ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಉಚಿತ ಅಕ್ಕಿಯ ಬದಲು ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ (Bank Account) ಸರ್ಕಾರ ಜಮಾ (DBT ) ಮಾಡುತ್ತಿದೆ
ಕಳೆದ ಆರು ತಿಂಗಳುಗಳಿಂದಲೂ ಕೂಡ ಈ ಯೋಜನೆಯ ಹಣವನ್ನು ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ವೋ ಎಂಬುದನ್ನು ಈ ರೀತಿ ಚೆಕ್ ಮಾಡಿ.
ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸಹಾಯಧನ; ಇಂದೇ ಅರ್ಜಿ ಹಾಕಿ
ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! (Annabhagya scheme installment released)
ಅನ್ನಭಾಗ್ಯ ಯೋಜನೆಯ 5 ಕಂತಿನ ಹಣವೂ ಕೂಡ ಬಿಡುಗಡೆ ಆಗಿದೆ. ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ಇದುವರೆಗೆ ಸಾಧ್ಯವಾಗದೆ ಇರುವ ಹಿನ್ನಲೆಯಲ್ಲಿ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ (Money Deposit) ಮಾಡಲಾಗುತ್ತಿದೆ. ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಅಷ್ಟು ಜನರಿಗೆ 5 ಕೆಜಿ ಅಕ್ಕಿಗೆ 170ಗಳ ಸಂದಾಯ ಆಗುತ್ತಿದೆ.
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಕೆ ವೈ ಸಿ (E-KYC) ಪೂರ್ಣಗೊಂಡಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು.
ಅದೇ ರೀತಿ ನೀವು ಡಿಬಿಟಿ ಸ್ಟೇಟಸ್ ಚೆಕ್ (DBT status) ಮಾಡುವಾಗ ಕೂಡ, ಕೆಲವು ಸಂದೇಶಗಳನ್ನು ಸ್ವೀಕರಿಸುತ್ತೀರಿ. ಆ ಸಮಯದಲ್ಲಿ ಬ್ಯಾಂಕ್ ಖಾತೆಗೆ ಕೆವೈಸಿ ಆಗಿಲ್ಲ ಎಂಬುದು ತಿಳಿಯುತ್ತದೆ. ಹೀಗೆನಾದ್ರೂ ಆಧಾರ್ ಸೀಡಿಂಗ್ ಆಗಿಲ್ಲ ಅಥವಾ ಕೆವೈಸಿ ಆಗಿಲ್ಲ ಎನ್ನುವ ಸಂದೇಶ ಸ್ವೀಕರಿಸಿದರೆ ತಕ್ಷಣ ಬ್ಯಾಂಕ್ ಹೋಗಿ, ಈ ಕೆಲಸ ಮಾಡಿಕೊಳ್ಳಿ.
ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ! ಕೂಡಲೇ ಅಪ್ಲೈ ಮಾಡಿ
ಇನ್ನು ಸಾಕಷ್ಟು ಅನರ್ಹರ ಬಿಪಿಎಲ್ ಕಾರ್ಡ್ ಕೂಡ ಸರ್ಕಾರ ರದ್ದುಪಡಿಸುತ್ತಿದ್ದು (ration card cancellation) ಅಂತವರಿಗೆ ಇದುವರೆಗೆ ಅನ್ನಭಾಗ್ಯ ಹಣ ಬಂದಿದ್ದರೆ ಇನ್ನೂ ಮುಂದೆ ಈ ಹಣ ಸಿಗುವುದಿಲ್ಲ. ಇದಕ್ಕಾಗಿ ನೀವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ನಿಮ್ಮ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎಂಬುದನ್ನು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ
ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ! (Download Mobile App)
ಈ ಯೋಜನೆಯ ಹಣ ಮಾತ್ರವಲ್ಲದೆ ಸರ್ಕಾರದಿಂದ ಬಿಡುಗಡೆ ಆಗುವ ಯಾವುದೇ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿರುವ DBT Karnataka ಎನ್ನುವ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಆಧಾರ್ ಸಂಖ್ಯೆಯನ್ನು ಹಾಕಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ. ಬಳಿಕ 4 ಅಂಕಿಯ mPIN ಅನ್ನು ರಚಿಸಬೇಕು. ಇದೇ ಸಂಖ್ಯೆಯನ್ನು ವೆರಿಫಿಕೇಶನ್ ಮಾಡಿಕೊಂಡು ಲಾಗಿನ್ ಆಗಿ.
ಈಗ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ (mobile application) ನಿಮ್ಮ ಬಳಕೆಗೆ ಸಿದ್ಧವಾಗಿದೆ. ಇದರಲ್ಲಿ ಪೇಮೆಂಟ್ ವಿಭಾಗದಲ್ಲಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಬಹುದು. ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆ ಹಾಗೂ ಪಿಂಚಣಿ ಯೋಜನೆ (pension scheme) ಯ ಹಣ ಬಿಡುಗಡೆ ಆಗಿರುವ ಮಾಹಿತಿ ಇಲ್ಲಿ ಕಾಣಿಸುತ್ತದೆ.
ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!
Annabhagya Yojana money has been deposited, Check your Account Status
Our Whatsapp Channel is Live Now 👇