ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸಹಾಯಧನ; ಇಂದೇ ಅರ್ಜಿ ಹಾಕಿ

ನಿಮಗೆ ಸರ್ಕಾರ ಸಹಾಯಧನ ನೀಡುತ್ತದೆ, ಈ ಮೂಲಕ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ

Bengaluru, Karnataka, India
Edited By: Satish Raj Goravigere

ಇನ್ಮುಂದೆ ಬಾಡಿಗೆ ಮನೆ (rented house) ಯಲ್ಲಿ ಅಥವಾ ಗುಡಿಸಿಲಿನಲ್ಲಿ ಹೆಚ್ಚು ಸಮಯ ವಾಸಿಸಬೇಕಾಗಿಲ್ಲ. ನೀವು ಸ್ವಲ್ಪ ಮುತುವರ್ಜಿಯಿಂದ ಒಂದೇ ಒಂದು ಅಪ್ಲಿಕೇಶನ್ (application for own house) ಹಾಕಿದರೂ ಸಾಕು ನಿಮಗೆ ಸರ್ಕಾರ ಸಹಾಯಧನ ನೀಡುತ್ತದೆ. ಈ ಮೂಲಕ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ.

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (Aawas Yojana) ಜಾರಿಯಲ್ಲಿ ಇದೆ, ಈಗಾಗಲೇ ಸಲ್ಲಿಕೆ ಆಗಿರುವ 1.9 ಕೋಟಿಗೂ ಅಧಿಕ ಮನೆ ಮಂಜೂರಾಗಿದ್ದು 75 ಲಕ್ಷ ಮನೆಗಳನ್ನು ವಿತರಣೆ ಮಾಡಲಾಗಿದೆ.

Housing Scheme

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ! ಕೂಡಲೇ ಅಪ್ಲೈ ಮಾಡಿ

ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯ ಅಡಿಯಲ್ಲಿ ಸಾಕಷ್ಟು ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿದೆ.

ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲದೆ ನಗರವಾಸಿಗಳು ಕೂಡ ಉಚಿತ ಮನೆ ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ. ಅತಿ ಕಡಿಮೆ ಶುಲ್ಕದಲ್ಲಿ ನೀವು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್! (Rajiv Gandhi housing scheme)

ಬಹಳ ವರ್ಷಗಳಿಂದ ಪ್ರಚಲಿತದಲ್ಲಿರುವ ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಸಾಕಷ್ಟು ಮನೆ ನಿರ್ಮಾಣವಾಗಿದೆ. ಆನ್ಲೈನಲ್ಲಿಯೇ ನೀವು ಅರ್ಜಿಯನ್ನು ಸಲ್ಲಿಸಿ, 1BHK ಹಾಗೂ 2BHK ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ

housing schemeರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಇಲ್ಲಿ ನೀವು ಗಮನಿಸಬೇಕಾದ ವಿಷಯ ಅಂದ್ರೆ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಸದ್ಯ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಾತ್ರ ಮನೆ ನಿರ್ಮಾಣ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿರುವ ಜನರು ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಬಡವರಿಗೆ ಅತ್ಯಂತ ಅನುಕೂಲಕರವಾಗಿರುವ ಈ ಯೋಜನೆಗೆ ಅರ್ಜಿ ಸಲ್ಲಿಸಲು, ಸರ್ಕಾರದ ವೆಬ್ಸೈಟ್ https://ashraya.karnataka.gov.in/index.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!

ಈಗ ನಿಮಗೆ 1BHK ಅಥವ 2BHK ಮನೆ ನಿರ್ಮಾಣ ಮಾಡಿ ಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿರುತ್ತದೆ. ನಿಮಗೆ ಯಾವ ಮನೆ ಅಗತ್ಯ ಇದೆಯೋ ಅದರ ಪಕ್ಕದಲ್ಲಿ ಕಾಣಿಸುವ ಆನ್ಲೈನ್ ಅಪ್ಲಿಕೇಶನ್ (online application) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಈಗ ಬೆಂಗಳೂರು ನಗರದ (Bengaluru City) ವಾಸಿಗಳಾಗಿದ್ದರೆ ಅಥವಾ ಬೆಂಗಳೂರು ಗ್ರಾಮಾಂತರ (Bengaluru Rural) ವಾಸಿಗಳಾಗಿದ್ದರೆ ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದು? ನೀವು ವಾಸಿಸುವ ಸ್ಥಳ ಯಾವುದು? ಮೊದಲಾದ ಮಾಹಿತಿಯನ್ನು ನೀಡಬೇಕು.

ನಂತರ ಅಗತ್ಯ ಇರುವ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ. ಅರ್ಜಿಯನ್ನು ಪರಿಶೀಲಿಸಿ, ನೀವು ಅರ್ಹರಾಗಿದ್ದರೆ ನಿಮಗೆ ಮನೆ ಮಂಜೂರ್ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹೌಸಿಂಗ್ ಕಚೇರಿಗೆ ಭೇಟಿ ನೀಡಬಹುದು.

ಉಚಿತ ವಿದ್ಯುತ್ ಪಡೆಯಲು ಹೊಸ ನಿಯಮ; ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ

The government provides subsidy for own house construction