Karnataka NewsBangalore News

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ! ಕೂಡಲೇ ಅಪ್ಲೈ ಮಾಡಿ

ಸ್ವಂತ ಉದ್ಯೋಗ (Own business) ಮಾಡಬೇಕು, ಹಣ ಸಂಪಾದನೆ ಮಾಡಬೇಕು ಎನ್ನುವುದು ಪುರುಷರಿಗೆ ಇರುವ ಆಸೆ ಮಾತ್ರ ಅಲ್ಲ. ಮಹಿಳೆಯರು (women) ಕೂಡ ಸಾಕಷ್ಟು ಕನಸು ಹೊತ್ತಿರುತ್ತಾರೆ. ತಾವು ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಾರೆ. ಆದರೆ ಇದೆಲ್ಲದಕ್ಕೂ ಬಂಡವಾಳ ಬೇಕಲ್ಲ! ಎಲ್ಲಿಂದ ತರೋದು? ನಮ್ಮ ಹತ್ರ ಅಷ್ಟು ಹಣ ಇಲ್ಲವೇ ಇಲ್ಲ, ಎಂದು ತಮ್ಮ ಕನಸನ್ನು ಸೈಡ್ ಗೆ ಇಟ್ಟು ಸುಮ್ಮನಾಗುತ್ತಾರೆ.

ಆದರೆ ಮಹಿಳೆಯರ ಸಬಲೀಕರಣ (women empowerment) ಕ್ಕಾಗಿ ಅವರ ಆರ್ಥಿಕ ಸ್ವಾವಲಂಬನೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ, ಅಂತಹ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ (udyogini scheme) ಕೂಡ ಒಂದು.

Under this new scheme of the government, women will get 800 Pension every month

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಒಂದೇ ಒಂದು ರೂಪಾಯಿಗಳ ಬಡ್ಡಿ ಪಾವತಿ ಮಾಡದೆ ಅಥವಾ ಯಾವುದೇ ಗ್ಯಾರೆಂಟಿಯನ್ನು ಕೊಡದೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಬಹುದು.

ಉದ್ಯೋಗಿನಿ ಯೋಜನೆ! (Udyogini scheme)

ಕನಸು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನ ಈಡೇರಿಸಲು ಸಣ್ಣ ಅವಕಾಶ ಸಿಕ್ಕರೂ ಕೂಡ ಬಳಸಿಕೊಳ್ಳಬೇಕು. ಹಾಗೆ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಯೋಚಿಸಿದ್ರೆ ಅತ್ಯುತ್ತಮ ಯೋಜನೆ ಆಗಿದೆ ಉದ್ಯೋಗಿನಿ ಯೋಜನೆ.

ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!

ಉದ್ಯೋಗಿನಿ ಯೋಜನೆಗೆ ಯಾರು ಅರ್ಹರು? (Who can apply)

Loanರಾಜ್ಯದಲ್ಲಿ ವಾಸಿಸುವ ಎಲ್ಲಾ ಮಹಿಳೆಯರು ಕೂಡ ಸ್ವಂತ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದು. 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ತೆಗೆದುಕೊಂಡ ಸಾಲದಲ್ಲಿ 40% ನಷ್ಟು ಸಬ್ಸಿಡಿ (subsidy) ಅಥವಾ 1,50,000ಗಳನ್ನು ಸರ್ಕಾರ ಭರಿಸಲಿದೆ. ಅದೇ ರೀತಿ ಸಾಮಾನ್ಯ ವರ್ಗದ ಮಹಿಳೆಯರಿಗೆ 30% ನಷ್ಟು ಸಬ್ಸಿಡಿ ಅಥವಾ 90 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ.

ಕರ್ನಾಟಕದ ಖಾಯಂ ನಿವಾಸಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಅರ್ಹರು.

ಉಚಿತ ವಿದ್ಯುತ್ ಪಡೆಯಲು ಹೊಸ ನಿಯಮ; ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ

ಉದ್ಯೋಗಿನಿ ಯೋಜನೆಗೆ ಬೇಕಾಗಿರುವ ದಾಖಲೆಗಳು (Needed documents)

ಆಧಾರ್ ಕಾರ್ಡ್

ರೇಷನ್ ಕಾರ್ಡ್

ಜಾತಿ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ

ಜನನ ಪ್ರಮಾಣ ಪತ್ರ

ಬ್ಯಾಂಕ್ ಖಾತೆಯ ವಿವರ

ಪಾಸ್ ಪೋರ್ಟ್ ಅಳತೆಯ ಫೋಟೋ

ಸ್ವಉದ್ಯೋಗದ ಬಗ್ಗೆ ವಿವರ

ಆಸ್ತಿ, ಜಮೀನು ಕೇವಲ 1 ವಾರದಲ್ಲಿ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ! ಸುಲಭ ವಿಧಾನ

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅರ್ಹ ಮಹಿಳೆಯರನ್ನು ಆಯ್ಕೆ ಮಾಡಿ ತಕ್ಷಣ ಸಾಲ ಮಂಜೂರು ಮಾಡಲಾಗುತ್ತದೆ.

Women will get 3 lakh rupees interest free loan

Our Whatsapp Channel is Live Now 👇

Whatsapp Channel

Related Stories