ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ
ಕಳೆದ ಆರು ತಿಂಗಳಿನಿಂದ ಬಹಳ ದೊಡ್ಡ ಮೊತ್ತದ ಹಣವನ್ನು ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗಾಗಿ ಬಿಡುಗಡೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಲ್ಲಿ ಅತಿ ಹೆಚ್ಚು ಹಣ ಇನ್ವೆಸ್ಟ್ (invest) ಮಾಡಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಯಾಗಿದೆ. ಇದುವರೆಗೆ ಸರ್ಕಾರದಿಂದ ಮಹಿಳೆಯರು ಉಚಿತವಾಗಿ 10,000 ರೂ. ಗಳನ್ನು ಪಡೆದುಕೊಂಡಿದ್ದಾರೆ.
ಹೌದು, ನೋಡು ನೋಡುತ್ತಿದ್ದಂತೆ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಆರು ತಿಂಗಳು ಕಳೆದಿವೆ. ಆಗಸ್ಟ್ ತಿಂಗಳಿಂದ ಸರ್ಕಾರ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಅದರಲ್ಲೂ ಜನವರಿ ತಿಂಗಳಿನಲ್ಲಿ ಮಹಿಳೆಯರಿಗೆ ಜಾಕ್ಪಾಟ್ ಎಂದು ಹೇಳಬಹುದು. ಯಾಕಂದ್ರೆ ನಾಲ್ಕು ಮತ್ತು 5ನೇ ಕಂತಿನ ಹಣ ಒಂದೇ ತಿಂಗಳಿನಲ್ಲಿ ಬಿಡುಗಡೆ ಆಗಿತ್ತು.
ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!
ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಅಂದ್ರೆ ತಕ್ಷಣ ಈ ಕೆಲಸ ಮಾಡಿ!
ಸರ್ಕಾರ ಮನೆಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಲು ಮಹಿಳೆಯರಿಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದು, ಇದುವರೆಗೆ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಮಹಿಳೆಯರಿಗೆ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ನೀವು ಬೇಸರ ಪಟ್ಟುಕೊಂಡಿದ್ದರೆ ತಕ್ಷಣ ಈ ಕೆಲಸ ಮಾಡಿ.
ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಿಡಿಂಗ್ (Aadhar seeding) ಆಗಿದ್ಯಾ ಚೆಕ್ ಮಾಡಿ. ಈ ಕೆವೈಸಿ (E-KYC ) ಆಗದೆ ಇರುವ ಖಾತೆಗೆ ಹಣ ಜಮಾ ಆಗಲು (Money Deposit) ಸಾಧ್ಯವೇ ಇಲ್ಲ.
ಇನ್ನು ಎರಡನೆಯದಾಗಿ ಅಂಚೆ ಕಛೇರಿ (post office) ಯಲ್ಲಿ ನೀವು ಅರ್ಜಿ ಸಲ್ಲಿಸುವುದರ ಮೂಲಕ ಹೊಸ ಖಾತೆ ತೆರೆಯಬಹುದು. ಈ ರೀತಿ ಹೊಸ ಖಾತೆ ತೆರೆದರೆ ಯಾವುದೇ ಸಮಸ್ಯೆ ಇಲ್ಲದೆ ಗೃಹಲಕ್ಷ್ಮಿ ಯೋಜನೆ ಹಣ ಅಂಚೆ ಕಚೇರಿಯ ಖಾತೆಗೆ ಜಮಾ ಆಗುತ್ತದೆ.
ಈ ಎಲ್ಲಾ ಪ್ರಯತ್ನಗಳನ್ನು ಮಾಡಿದರು ಕೂಡ ನಿಮ್ಮ ಖಾತೆಗೆ ಒಂದೇ ಒಂದು ಕಂತಿನ ಹಣವು ಬಿಡುಗಡೆ ಆಗಿಲ್ಲ ಎಂದಾದರೆ, ಅದು ಸರ್ಕಾರದ ತಾಂತ್ರಿಕ ದೋಷ (technical issues) ಅಥವಾ ನಿಮ್ಮ ಗೃಹಲಕ್ಷ್ಮಿ ಅಪ್ಲಿಕೇಶನ್ ಸಮಸ್ಯೆಯಿಂದಾಗಿ ಆಗಿರಬಹುದು.
