ರೈತರಿಗೆ ಭರ್ಜರಿ ಸುದ್ದಿ! ಈ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ರೈತರ ಸಾಲ ಮನ್ನಾ

ರೈತರ ಕೃಷಿ ಸಾಲಕ್ಕೆ ಸಂಬಂಧಪಟ್ಟ ಹಾಗೆ ಸಿಎಂ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ವರದಿ ಆಗಿದೆ. ಇತ್ತೀಚಿಗೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ (CM Siddaramaiah) ಅವರು ಈ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ತೆಗೆದುಕೊಂಡ ರೈತರಿಗೆ ಬಡ್ಡಿ ಮನ್ನ ಮಾಡುವ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ರೈತರಿಗೆ ಕೃಷಿ ಸಾಲ (agriculture loan) ಪಡೆದುಕೊಳ್ಳುವುದು ಅನಿವಾರ್ಯ. ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಒದಗಿಸಲು, ರೈತರಿಗೆ ಸಾಲ ತೆಗೆದುಕೊಳ್ಳುವ ಅಗತ್ಯವಿರುತ್ತದೆ.
ಆದರೆ ಈ ವರ್ಷ ರಾಜ್ಯದಲ್ಲಿ ಹಲವು ಕಡೆ ಸರಿಯಾಗಿ ಮಳೆ ಆಗದೆ ಇರುವ ಪರಿಣಾಮ, ರೈತರು ಕೋ ಆಪರೇಟಿವ್ ಸೊಸೈಟಿ (cooperative society) ಗಳಲ್ಲಿ ಮಾಡಿದ ಕೃಷಿ ಸಾಲವನ್ನು (Loan) ತೀರಿಸಲು ಪರದಾಡುತ್ತಿದ್ದಾರೆ.
ರೈತರಿಗೆ ಕೃಷಿ ಇಲಾಖೆಯಿಂದ ಬಂಪರ್ ಕೊಡುಗೆ! ಈ ಯೋಜನೆಗೆ ಅರ್ಜಿ ಸಲ್ಲಿಸಿ
ಇದನ್ನು ಗುರುತಿಸಿರುವ ರಾಜ್ಯ ಸರ್ಕಾರ ಸಹಕಾರಿ ಸಂಘಗಳಲ್ಲಿ ಸಾಲ ಮಾಡಿದವರು ಸಾಲ ಮನ್ನಾ ಮಾಡುವ ಬಗ್ಗೆ ಮಹತ್ವದ ಬೇಸರವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿದ್ದಾರೆ.
ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ, ಕೃಷಿ ಪತ್ತಿನ ಸಂಘ, ಲ್ಯಾಂಪ್ಸ್ ಸಹಕಾರಿ ಸಂಘಗಳು ಮೊದಲಾದ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲು ಮಾಡಿರುವ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಕೃಷಿ ಸಾಲದ ಬಡ್ಡಿ ಮನ್ನಾ ಸೌಲಭ್ಯ ಯಾವೆಲ್ಲಾ ರೈತರಿಗೆ ಸಿಗಲಿದೆ ನೋಡೋಣ.

ರೈತರು ಕೃಷಿಯೇತರ ಚಟುವಟಿಕೆಗೆ ಸಾಲ ಮಾಡಿದ್ರೆ ಬಡ್ಡಿಮನ್ನ ಆಗುವುದಿಲ್ಲ ಹಾಗೂ ಸಹಕಾರಿ ಸಂಘಗಳನ್ನು ಹೊರತುಪಡಿಸಿ ಬೇರೆ ಬ್ಯಾಂಕ್ ನಲ್ಲಿ ಸಾಲ ಮಾಡಿದರೆ ಬಡ್ಡಿ ಮನ್ನಾ ಅನ್ವಯವಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್; NPCI ಆಗದೆ ಇದ್ರೆ ಹಣ ಜಮಾ ಆಗೋದಿಲ್ಲ!
ನಬಾರ್ಡ್ ಗುರುತಿಸಿರುವ ಮಧ್ಯಮ ಹಾಗೂ ದೀರ್ಘಾವಧಿಯ ಕೃಷಿ ಚಟುವಟಿಕೆಗೆ ಮಾಡಿರುವ ಸಾಲದ ಬಡ್ಡಿ ಮನ್ನಾ ಮಾಡಲಾಗುವುದು. ಮೀನು ಕೃಷಿ, ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿ, ರೇಷ್ಮೆ ಕೃಷಿ, ಪಶು ಸಂಗೋಪನೆಗೆ ಮಾಡಿದ ಸಾಲಗಳು ಇದರಲ್ಲಿ ಸೇರುತ್ತದೆ.
10 ಲಕ್ಷದವರೆಗಿನ ಸಾಲಕ್ಕೆ ಸಾಮಾನ್ಯ ಬಡ್ಡಿದರ ವಿಧಿಸಿದ್ದರು ಕೂಡ ಈ ಸಲಕ್ಕೆ ಆಗುವ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡುವುದಾಗಿ ತಿಳಿಸಿದೆ. ಕೃಷಿ ಸಾಲದ ಮನ್ನಾ ವಿಚಾರದಲ್ಲಿ ಸಾಕಷ್ಟು ನಿಯಮಗಳನ್ನು ಕೂಡ ತರಲಾಗಿದ್ದು ಆ ನಿಯಮಗಳ ಅಡಿಯಲ್ಲಿ ಬರುವ ರೈತರ ಸಾಲ ಮಾತ್ರ ಮನ್ನಾ ಆಗಲಿದೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದ ನಿರ್ಧಾರ; ರೇಷನ್ ಕಾರ್ಡ್ ವಿತರಣೆ!
Loan waiver for farmers who have taken loans from this bank



