ಈ ಪಟ್ಟಿಯಲ್ಲಿ ಹೆಸರು ಇದ್ರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ!
ಅನ್ನಭಾಗ್ಯ ಯೋಜನೆ (Annabhagya scheme) ಹಣ ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣವನ್ನು ಇಷ್ಟು ದಿನ ಯಾರು ಪಡೆದುಕೊಂಡಿದ್ದಾರೋ, ಅಂಥವರಿಗೆ ರಾಜ್ಯ ಸರ್ಕಾರ (State government) ಒಂದು ಆಘಾತಕಾರಿ ನ್ಯೂಸ್ ನೀಡಿದೆ. ಈವರೆಗೆ 5ನೇ ಕಂತಿನ ಹಣವನ್ನು ಪಡೆದುಕೊಂಡ ಮಹಿಳೆಯರು ಮುಂದಿನ ಕಂತಿನಿಂದ ಹಣ ಪಡೆದುಕೊಳ್ಳದೆ ಇರುವ ಸಾಧ್ಯತೆ ಇದೆ.
ಹೌದು, ಇದನ್ನು ಕೇಳಿ ನಿಮಗೂ ಶಾಕ್ ಆಗಬಹುದು. ಆದರೆ ಸರ್ಕಾರ ಈ ಬಗ್ಗೆ ಮಹತ್ವದ ಮಾಹಿತಿಯನ್ನು ಹೊರಹಾಕಿದೆ. ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿಗಳಂತೆ ಈ ವರೆಗೆ 10 ಸಾವಿರ ರೂಪಾಯಿಗಳನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ.
ರೈತರಿಗೆ ಭರ್ಜರಿ ಸುದ್ದಿ! ಈ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ರೈತರ ಸಾಲ ಮನ್ನಾ
ಮನೆಯ ಸಣ್ಣಪುಟ್ಟ ಖರ್ಚು ವೆಚ್ಚಗಳಿಗಾಗಿ ಮಹಿಳೆಯರಿಗೆ ಸರ್ಕಾರ ನೀಡಲಾಗುತ್ತಿರುವ 2000 ರಿಂದ ಹೆಚ್ಚು ಪ್ರಯೋಜನ ಆಗಿದೆ ಎನ್ನಬಹುದು. ಆದರೆ ಈಗ ಈ ಯೋಜನೆಗಳ ಹಣ ನಿಮ್ಮ ಖಾತೆಗೆ (Bank Account) ತಲುಪುತ್ತದೆಯೋ ಇಲ್ಲವೋ ಎನ್ನುವುದನ್ನು ನೀವು ಚೆಕ್ ಮಾಡಿಕೊಳ್ಳಬೇಕು.
ರದ್ದಾಗಿದೆ ರೇಷನ್ ಕಾರ್ಡ್! (Ration card cancellation)
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸರಕಾರದ ಗ್ಯಾರಂಟಿ ಯೋಜನೆಯ ಡಿ ಬಿ ಟಿ (DBT) ಹಣ ಪಡೆದುಕೊಳ್ಳಲು ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಇರುವುದು ಬಹಳ ಮುಖ್ಯವಾಗಿರುತ್ತದೆ
ಆದರೆ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ವಿಚಾರದಲ್ಲಿ ಬಹಳ ಸ್ಟ್ರಿಕ್ಟ್ ಆಗಿರುವ ರಾಜ್ಯ ಸರ್ಕಾರ, ಅನರ್ಹರ ಹಾಗೂ ಅನಗತ್ಯವಾಗಿ ಪಡೆದುಕೊಂಡ ಬಿಪಿಎಲ್ ರೇಷನ್ ಕಾರ್ಡ್ ರದ್ದುಪಡಿ ಕೆಲಸವನ್ನು ಮುಂದುವರಿಸಿದೆ.
ಹಾಗಾಗಿ ಈಗಾಗಲೇ ಸಾಕಷ್ಟು ಜನ ಬೇರೆ ಬೇರೆ ಕಾರಣಕ್ಕೆ ತಮ್ಮ ರೇಷನ್ ಕಾರ್ಡ್ ಕಳೆದುಕೊಂಡಿದ್ದಾರೆ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಮುಂದಿನ ತಿಂಗಳಿನಿಂದ ಯಾವ ಹಣವು ನಿಮ್ಮ ಖಾತೆಯನ್ನು ತಲುಪುವುದಿಲ್ಲ (Money Deposit).
ರೈತರಿಗೆ ಕೃಷಿ ಇಲಾಖೆಯಿಂದ ಬಂಪರ್ ಕೊಡುಗೆ! ಈ ಯೋಜನೆಗೆ ಅರ್ಜಿ ಸಲ್ಲಿಸಿ
ರೇಷನ್ ಕಾರ್ಡ್ ರದ್ದುಪಡಿ ಲಿಸ್ಟ್ ಚೆಕ್ ಮಾಡುವುದು ಹೇಗೆ?
https://ahara.kar.nic.in/Home/EServices ಅಧಿಕೃತ ವೆಬ್ಸೈಟ್ ಗೆ ಹೋಗಿ. ಎಡಭಾಗದಲ್ಲಿ ಕಾಣುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಿ.
ಈಗ ಈ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ರದ್ದು ಪಡಿ ಮಾಡಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಇನ್ನು ಮುಂದಿನ ಹಂತದಲ್ಲಿ, ನಿಮ್ಮ ಜಿಲ್ಲೆ ತಾಲೂಕು ರದ್ದುಪಡಿ ಮಾಡಲಾಗಿರುವ ವರ್ಷ ಹಾಗೂ ತಿಂಗಳು ಇವುಗಳನ್ನು ಸೆಲೆಕ್ಟ್ ಮಾಡಬೇಕು. ನಂತರ ಗೋ ಎಂದು ಕೊಟ್ಟರೆ ನೀವು ಆಯ್ಕೆ ಮಾಡಿದ ವರ್ಷ ಹಾಗೂ ತಿಂಗಳಿನಲ್ಲಿ ರದ್ದುಪಡಿ ಮಾಡಲಾಗಿರುವ ರೇಷನ್ ಕಾರ್ಡ್ ಯಜಮಾನರ ಹೆಸರು ಡಿಸ್ಪ್ಲೇ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್; NPCI ಆಗದೆ ಇದ್ರೆ ಹಣ ಜಮಾ ಆಗೋದಿಲ್ಲ!
ಇದರಲ್ಲಿ ನಿಮ್ಮ ಹೆಸರು ಕೂಡ ಇದ್ರೆ ನಿಮಗೆ ಮುಂದಿನ ತಿಂಗಳಿನಿಂದ ಗ್ಯಾರಂಟಿ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ. ನೀವು ಮತ್ತೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
Gruha Lakshmi and Annabhagya Yojana Money will not get if the name is in this list