ನೀವು ಎಷ್ಟು ವಿದ್ಯುತ್ ಬಳಸಿದ್ದೀರಿ? ಖರ್ಚಾಗಿರುವ ಯೂನಿಟ್ ಎಷ್ಟು ತಿಳಿಯಲು ಹೀಗೆ ಮಾಡಿ

ಗೃಹಜ್ಯೋತಿ (Gruha Jyothi) ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಸಾಕಷ್ಟು ಜನ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವ ಸಮಸ್ಯೆಯಿಂದ ಪಾರಾಗಿದ್ದಾರೆ

ಗೃಹಜ್ಯೋತಿ (Gruha Jyothi) ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಸಾಕಷ್ಟು ಜನ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವ ಸಮಸ್ಯೆಯಿಂದ ಪಾರಾಗಿದ್ದಾರೆ!

ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವುದು ಅಂದ್ರೆ ಬಡವರಿಗಂತೂ ಜೇಬಿಗೆ ಕತ್ತರಿ ಹಾಕಿದ ಹಾಗೆ. ಇದೇ ಕಾರಣಕ್ಕೆ ಉಚಿತ ಕರೆಂಟ್ (free electricity) ನೀಡುವಂತಹ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ.

ಒಟ್ಟಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ! ಪರಿಶೀಲಿಸಿಕೊಳ್ಳಿ

Electricity bill

ಗೃಹಜ್ಯೋತಿ ಹೊಸ ಅಪ್ಡೇಟ್!

ಗೃಹಜ್ಯೋತಿ ಯೋಜನೆಯಿಂದಾಗಿ ಇಂದು ಸಾಕಷ್ಟು ಕುಟುಂಬಗಳು ಹಣ ಪಾವತಿ ಮಾಡಿದೆ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುತ್ತಿವೆ.

ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಹೊಸ ಅಪ್ಡೇಟ್ (update) ಒಂದನ್ನು ನೀಡಿದ್ದು ವಾರ್ಷಿಕ ಸರಾಸರಿ ಬಳಕೆಯ ಮೇಲೆ 10% ನಷ್ಟು ಹೆಚ್ಚುವರಿ ಯೂನಿಟ್ (unit) ನೀಡಲಾಗುತ್ತಿದ್ದದ್ದು, ಇನ್ನೂ ಮುಂದೆ ವಾರ್ಷಿಕ ಸರಾಸರಿ ಯೂನಿಟ್ (early average unit) ಬಳಕೆಯ ಮೇಲೆ 10 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಇದರಿಂದ ಅತಿ ಕಡಿಮೆ ವಿದ್ಯುತ್ ಬಳಸುತ್ತಿರುವ ಕುಟುಂಬಗಳಿಗೆ ಹೆಚ್ಚು ಪ್ರಯೋಜನ ಆಗಲಿದೆ ಆದರೆ ಹೆಚ್ಚು ಯೂನಿಟ್ ಬಳಸುತ್ತಿರುವವರಿಗೆ 10 ಯೂನಿಟ್ ಹೆಚ್ಚುವರಿಯಾಗಿ ನೀಡುವುದು ಹೆಚ್ಚು ಪರಿಣಾಮ ಬೀರುವುದಿಲ್ಲ ಎನ್ನಬಹುದು.

ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ರಾತ್ರೋ-ರಾತ್ರಿ ಮಹತ್ವದ ಬದಲಾವಣೆ

ನಿಮ್ಮ ಮನೆಯ ಈ ತಿಂಗಳ ವಿದ್ಯುತ್ ಯೂನಿಟ್ ಬಳಕೆ ಎಷ್ಟು ತಿಳಿದುಕೊಳ್ಳಿ!

Free electricityಸಾರ್ವಜನಿಕರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳ ಬಗ್ಗೆ ಮಾಹಿತಿಯನ್ನು ಸರಕಾರದ ಅಧಿಕೃತ ಸೈಟ್ ಆಗಿರುವ ಮಾಹಿತಿ ಕಣಜ (Mahiti Kanaja) ದಲ್ಲಿ ತಿಳಿದುಕೊಳ್ಳಬಹುದು.

