ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ! ಸಿಎಂ ಸಿದ್ದರಾಮಯ್ಯನವರೇ ಕೊಟ್ಟ ಅಪ್ಡೇಟ್

ನ್ನೂರು ಯೂನಿಟ್ (200 unit) ಗಳ ವರೆಗೆ ವಿದ್ಯುತ್ ಬಳಸುವವರಿಗೆ 0 ಕರೆಂಟ್ ಬಿಲ್ (zero Electricity Bill) ವ್ಯವಸ್ಥೆಯನ್ನು ಸರ್ಕಾರ ಮಾಡಿದೆ

Bengaluru, Karnataka, India
Edited By: Satish Raj Goravigere

ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರ (State government) ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ರಾಜ್ಯಾದ್ಯಂತ ವ್ಯಾಪಕ ಸಕಾರಾತ್ಮಕ ಪ್ರಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಗೃಹಜ್ಯೋತಿ (Gruha jyothi scheme) ಯೋಜನೆಯ ಮೂಲಕ ಲಕ್ಷಾಂತರ ಕುಟುಂಬವನ್ನು ಉಚಿತವಾಗಿ ಸರ್ಕಾರ ಬೆಳಗುತ್ತಿದೆ ಎನ್ನಬಹುದು.

ಕಳೆದ ಆರು ತಿಂಗಳಿನಿಂದ ಕರ್ನಾಟಕ ರಾಜ್ಯದಲ್ಲಿ ಇನ್ನೂರು ಯೂನಿಟ್ (200 unit) ಗಳ ವರೆಗೆ ವಿದ್ಯುತ್ ಬಳಸುವವರಿಗೆ 0 ಕರೆಂಟ್ ಬಿಲ್ (zero Electricity Bill) ವ್ಯವಸ್ಥೆಯನ್ನು ಸರ್ಕಾರ ಮಾಡಿದ ವಿದ್ಯುತ್ (electricity) ಬಳಸಿದ್ರೆ ಒಂದೇ ಒಂದು ರೂಪಾಯಿ ಬಿಲ್ ಪಾವತಿಸುವ ಅಗತ್ಯವಿಲ್ಲ. ಇದೀಗ ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಸರ್ಕಾರ ನಿರ್ಧರಿಸಿದೆ.

The government has brought new rules for the beneficiaries of Gruha Jyothi Yojana

ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ? ಖರ್ಚಾಗಿರುವ ಯೂನಿಟ್ ಎಷ್ಟು ತಿಳಿಯಲು ಹೀಗೆ ಮಾಡಿ

ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ!

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಲಾಗಿದೆ.

200 ಯೂನಿಟ್ ತನಕ ಉಚಿತ ವಿದ್ಯುತ್ ಪಡೆದುಕೊಳ್ಳಲು ಸರ್ಕಾರ ನಿಗದಿಪಡಿಸಿದ ಯೂನಿಟ್ ಮಿತಿಯ ಮೇಲೆ ಹೆಚ್ಚುವರಿಯಾಗಿ 10% ವರೆಗೆ ಯೂನಿಟ್ ಒದಗಿಸುತ್ತಿತ್ತು. ಈಗ 10% ಬದಲು ಕೇವಲ 10 ಯೂನಿಟ್ ಗಳನ್ನು ಮಾತ್ರ ಹೆಚ್ಚುವರಿಯಾಗಿ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಒಟ್ಟಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ! ಪರಿಶೀಲಿಸಿಕೊಳ್ಳಿ

Gruha Jyothi Scheme Free Electricityಸರ್ಕಾರ ಕೊಡುತ್ತಿರುವ ಸರಾಸರಿ ಯೂನಿಟ್ (average unit) ಮೇಲೆ 10% ನಷ್ಟು ಹೆಚ್ಚುವರಿ ಆಗಿ ನೀಡಲಾಗುತ್ತಿತ್ತು. ಈಗ 10 ಯೂನಿಟ್ ಗಳನ್ನು ಸರಾಸರಿ ವಿದ್ಯುತ್ ಬಳಕೆಯ ಜೊತೆಗೆ ನೀಡಲಾಗುತ್ತದೆ.

ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾಕಂದ್ರೆ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರಯೋಜನ ಸಿಗುತ್ತದೆ. ಆದರೆ ಸರಾಸರಿ 100 ಯೂನಿಟ್ ಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಇನ್ನು ಮುಂದೆ ವಿದ್ಯುತ್ ಬಿಲ್ ಪಾವತಿ ಮಾಡುವ ಪರಿಸ್ಥಿತಿ ಬರುತ್ತದೆ.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ರಾತ್ರೋ-ರಾತ್ರಿ ಮಹತ್ವದ ಬದಲಾವಣೆ

ಸಚಿವರು ಹೇಳಿದ್ದೇನು?

ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಬದಲಾವಣೆಯನ್ನು ಗೃಹಜ್ಯೋತಿ ಯೋಜನೆಯಲ್ಲಿ ತರಲಾಗಿದೆ ಎಂದು ಸಚಿವ ಕೆ. ಜೆ ಜಾರ್ಜ್ ತಿಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ವಾರ್ಷಿಕ ಸರಾಸರಿ ಬಳಕೆಯ ಮೇಲೆ 10% ನಷ್ಟು ಹೆಚ್ಚುವರಿಯಾಗಿ ಯೂನಿಟ್ ನೀಡಲಾಗುತ್ತಿತ್ತು. ಆದರೆ ಪ್ರತಿ ತಿಂಗಳು ಕೇವಲ 20, 30, 40 ಹೀಗೆ ಕಡಿಮೆ ಯೂನಿಟ್ ಬಳಸುವವರಿಗೆ 10% ಅಂದ್ರೆ ಅತಿ ಕಡಿಮೆ ವಿದ್ಯುತ್ ಯೂನಿಟ್ ಸಿಗುತ್ತದೆ.

ಹಾಗಾಗಿ 10% ಬದಲು 10 ಯೂನಿಟ್ ಗಳನ್ನೇ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. ಇದರಿಂದಾಗಿ 48 ಯೂನಿಟ್ ವರೆಗೆ ಬಳಕೆ ಮಾಡುತ್ತಿರುವವರಿಗೆ 10 ಯೂನಿಟ್ ಹೆಚ್ಚುರಿಯಾಗಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಜನರು ಕಡಿಮೆ ವಿದ್ಯುತ್ ಬಳಸಬೇಕು ಹಾಗೂ ಬಡವರಿಗೆ ಅನುಕೂಲ ಆಗಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಸಚಿವ ಸಂಪುಟ ಕೈಗೊಂಡಿದೆ ಎಂದು ಹೇಳಬಹುದು.

ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಅಪ್ಡೇಟ್, ಲಕ್ಷಾಂತರ ರೇಷನ್ ಕಾರ್ಡುಗಳು ರದ್ದು!

Big changes in Free Electricity Gruha Jyothi Yojana