ದಿನ ಕಳೆದಂತೆ ರೇಷನ್ ಕಾರ್ಡ್ (Ration Card) ಮೌಲ್ಯ ಹೆಚ್ಚುತ್ತಿದೆ ಎಂದು ಹೇಳಬಹುದು. ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ, ಬಿಪಿಎಲ್ ಕಾರ್ಡ್ (BPL card) ಇದ್ದರೆ ಆರೋಗ್ಯ ಕಾರ್ಡ್ ( health card) ಮಾಡಿಸುವುದು ಕೂಡ ಬಹಳ ಸುಲಭ ಹಾಗೂ ಇದರಿಂದ ಹೆಚ್ಚಿನ ಬೆನಿಫಿಟ್ ಸಿಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಇದೆಯಾ?
ಈಗಾಗಲೇ ಸಲ್ಲಿಕೆಯಾಗಿರುವ ಮೂರು ಲಕ್ಷದಷ್ಟು ರೇಷನ್ ಕಾರ್ಡ್ ಅರ್ಜಿಗಳನ್ನ ಪರಿಶೀಲನೆ ಮಾಡಿ ವಿತರಣೆ ಮಾಡುವಲ್ಲಿಗೆ ಸರ್ಕಾರ ಬಹಳ ವಿಳಂಬ ಮಾಡುತ್ತಿದೆ. ಕಳೆದ ಎರಡರಿಂದ ಮೂರು ವರ್ಷಗಳ ವರೆಗೆ ಸಲ್ಲಿಕೆ ಆಗಿರುವ ಅರ್ಜಿಗಳ ಪರಿಶೀಲನೆ ಇನ್ನು ನಡೆದಿಲ್ಲ.
ಆಹಾರ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ (food minister K.H muniyappa) ತಿಳಿಸಿರುವ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಹೊಸ ಪಡಿತರ ಕಾರ್ಡ್ ವಿತರಣೆ ಕೆಲಸ ಆರಂಭವಾಗಬಹುದು.
ಈ ಪಟ್ಟಿಯಲ್ಲಿ ಹೆಸರು ಇದ್ರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ!
ಹೀಗಾಗಿ ಇನ್ನು ನೆನೆಗುದಿಗೆ ಬಿದ್ದಿರುವ ಕಾರ್ಡ್ ವಿತರಣೆ ಆಗುವವರೆಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಆರೋಗ್ಯಕ್ಕೆ ಸಂಬಂಧಪಟ್ಟ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಬಿಪಿಎಲ್ ಕಾರ್ಡ್ (BPL Card) ಪಡೆದುಕೊಳ್ಳುವುದು ಅನಿವಾರ್ಯವಾಗಿದ್ದರೆ ಆಗ ಅಧಿಕಾರಿಗಳ ಬಳಿ ಮಾತನಾಡಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಪ್ರಯತ್ನಿಸಬಹುದು.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಯಾವಾಗಿನಿಂದ?
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಥವಾ ನಿಮ್ಮ ವಾಟ್ಸಪ್ ಗ್ರೂಪ್ ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎನ್ನುವ ಮಾಹಿತಿ ಬಂದಿರಬಹುದು. ಹಾಗೆ ಇದು ಸುಳ್ಳು ಸುದ್ದಿ, ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಸಂಬಂಧಪಟ್ಟಂತೆ ಅಥವಾ ಹೊಸ ಅರ್ಜಿ ಸ್ವೀಕರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹಾಗಾಗಿ ಸದ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇಲ್ಲ.
ಆದರೆ ಕೆಲವು ಮೂಲಗಳ ಪ್ರಕಾರ ಫೆಬ್ರವರಿ ಆರಂಭದಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಕೆಲವು ಸಮಯಾವಕಾಶ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಇದು ಕೆಲವೇ ಗಂಟೆಗಳ ಅವಕಾಶವಾಗಿದ್ದು, ಎಲ್ಲರೂ ತಿದ್ದುಪಡಿ ಮಾಡಿಕೊಳ್ಳುವುದು ಕೂಡ ಕಷ್ಟವಾಗಬಹುದು.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್; NPCI ಆಗದೆ ಇದ್ರೆ ಹಣ ಜಮಾ ಆಗೋದಿಲ್ಲ!
ಆದರೆ ನಿಮಗೆ ನಿಮ್ಮ ಊರಿನ ಹತ್ತಿರದ ಸೇವಾಕೇಂದ್ರ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರದ ಸಿಬ್ಬಂದಿಗಳ ಪರಿಚಯ ಇದ್ದಲ್ಲಿ ಅವರ ಬಳಿ ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೊಟ್ಟು ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಸಿಕ್ಕ ತಕ್ಷಣ ಅಗತ್ಯ ಇರುವ ತಿದ್ದುಪಡಿ ಮಾಡಲು ಹೇಳಬಹುದು.
ಅಲ್ಲಿ ಅವರು ತಿದ್ದುಪಡಿ ಮಾಡಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಅವರಿಗೆ ತಿಳಿಸಿದರೆ ಸಾಕು. ನಿಮಗೆ ಅಗತ್ಯ ಇರುವ ರೇಷನ್ ಕಾರ್ಡ್ ತಿದ್ದುಪಡಿ ಕೆಲಸ ಆಗುತ್ತದೆ. ಬಯೋಮೆಟ್ರಿಕ್ (biometric) ಅಥವಾ ಓಟಿಪಿ (OTP) ಎರಡು ಕೂಡ ಸೆಕ್ಯೂರ್ ಆಗಿರುವ ವಿಧಾನವಾಗಿದ್ದು, ನೀವು ಸ್ವತಹ ಹೋಗಿ ಬಯೋಮೆಟ್ರಿಕ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಓಟಿಪಿ ಮೂಲಕ ಬದಲಾವಣೆ ಮಾಡಿಕೊಳ್ಳಬಹುದು.
ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದ ನಿರ್ಧಾರ; ರೇಷನ್ ಕಾರ್ಡ್ ವಿತರಣೆ!
Allowance for correction of ration card, Date announced
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.