ಬೆಸ್ಕಾಂ (BESCOM) ಹಾಗೂ ಹೆಸ್ಕಾಂ (HESCOM) ಅಡಿಯಲ್ಲಿ ಬರುವ ಗ್ರಾಹಕರು ತಮ್ಮ ಪ್ರತಿ ತಿಂಗಳ ವಿದ್ಯುತ್ ಯೂನಿಟ್ ಬಳಕೆ ಎಷ್ಟಾಗಿದೆ ? ವಿದ್ಯುತ್ ಬಿಲ್ ಎಷ್ಟು ಬಂದಿದೆ ಮೊದಲಾದ ಮಾಹಿತಿಗಳನ್ನು ಸುಲಭವಾಗಿ ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ತಿಳಿದುಕೊಳ್ಳಬಹುದು.

* ಮೊದಲನೇದಾಗಿ ಮಾಹಿತಿ ಕಣಜ (MAHITI KHANAJA) ವೆಬ್ಸೈಟ್ ಓಪನ್ ಮಾಡಿ. ಬೆಸ್ಕಾಂ ಬಿಲ್ ಹಾಗೂ ಹೆಸ್ಕಾಂ ಬಿಲ್ ಪಾವತಿ ಮಾಡುವ ಗ್ರಾಹಕರಿಗೆ ಬೇರೆಬೇರೆ ಆಯ್ಕೆಗಳು ಇರುತ್ತವೆ. ಆಯಾ ಗ್ರಾಹಕರು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ( ಪ್ರತ್ಯೇಕ ಲಿಂಕ್ ಗಳನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ)

ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಸಿಗುತ್ತೆ 5 ಲಕ್ಷ ರೂಪಾಯಿ ಬೆನಿಫಿಟ್!

*ಮುಂದಿನ ಹಂತದಲ್ಲಿ ಅಕೌಂಟ್ ಐಡಿ (ACCOUNT ID) ಎನ್ನುವ ಆಯ್ಕೆ ಕಾಣಿಸುತ್ತದೆ ಅಲ್ಲಿ ನೀವು ನಿಮ್ಮ ಕರೆಂಟ್ ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆಯನ್ನು ಭರ್ತಿ ಮಾಡಿ. ಈಗ ನೀವು ಯಾವ ತಿಂಗಳಿನ ಬಿಲ್ ನೋಡಲು ಇಷ್ಟಪಡುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.

From date – to date ಆಯ್ಕೆ ಕಾಣಿಸುತ್ತೆ ಅದರಲ್ಲಿ ಮಾಹಿತಿ ತಿಳಿದುಕೊಳ್ಳಬೇಕಾದ ತಿಂಗಳನ್ನು ಕ್ಲಿಕ್ ಮಾಡಿ. ಸಬ್ಮಿಟ್ ಎಂದು ಕೊಡಿ.

*ಈಗ ನಮ್ಮ ವಿದ್ಯುತ್ ಸಂಬಂಧಪಟ್ಟ ಹಾಗೆ ಎಲ್ಲಾ ವಿವರಗಳನ್ನು ನೋಡಬಹುದು. consumption ವಿಭಾಗದಲ್ಲಿ ಎಷ್ಟು ಯೂನಿಟ್ ಖರ್ಚಾಗಿದೆ ಎಂದು ನಮೂದಿಸಿರುತ್ತಾರೆ. ಅದೇ ರೀತಿ ಈ ತಿಂಗಳ ಮೀಟರ್ ರೀಡಿಂಗ್, ಬಿಲ್ ದಿನಾಂಕ ಮೊದಲಾದವುಗಳ ಬಗ್ಗೆ ಮಾಹಿತಿ ಇರುತ್ತದೆ.

ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಅಪ್ಡೇಟ್, ಲಕ್ಷಾಂತರ ರೇಷನ್ ಕಾರ್ಡುಗಳು ರದ್ದು!

ವಿದ್ಯುತ್ ಬಿಲ್ ಮಾಹಿತಿ ತಿಳಿದುಕೊಳ್ಳಲು ನೇರ ಲಿಂಕ್ ಗಳು

ಬೆಸ್ಕಾಂ ಗ್ರಾಹಕರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ – https://mahitikanaja.karnataka.gov.in/Bescom/ConsumptionList?ServiceId=5593&Type=SP&DepartmentId=1025

ಹೆಸ್ಕಾಂ ಗ್ರಾಹಕರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://mahitikanaja.karnataka.gov.in/Hescom/Consumption?ServiceId=5592&Type=SP&DepartmentId=2098

Check How much electricity units did you use

Related Stories