ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆದವರ ಹೆಸರನ್ನು ಮತ್ತೆ ಸೇರಿಸಿಕೊಳ್ಳಿ! ಇಲ್ಲಿದೆ ವಿಧಾನ

Story Highlights

ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರು ಡಿಲೀಟ್ ಆಗಿದೆಯಾ? ಹಾಗಾದರೆ ಈ ರೀತಿ ತಕ್ಷಣ ಮೊಬೈಲ್ ಮೂಲಕವೇ ಹೆಸರು ಸೇರಿಸಿ

ಪಡಿತರ ಚೀಟಿ (ration card) ಬಗ್ಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಪ್ರತಿಯೊಂದು ಗ್ಯಾರಂಟಿ ಯೋಜನೆ (guarantee schemes) ಗಳಿಗೂ ಕೂಡ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ.

ಇದೇ ಕಾರಣಕ್ಕೆ ಕಳೆದ ಎರಡುವರೆ ವರ್ಷಗಳಿಂದ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿರುವ ರೇಷನ್ ಕಾರ್ಡ್ ಹೊಸ ಅರ್ಜಿಗಳನ್ನು ಪರಿಶೀಲಿಸಿ ತಕ್ಷಣ ವಿತರಣೆ ಮಾಡಬೇಕು ಎಂದು ಫಲಾನುಭವಿಗಳು ಸರ್ಕಾರದ ಮೊರೆ ಹೋಗಿದ್ದಾರೆ.

ಒಂದು ಕಡೆ ಹೊಸ ರೇಷನ್ ಕಾರ್ಡ್ ವಿತರಣೆ (new ration card distribution) ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಅನರ್ಹರ ರೇಷನ್ ಕಾರ್ಡ್ ಹೊಂದಿರುವುದನ್ನು ಗುರುತಿಸಿ ಅಂಥವರ ರೇಷನ್ ಕಾರ್ಡ್ ರದ್ದುಪಡಿಸಲು (ration card cancellation) ಕೂಡ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.

ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!

ಬಿಪಿಎಲ್ ಕಾರ್ಡ್ ಅನ್ನು ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಪಡಿತರ ಪಡೆದುಕೊಳ್ಳುವುದಕ್ಕಾಗಿ ವಿತರಣೆ ಮಾಡಲಾಗಿದೆ. ಈಗಂತೂ ಗ್ಯಾರಂಟಿ ಯೋಜನೆಗಳು ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಇದೇ ಕಾರಣಕ್ಕೆ ಉಳ್ಳವರು ಕೂಡ ರೇಷನ್ ಕಾರ್ಡ್ ಹೊಂದಿದ್ದು, ಅದನ್ನ ರೇಷನ್ ಪಡೆದುಕೊಳ್ಳಲು ಬಳಸಿಕೊಳ್ಳದೆ ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಹೀಗೆ ಮೊದಲಾದವುಗಳಿಗೆ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ.

ಇದನ್ನು ಗಮನಿಸಿರುವ ಸರ್ಕಾರ ಸರ್ಕಾರದ ಮಾನದಂಡದ ಅಡಿಯಲ್ಲಿ ಬರದೇ ಇರುವ ಬಿಪಿಎಲ್ ಕಾರ್ಡ್ ರದ್ದುಪಡಿಗೆ ಮುಂದಾಗಿದೆ. ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿರುವ ಸಮಯದಲ್ಲಿ ಮುತುವರ್ಜಿಯಿಂದ ಪರಿಶೀಲನೆ ನಡೆಸಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಈ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಜಮಾ! ಹೊಸ ಅಪ್ಡೇಟ್

ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆಗಿರುವ ಹೆಸರು ಸೇರಿಸಬೇಕಾ?

BPL Ration Cardಕೆಲವೊಮ್ಮೆ ತಾಂತ್ರಿಕ ದೋಷ (technical error) ಗಳಿಂದ ಅಥವಾ ಸಣ್ಣಪುಟ್ಟ ತಪ್ಪುಗಳಿಂದ ರೇಷನ್ ಕಾರ್ಡ್ ನಲ್ಲಿ ಮನೆಯಲ್ಲಿ ಇರುವ ಸದಸ್ಯರ ಹೆಸರು ಡಿಲೀಟ್ (name deleted) ಆಗಬಹುದು, ಈ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪಡಿತರ ವಸ್ತುಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

ಡಿಲೀಟ್ ಆಗಿರುವ ಹೆಸರು ಸೇರ್ಪಡೆ ಮಾಡಲು ನೀವು ಯಾವುದೇ ಕಚೇರಿಗೂ ಅಲೆದಾಡಬೇಕಿಲ್ಲ. ದಾಖಲೆಗಳನ್ನು ಹಿಡಿದು ಗಂಟೆಗಟ್ಟಲೆ ಕಚೇರಿಯ ಮುಂದೆ ಕಾಯಬೇಕಿಲ್ಲ.

ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ಬೆನಿಫಿಟ್

ಒಂದೇ ಒಂದು ಕ್ಲಿಕ್ ನಲ್ಲಿ ಅಗತ್ಯ ಇರುವ ಕುಟುಂಬದ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸಿಕೊಳ್ಳಬಹುದು.
*https://ahara.kar.nic.in/ ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಹಾಗೂ ಪಡಿತರ ಚೀಟಿ ಹೆಸರು ಸೇರ್ಪಡೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

*ವೆಬ್ಸೈಟ್ನ ಮುಖಪುಟ ತೆರೆದ ನಂತರ ಸರ್ವಿಸ್ (E- service) ವಿಭಾಗದಲ್ಲಿ ಎಡ ಭಾಗದಲ್ಲಿ ಮೂರು ಲೈನ್ಗಳು ಕಾಣಿಸುತ್ತವೆ, ಅದರ ಮೇಲೆ ಕ್ಲಿಕ್ ಮಾಡಿ.

*ಈಗ ಈ ಸ್ಥಿತಿ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಪಡಿತರ ಚೀಟಿ ಹೊಸ ಹೆಸರು ಸೇರ್ಪಡೆ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

*ಈಗ ಅರ್ಜಿ ಫಾರ್ಮ್ ನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಗತ್ಯ ಇರುವ ಮಾಹಿತಿಗಳನ್ನು ಮೊದಲು ಭರ್ತಿ ಮಾಡಿ, ನಂತರ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ.

ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ! ಸಿಎಂ ಸಿದ್ದರಾಮಯ್ಯನವರೇ ಕೊಟ್ಟ ಅಪ್ಡೇಟ್

*ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳು ಹಾಗೂ ಮಾಹಿತಿಗಳು ಸರಿಯಾಗಿದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಆಗುತ್ತದೆ. ಹಾಗೂ ಕೆಲವೇ ದಿನಗಳಲ್ಲಿ ಅಪ್ಡೇಟೆಡ್ ರೇಷನ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ.

ಹೀಗೆ ಸುಲಭವಾಗಿ ರೇಷನ್ ಕಾರ್ಡ್ ನಲ್ಲಿ ಬಿಟ್ಟು ಹೋಗಿರುವ ಅಥವಾ ಡಿಲೀಟ್ ಆಗಿರುವ ಸದಸ್ಯರ ಹೆಸರನ್ನು ಮತ್ತೆ ಸೇರಿಸಿಕೊಳ್ಳಲು ಅವಕಾಶವಿದೆ.

Re-add the deleted name in the ration card, Here’s the method

Related Stories