Karnataka NewsBangalore News

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು

ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಮತ್ತೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೊಸ ಹೆಸರು ಸೇರ್ಪಡೆ ಮಾಡಲು ಇದು ಸದಾವಕಾಶ ಆಗಿದ್ದು, ತಕ್ಷಣ ನೀವು ಈ ಕೆಲಸವನ್ನು ಮಾಡಿ.

ಹಾಗಂತ ನೀವು ಯಾವುದೇ ಸರ್ಕಾರಿ ಕಚೇರಿ (government office) ಯ ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ, ಮೊಬೈಲ್ (mobile ) ನಲ್ಲಿ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲ್ಲಿಗೆ ಹೊಸ ಹೆಸರುಗಳ ಸೇರ್ಪಡೆ ಮಾಡಬಹುದು!

Ration card correction allowed again, Here is the information

10ನೇ ತರಗತಿ ಪಾಸಾಗಿದ್ರೆ ಸರ್ಕಾರಿ ಉದ್ಯೋಗ, ಕನ್ನಡ ಮಾತನಾಡಲು ಬಂದ್ರೆ ಸಾಕು

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!

ಪಡಿತರ ವಸ್ತುಗಳನ್ನು ತಡೆದುಕೊಳ್ಳಲು ಮಾತ್ರ ರೇಷನ್ ಕಾರ್ಡ್ ಸೀಮಿತವಾಗಿಲ್ಲ. ಸರಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿ ಪರಿಣಮಿಸಿದೆ.

ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಬರುವುದಕ್ಕೆ ರೇಷನ್ ಕಾರ್ಡ್ ಇರಲೇಬೇಕು, ಅದೇ ರೀತಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಖಾತೆಗೆ ಜಮಾ ಆಗಲು ಕೂಡ ರೇಷನ್ ಕಾರ್ಡ್ ಬೇಕು, ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಯೋಜನೆಗಳು ನಿಮ್ಮ ಕೈ ಸೇರಬೇಕು ಅಂದ್ರೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ರೇಷನ್ ಕಾರ್ಡ್ ಹೆಚ್ಚಿನ ಪ್ರಯೋಜನವನ್ನು ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಪಡೆದುಕೊಳ್ಳಲು ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳು ರೇಷನ್ ಕಾರ್ಡ್ ನಲ್ಲಿ ಇರುವುದು ಬಹಳ ಮುಖ್ಯ.

ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್

ಸರ್ಕಾರ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದೆ. ನೀವು ನಿಮ್ಮ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಬಹುದು. ಇದಕ್ಕೆ ಬೇಕಾಗಿರುವ ದಾಖಲೆಗಳು (documents) ಯಾವವು ಅಂದ್ರೆ,

ಮಗುವಿನ ಜನನ ಪ್ರಮಾಣ ಪತ್ರ (birth certificate)

ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದಿಯೋ ಅವರ ಆಧಾರ್ ಕಾರ್ಡ್ (Aadhar card)

ವಿಳಾಸದ ಪುರಾವೆ

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಮಾಡುವುದು ಹೇಗೆ?

BPL Ration Card
ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಇಲ್ಲಿ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ. ಎಡಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಈಗ ಹೊಸ ಹೆಸರು ಸೇರಿಸಿ ಎನ್ನುವ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಯಾವ ತರ ಹೆಸರನ್ನು ಸೇರಿಸಬೇಕೋ ಅವರ ಹೆಸರನ್ನು ಕೂಡ ನಮೂದಿಸಬೇಕು. ಬಳಿಕ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ

ಇಷ್ಟು ಮಾಡಿದ್ರೆ ಯಾವುದೇ ಶುಲ್ಕ ಇಲ್ಲದೆ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸರ್ಕಾರಕ್ಕೆ ಸಲ್ಲಿಕೆ ಆಗುತ್ತದೆ. ಕೆಲವೇ ದಿನಗಳಲ್ಲಿ ಈ ತಿದ್ದುಪಡಿ ಮಾಡಿಕೊಡಲಾಗುವುದು. ನೀವು ಇದೇ ಮೇಲಿನ ವೆಬ್ಸೈಟ್ನಲ್ಲಿ ತಿದ್ದುಪಡಿ ಸ್ಥಿತಿಯನ್ನು ಕೂಡ ಚೆಕ್ ಮಾಡಬಹುದು.

ಹೀಗೆ ಅತ್ಯಂತ ಸುಲಭವಾಗಿ ಕೆಲವೇ ಕ್ಷಣಗಳಲ್ಲಿ ರೇಷನ್ ಕಾರ್ಡ್ ನಲ್ಲಿ ಬೇಕಾಗಿರುವ ಅಗತ್ಯ ಹೆಸರುಗಳನ್ನು ನೀವು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಿದೆ.

Ration card correction, add Names or delete name

Our Whatsapp Channel is Live Now 👇

Whatsapp Channel

Related Stories