ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ನಾಲ್ಕು ಮತ್ತು 5ನೇ ಕಂತಿನ ಹಣ ಜನವರಿ ತಿಂಗಳಲ್ಲಿ ಫಲಾನುಭವಿಗಳ (beneficiaries) ಖಾತೆಗೆ (Bank Account) ವರ್ಗಾವಣೆ ಆಗಿದೆ, ಅಂದರೆ ಒಂದೇ ತಿಂಗಳು ಹಣ, ಒಟ್ಟು ರೂ. 4,000 ಜಮಾ ಆಗಿವೆ. ಇದರ ಜೊತೆಗೆ 6ನೇ ಕಂತಿನ ಹಣದ ಬಗ್ಗೆ ಕೂಡ ಸರ್ಕಾರ ಹೊಸ ಅಪ್ಡೇಟ್ ನೀಡಿದೆ.
ಇನ್ನು ಹಣ ಜಮಾ ಆಗದೇ ಇರುವವರಿಗೆ ಭರವಸೆ!
ಗೃಹಲಕ್ಷ್ಮಿ ಯೋಜನೆಯ ಹಣ ಹಂತ ಹಂತವಾಗಿ ಫಲಾನುಭವಿಗಳ ಖಾತೆಯನ್ನು ತಲುಪುತ್ತಿದೆ (Money Deposit). ಅದರಲ್ಲೂ ಇತ್ತೀಚಿಗೆ ಜನರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿರುವ ಪರಿಣಾಮವಾಗಿ, ಒಂದರಿಂದ ಐದನೇ ಕಂತಿನ ಹಣ ಪಡೆದುಕೊಂಡ ಫಲಾನುಭವಿಗಳ ನಡುವೆ ದೊಡ್ಡ ಸಂಖ್ಯೆಯಲ್ಲಿ ವ್ಯತ್ಯಾಸ ಇದೆ ಎನ್ನಬಹುದು.
ಯಾಕಂದ್ರೆ ಮೊದಲ ಕಂತಿನ ಹಣ ಶೇಕಡ 30% ನಷ್ಟು ಫಲಾನುಭವಿ ಮಹಿಳೆಯರಿಗೆ ಜಮಾ ಆಗಿದ್ದರೆ, 5ನೇ ಕಂತಿನ ಹಣ ಕೇವಲ 30% ನಷ್ಟು ಮಹಿಳೆಯರಿಗೆ ಜಮಾ ಆಗಿಲ್ಲ .70% ನಷ್ಟು ಮಹಿಳೆಯರು 5 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು
ಈ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (minister Lakshmi hebbalkar) ಇತ್ತೀಚಿಗೆ ನಡೆದ ಬೆಳಗಾವಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ, ಯಾವುದೇ ಫಲಾನುಭವಿ ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಬಾರದು. ಇದಕ್ಕಾಗಿ ಗೃಹಲಕ್ಷ್ಮಿ ಅದಾಲತ್ (Gruhalakshmi Adalat) ಆರಂಭಿಸಲಾಗಿದ್ದು, ಮಹಿಳೆಯರು ಹತ್ತಿರದ ಗ್ರಾಮ ಪಂಚಾಯತ್ (Gram Panchayat) ಕಚೇರಿಯಲ್ಲಿ ಗೃಹಲಕ್ಷ್ಮಿ ಹಣ ಬರಲು ಬೇಕಾಗಿರುವ ಪರಿಹಾರವನ್ನು ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಹಣ ತಮ್ಮ ಖಾತೆಗೆ ಯಾಕೆ ಬಂದಿಲ್ಲ ಎಂಬುದರ ಬಗ್ಗೆ ಮಹಿಳೆಯರು ಮಾಹಿತಿ ಪಡೆಯಬಹುದು. ಇಲ್ಲಿ ದೂರು ಸಲ್ಲಿಸಿದ್ರೆ ನಿಮ್ಮ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ಚೆಕ್ ಮಾಡಿ ತಿಳಿಸಲಾಗುವುದು. ಬಹುತೇಕ ಯಶಸ್ವಿಯಾಗಿರುವ ಈ ಯೋಜನೆ ಮುಂದಿನ ದಿನಗಳಲ್ಲಿ, 100% ನಷ್ಟು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್
ಗೃಹಲಕ್ಷ್ಮಿ ಸ್ಟೇಟಸ್ ಹೀಗೆ ತಿಳಿದುಕೊಳ್ಳಿ! (Check gruha lakshmi status)
ಜನವರಿ ತಿಂಗಳಲ್ಲಿ ನಾಲ್ಕು ಮತ್ತು ಐದನೇ ಕಂತಿನ ಹಣ ವರ್ಗಾವಣೆ ( DBT) ಆಗಿದೆ. ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ (Mahiti kanaja) ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.
