ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಅಪ್ಡೇಟ್, ಲಕ್ಷಾಂತರ ರೇಷನ್ ಕಾರ್ಡುಗಳು ರದ್ದು!
ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು (BPL Ration card cancellation) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supply department) ನಿರ್ಧರಿಸಿದೆ. ಸದ್ದು ಗದ್ದಲ ಇಲ್ಲದೆ ಲಕ್ಷಾಂತರ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ.
ರಾಜ್ಯ ಸರ್ಕಾರ (State government) ಒಂದು ಕಡೆ ಹೊಸ ಹೊಸ ಯೋಜನೆಗಳ ಮೂಲಕ, ಜನರಿಗೆ ಸಂತೋಷ ನೀಡುತ್ತಿದ್ದರೆ, ಇನ್ನೊಂದು ಕಡೆ ಸುದ್ದಿ ಇಲ್ಲದಂತೆ ರೇಷನ್ ಕಾರ್ಡ್ ರದ್ದು ಪಡಿಮಾಡುತ್ತಿದೆ. ಯಾರು ಯಾವಾಗ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುತ್ತಾರೆ ಎಂದು ಊಹಿಸುವುದಕ್ಕೂ ಕೂಡ ಕಷ್ಟವಾಗುತ್ತಿದೆ.
ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ; ತರಬೇತಿ ಜೊತೆಗೆ ಸಾಲ ಸೌಲಭ್ಯ
ರೇಷನ್ ಕಾರ್ಡ್ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರ!
ಇಲ್ಲಿಯವರೆಗೆ ರೇಷನ್ ಕಾರ್ಡ್ (Ration Card) ಬೇಕಾಬಿಟ್ಟಿಯಾಗಿ ಪ್ರತಿಯೊಬ್ಬರಿಗೂ ಕೂಡ ವಿತರಣೆ ಮಾಡಲಾಗುತ್ತಿತ್ತು. ನಿಜವಾಗಿ ಹೇಳಬೇಕು ಅಂದ್ರೆ ಬಿಪಿಎಲ್ ರೇಷನ್ ಕಾರ್ಡ್ ಕೇವಲ ಬಡತನ ರೇಖೆಗಿಂತ ಕೆಳಗಿರುವವರು (below poverty line families) ಮಾತ್ರ ಬಳಕೆ ಮಾಡತಕ್ಕದ್ದು.
ಆದರೆ ಉಳ್ಳವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಬಳಸುತ್ತಿದ್ದಾರೆ, ಇದು ಸರ್ಕಾರದ ಗಮನಕ್ಕೆ ಇತ್ತೀಚಿಗೆ ಬಂದಿದೆ. ಹಾಗಾಗಿ 2016ರ ಪಡಿತರ ಚೀಟಿ ನಿಯಮಗಳನ್ನು ಉಲ್ಲಂಘಿಸಿ, ಮಾನದಂಡದ ಒಳಗಡೆ ಬಾರದೆ ಇರುವ ಬಿಪಿಎಲ್ ಕಾರ್ಡ್ ರದ್ದುಪಡಿ ಕೆಲಸವನ್ನು ಬಹಳ ವೇಗವಾಗಿ ಸರ್ಕಾರ ನಡೆಸುತ್ತಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ
ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು!
ಈಗಾಗಲೇ ಸರ್ಕಾರ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದುಪಡಿ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಯಾವ ಮಾನದಂಡದ ಮೇಲೆ ಅಥವಾ ಯಾವ ರೀತಿ ಪರಿಶೀಲನೆ ಮಾಡಿ ಬಿಪಿಎಲ್ ಪಡಿತರ ಚೀಟಿ ನಿಷ್ಕ್ರಿಯಗೊಳಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.
ಬಹುಶ: ಸರ್ಕಾರಿ ನೌಕರಿಯಲ್ಲಿ ಇರುವವರು ಅಥವಾ ಆದಾಯ ತೆರಿಗೆ ಪಾವತಿ ಮಾಡುವವರು ಉಳ್ಳವರು ಎಂದು ಪರಿಗಣಿಸಿ ಅಂಥವರ ಬಳಿ ಇರುವ ಕಾರ್ಡ್ ರದ್ದುಪಡಿ ಮಾಡಬಹುದು.
ಯಾರಿಗೆ ಬಿಪಿಎಲ್ ರೇಷನ್ ಕಾರ್ಡ್ ಕೇವಲ ಒಂದು ಗುರುತಿನ ಚೀಟಿಯಾಗಿ ಮಾತ್ರ ಬೇಕು, ಯಾವುದೇ ಪಡಿತರ ವಸ್ತುಗಳನ್ನು ಪಡೆದುಕೊಳ್ಳುವುದಿಲ್ಲ ಎಂದುಕೊಳ್ಳುತ್ತಾರೋ ಅಂತವರು ತಕ್ಷಣ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಸಂಬಂಧ ಪಟ್ಟ ಇಲಾಖೆಗೆ ಸರೆಂಡರ್ ಮಾಡಿದ್ರೆ ಹೆಚ್ಚು ಒಳ್ಳೆಯದು ಎಂದು ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು
ಯಾಕಂದ್ರೆ ಉಳ್ಳವರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಅಗತ್ಯ ಇರುವವರಿಗೆ ವಿತರಣೆ ಮಾಡಬಹುದು ಎನ್ನುವರು ಸರ್ಕಾರದ ಉದ್ದೇಶ.
ಈಗಾಗಲೇ ಲಕ್ಷಾಂತರ ಅರ್ಜಿಗಳು ಸರ್ಕಾರಕ್ಕೆ ಸಂದಾಯ ಆಗಿವೆ. ಈ ಎಲ್ಲಾ ಬಿಪಿಎಲ್ ಹಾಗೂ ಇತರ ರೇಷನ್ ಕಾರ್ಡ್ ಅರ್ಜಿಗಳನ್ನು ಸರ್ಕಾರ ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆಗೂ ಕೂಡ ಚಿಂತನೆ ನಡೆಸಿದೆ. ಹಾಗಾಗಿ ಎಲ್ಲವನ್ನೂ ಸರಿದೂಗಿಸುವ ನಿಟ್ಟಿನಲ್ಲಿ ಕೆಲವು ರೇಷನ್ ಕಾರ್ಡ್ ರದ್ದುಗೊಳಿಸಿ ಇನ್ನು ಕೆಲವು ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್
ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಏನು ಮಾಡಬೇಕು!
ನಿಮ್ಮ ಮನೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಇರುವ ಸದಸ್ಯ ಅಥವಾ ಆದಾಯ ತೆರಿಗೆ (income tax payer) ಪಾವತಿ ಮಾಡುವ ಸದಸ್ಯ ಇದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುವುದರ ಮೂಲಕ ರೇಷನ್ ಕಾರ್ಡ್ ರದ್ದಾಗುವುದನ್ನು ತಡೆಗಟ್ಟಬಹುದು. ಅಥವಾ ಬಿಪಿಎಲ್ ಕಾರ್ಡ್ ಬದಲು ಎಪಿಎಲ್ ಕಾರ್ಡ್ ಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಬಹುದು.
Big update for BPL ration card holders, lakhs of cards cancelled