀಲ್ದಾರರ ಕಚೇರಿಯಲ್ಲಿ ರೈತರು ದೂರು ಸಲ್ಲಿಸಬಹುದು ಹಾಗೂ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಯನ್ನು ಪರಿಹರಿಸಿ ಕೊಡಲಿದ್ದಾರೆ.

ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಚೆಕ್ ಮಾಡುವ ಲಿಂಕ್ ಇಲ್ಲಿದೆ

ಈ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು ನಕ್ಷೆಯಲ್ಲಿ ಇರುವ ದಾರಿ ಸ್ಥಳದಲ್ಲಿ ಕಾಣಿಸದೆ ಇದ್ದರೆ ಅದನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಅರ್ಥವಾಗುತ್ತದೆ ಹಾಗೂ ರೈತರಿಗೆ ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

The Indian Easement A – 1882 ಪ್ರಕಾರ ಯಾವುದೇ ಜಮೀನಿನ ಭೂ ಮಾಲೀಕ (land owner) ತನ್ನ ಜಮೀನಿಗೆ ಪ್ರವೇಶಿಸಲು ಹಕ್ಕನ್ನು ಪಡೆದಿರುತ್ತಾನೆ. ಹಾಗೂ ಅನ್ಯ ಬಹುಮಾಲೀಕರು ಇಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಇನ್ನು ಮುಂದೆ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ನೀಡದೆ ಅವರ ಹಕ್ಕು ನಿರಾಕರಣೆ ಮಾಡಿದರೆ ಅಂಥವರ ಮೇಲೆ ತಶೀಲ್ದಾರರ ಕಚೇರಿಗೆ ಹೋಗಿ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು.

ಆದರೆ ಇಲ್ಲಿ ಮುಖ್ಯವಾಗಿ ನೀವು ಗಮನಿಸಬೇಕಾದ ವಿಚಾರ ಏನೆಂದರೆ, ನಕ್ಷೆಯಲ್ಲಿ ಅಥವಾ ಪಹಣಿಯಲ್ಲಿ ಕಾಲುದಾರಿ ಇದೆ ಎಂಬುದು ಕಂಡು ಬಂದರೆ ಮಾತ್ರ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು. ಒಂದು ವೇಳೆ ಕಾಲು ದಾರಿಯೇ ಇಲ್ಲದೆ ಇದ್ದರೆ ಅಂತಹ ಸಂದರ್ಭದಲ್ಲಿ ಸರ್ಕಾರ ಕಾಲುದಾರಿಯನ್ನು ಮಾಡಿಕೊಡುವುದಿಲ್ಲ.

ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಸೈಟ್; ಅಪ್ಲೈ ಮಾಡಿ

Easy way to get Road or way to farmers Agriculture land

Ads By Google
Share
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by
Bengaluru, Karnataka, India
Edited By: Satish Raj Goravigere