ಇದಕ್ಕಾಗಿ ಮಾಹಿತಿ ಕಣಜದ ಅಧಿಕೃತ ವೆಬ್ಸೈಟ್ ಗೆ ಹೋಗಿ ಮುಖಪುಟದಲ್ಲಿ ಇರುವ, ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ರೇಷನ್ ಕಾರ್ಡ್ (ration card) ಸಂಖ್ಯೆಯನ್ನು ಹಾಕಿದ್ರೆ, ಯಾವ ತಿಂಗಳಿನಲ್ಲಿ ಹಣ ಜಮಾ ಆಗಿದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳಬಹುದು.
ಇನ್ನು 2ನೆಯದಾಗಿ, ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು, ಸರ್ಕಾರದ ಮೊಬೈಲ್ ಅಪ್ಲಿಕೇಶನ್ DBT Karnataka ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ. MPIN ನಮೂದಿಸಿ ಲಾಗಿನ್ ಆಗಿ.
ಇಲ್ಲಿ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಮಾತ್ರವಲ್ಲದೆ ಸರ್ಕಾರದಿಂದ ಯಾವುದೇ ಹಣ ನಿಮ್ಮ ಖಾತೆಗೆ ಡಿ ಬಿ ಟಿ ಆದರೆ ಆ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ
ಇನ್ನು ಮೂರನೆಯದಾಗಿ ಆಹಾರ ಇಲಾಖೆ (food department) ಯ ಅಧಿಕೃತ ವೆಬ್ಸೈಟ್ ಗೆ ಹೋಗಿ, ಈ ಸರ್ವಿಸ್ ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣಿಸುವ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಆಯ್ಕೆಯಲ್ಲಿ ಡಿಬಿಟಿ ಸ್ಟೇಟಸ್ ಎನ್ನುವ ಸಂದೇಶ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಯ ಮೇಲ್ಭಾಗದಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಅನ್ನ ಭಾಗ್ಯ ಯೋಜನೆ (Annabhagya scheme) ಯ ಸ್ಟೇಟಸ್ ನೋಡುವಂತೆ, ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಯಾವ ತಿಂಗಳಿನ ಹಣ ಜಮಾ ಆಗಿದೆ ಎನ್ನುವ ಮಾಹಿತಿ ಪಡೆದುಕೊಳ್ಳಬಹುದು.
ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಚೆಕ್ ಮಾಡುವ ಲಿಂಕ್ ಇಲ್ಲಿದೆ
6ನೇ ಕಂತಿನ ಹಣ ಬಿಡುಗಡೆ ಯಾವಾಗ?
ಸಾಕಷ್ಟು ಜನರಿಗೆ 5ನೇ ಕಂತಿನ ಹಣ ಬಿಡುಗಡೆ ಆಗುತ್ತಿದ್ದಂತೆ 6ನೇ ಕಂತಿನ ಹಣ ಯಾವಾಗ ಬರಬಹುದು ಎನ್ನುವ ಕುತೂಹಲ ಆರಂಭವಾಗಿದೆ. ಜನವರಿ ತಿಂಗಳಲ್ಲಿ ಈಗಾಗಲೇ ನಾಲ್ಕು ಮತ್ತು ಐದನೆಯ ಕಂತಿನ ಹಣ ಬಿಡುಗಡೆ ಆಗಿದ್ದು, 6ನೇ ಕಂತಿನ ಹಣ ಬಿಡುಗಡೆ ಆಗಲು ಮುಂದಿನ ತಿಂಗಳು ಅಂದರೆ ಫೆಬ್ರವರಿ ಮೊದಲ ವಾರದವರೆಗೂ ಕಾಯಬೇಕು.
Gruha Lakshmi Yojana New Update, Deposit 2 installments in one month