ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?
agriculture loan : ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ, ಬೆಳೆ ಅಭಾವದಿಂದ ರೈತರು (farmers) ಸಾಕಷ್ಟು ಕಷ್ಟ ಪಡುವಂತೆ ಆಗಿದೆ. ಸರ್ಕಾರ ರಾಜ್ಯದ ಸಾಕಷ್ಟು ಪ್ರದೇಶಗಳನ್ನ ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿಯೂ ಕೂಡ ವಾಸಿಸುವ ಅ ರೈತರಿಗೆ ಬರ ಪರಿಹಾರವನ್ನು ಕೂಡ ಘೋಷಿಸಲಾಗಿದೆ.
ರೈತರಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಈ ವರ್ಷದ ಕೃಷಿ ಸಾಲದ ಬಡ್ಡಿ ಮನ್ನಾ (Loan Interest waived) ಮಾಡಲು ಸರ್ಕಾರ ನಿರ್ಧರಿಸಿದೆ. ಕೃಷಿ ಸಾಲದ (agriculture loan) ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲು ಬ್ಯಾಂಕ್ ಗಳಿಗೂ ಕೂಡ ಮನವಿ ಮಾಡಲಾಗಿದೆ.
ಯುವನಿಧಿ ಯೋಜನೆ ಹಣ ಪಡೆಯಲು ಈ ದಾಖಲೆ ಕಡ್ಡಾಯ! ಇಲ್ಲಿದೆ ಹೊಸ ರೂಲ್ಸ್
ರೈತರ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಯಾರೆಲ್ಲ ಅರ್ಹರು ಎಂಬುದನ್ನು ನೋಡೋಣ.
*2023 ಡಿಸೆಂಬರ್ 31ಕ್ಕೆ ಸುಸ್ತಿಯಾಗುವ ಮಧ್ಯಮ ಅವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ, ಅಂತಹ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ. ಆದರೆ ಫೆಬ್ರವರಿ 29 2024ಕ್ಕೆ ಸಾಲದ ಸಂಪೂರ್ಣ ಅಸಲು ಪಾವತಿ ಮಾಡಿರಬೇಕು.
*ಕೃಷಿಯೇತರ ಸಾಲಕ್ಕೆ ಇದು ಅನ್ವಯವಾಗುವುದಿಲ್ಲ.
* ನಿಗದಿತ ಸಹಕಾರ ಸಂಘಗಳನ್ನು ಹೊರತುಪಡಿಸಿ ಬೇರೆ ಕಡೆ ಸಾಲ ತೆಗೆದುಕೊಂಡಿದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ.
ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!
*ಪಶು ಸಂಗೋಪನೆ, ಹೈನುಗಾರಿಕೆ, ಪ್ಲಾಂಟೇಶನ್, ತೋಟಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಸಾವಯವ ಕೃಷಿ, ಭೂ ಅಭಿವೃದ್ಧಿ ನಬಾರ್ಡ್ (NABARD) ಸೂಚಿಸಿದ ಮೊದಲಾದ ಕೃಷಿ ಕಾರಣಗಳಿಗಾಗಿ ಮಧ್ಯಮ ಅವಧಿಯ ಹಾಗೂ ದೀರ್ಘಾವಧಿಯ ಸಾಲ ತೆಗೆದುಕೊಂಡಿದ್ದರೆ ಅಂತಹ ಸಾಲದ ಬಡ್ಡಿ ಮನ್ನ ಮಾಡಲಾಗುವುದು.
*ರಾಜ್ಯ ಸರ್ಕಾರದ ಬಡ್ಡಿ ಮನ್ನಾ, ಪದ್ಧತಿಯ ಅಡಿ ಕೃಷಿ ಸಾಲ ಅಥವಾ ಕೃಷಿ ಚಟುವಟಿಕೆಗಳಿಗಾಗಿ ಸಾಲ ತೆಗೆದುಕೊಂಡರೆ ಅನ್ವಯವಾಗುತ್ತದೆ.
ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ
*10 ಲಕ್ಷದವರೆಗಿನ ಸಾಲದ ಬಡ್ಡಿ ಮನ್ನಾ ಮಾಡಲಾಗುತ್ತದೆ.
*ಫೆಬ್ರುವರಿ 29 2024ಕ್ಕೆ ಸಂಪೂರ್ಣ ಅಸಲು ಪಾವತಿ ಮಾಡಿದ್ದರೆ ಮಾತ್ರ, ಬಡ್ಡಿ ಮನ್ನಾ ಮಾಡಲಾಗುತ್ತದೆ.
*ಮಾರಟೋರಿಯಂ ಅವಧಿಯಲ್ಲಿ ಸುಸ್ತಿ ಯಾಗುವ ಸಾಲಕ್ಕೆ ಬಡ್ಡಿ ಮನ್ನಾ ಅನ್ವಯವಾಗಲಿದೆ.
Good news for farmers, Agricultural loan interest waiver