ಹಾಗೇನಾದ್ರೂ ಇದ್ರೆ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರಕಾರ ಮತ್ತೆ ಅವಕಾಶ ಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ಹೊಸ ಅರ್ಜಿಯನ್ನು ಕೂಡ ಸಲ್ಲಿಸಬಹುದು.
ಉಚಿತ ವಿದ್ಯುತ್ ಪಡೆಯಲು ಹೊಸ ನಿಯಮ; ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಹಣ ಜಮಾ ಆಗಿದ್ಯಾ ಚೆಕ್ ಮಾಡಿ!
5ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ನಲ್ಲಿಯೇ ಚೆಕ್ ಮಾಡಿಕೊಳ್ಳುವುದು.
*ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
*ಡೌನ್ಲೋಡ್ ಮಾಡಿಕೊಂಡ ನಂತರ ಇನ್ಸ್ಟಾಲ್ ಮಾಡಿ. ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
*ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ರಿಜಿಸ್ಟರ್ಡ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಗಳು ಕಳಿಸಲಾಗುತ್ತದೆ ಅದನ್ನು ಇಲ್ಲಿ ಮತ್ತೆ ನಮೂದಿಸಿ.
*ಈಗ ನಾಲ್ಕು ಅಂಕೆಯ ಒಂದು ಪಾಸ್ವರ್ಡ್ ಸೆಟ್ ಮಾಡಬೇಕು. mPIN ಅನ್ನು ಹಾಕಿ ಅದನ್ನು ಮತ್ತೆ ವೆರಿಫಿಕೇಶನ್ ಮಾಡಿ ಸಬ್ಮಿಟ್ ಎಂದು ಕೊಡಿ.
*ಈಗ ನಿಮ್ಮ ಖಾತೆಗೆ ಜಮಾ ಆಗಿರುವ ಹಣದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೆ ಪೇಮೆಂಟ್ ಆಪ್ಷನ್ ಇರುತ್ತದೆ. ಸರ್ಕಾರದ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಡಿ ಬಿ ಟಿ ಆಗಿದ್ದರೆ ಆ ಬಗ್ಗೆ ಮಾಹಿತಿ ಪಡೆಯಬಹುದು.
ಆಸ್ತಿ, ಜಮೀನು ಕೇವಲ 1 ವಾರದಲ್ಲಿ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ! ಸುಲಭ ವಿಧಾನ
ಮಹಿಳೆರೇ ಸ್ವಲ್ಪ ಹುಷಾರಾಗಿರಿ!
ಇತ್ತೀಚಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ ಎಂಬುದನ್ನು ಚೆಕ್ ಮಾಡಿಕೊಡುತ್ತೇವೆ ಎಂದು ಹೇಳಿ ಸಾಕಷ್ಟು ವಂಚಕರು ಹಳ್ಳಿಯ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ.
ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬೆರಳಚ್ಚು (thumb impression) ಪಡೆದು ಬ್ಯಾಂಕ್ ನಿಂದ ಹಣ ಲಪಟಾಯಿಸುತ್ತಿದ್ದಾರೆ. ಹಾಗೂ ಹಣ ಬಂದೆ ಇಲ್ಲ ಅಂತ ಹೇಳುತ್ತಿದ್ದಾರೆ. ಹಾಗಾಗಿ ಯಾರಿಗೂ ಯಾವ ಮಾಹಿತಿಯನ್ನು ನೀಡಬೇಡಿ.
ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಬಂದ್ರೂ ಕೈಸೇರುತ್ತಿಲ್ಲ! ಇಲ್ಲಿದೆ ಕಾರಣ
Gruha lakshmi Scheme 6th installment money release date
Our Whatsapp Channel is Live Now 👇