ರಾಜ್ಯದಲ್ಲಿ ನಿರುದ್ಯೋಗ ಯುವಕರು (unemployed youth) ಕೆಲಸ ಗಳಿಸುವವರೆಗೆ ಎರಡು ವರ್ಷಗಳ ಅವಧಿಗೆ ಸರ್ಕಾರ ಯುವ ನಿಧಿ ಯೋಜನೆ (Yuva Nidhi scheme) ಯ ಮೂಲಕ ನಿರುದ್ಯೋಗ ಭತ್ಯೆ (unemployed allowance) ನೀಡುತ್ತಿದೆ. ಇದೇ ಜನವರಿ 12, 2024ರಂದು ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ.
ಯುವ ನಿಧಿ ಯೋಜನೆ, ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಆಗಿದೆ. ಈ ಯೋಜನೆಯನ್ನು ಕೂಡ ಜಾರಿಗೆ ತಂದಿರುವ ಸರ್ಕಾರ ಕಳೆದ ಆರು ತಿಂಗಳಿನಿಂದ ವಿದ್ಯಾಭ್ಯಾಸ ಮುಗಿಸಿದ್ದರು ಕೂಡ, ಕೆಲಸ ಸಿಗದೇ ಇರುವ ಯುವಕ ಯುವತಿಯರಿಗೆ ಪ್ರತಿ ತಿಂಗಳು ಧನ ಸಹಾಯ ಮಾಡುತ್ತಿದೆ.
ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!
2022 – 23ನೇ ಸಾಲಿನಲ್ಲಿ ಪದವಿ ಮುಗಿಸಿರುವ ಹಾಗೂ ನಿರುದ್ಯೋಗಿ ಯುವಕ ಯುವತಿಯರು 3000 ಗಳ ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಮುಗಿಸಿರುವವರು (Diploma) ಸಾವಿರದ ಐದುನೂರು ರೂಪಾಯಿಗಳ ನಿರುದ್ಯೋಗ ಭತ್ಯೆ ಪಡೆದುಕೊಳ್ಳಬಹುದು.
ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಈ ನಿಯಮ ಪಾಲಿಸಬೇಕು!
ಸರ್ಕಾರ ಯುವ ನಿಧಿ ಯೋಜನೆಗೆ ಸಂಬಂಧಪಟ್ಟ ಹಾಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ವಿರುದ್ಧ ನಡೆದುಕೊಂಡರೆ, ಅಥವಾ ಈ ನಿಯಮ ಪಾಲನೆ ಮಾಡಲು ಇತರೆ ಅಂತವರಿಗೆ ಮುಂದಿನ ತಿಂಗಳಿನಿಂದ ನಿರುದ್ಯೋಗ ಭತ್ಯೆ ಬರುವುದಿಲ್ಲ. ಹಾಗಾದ್ರೆ ಸರ್ಕಾರದ ಹೊಸ ರೂಲ್ಸ್ ಯಾವುದು? ನೋಡೋಣ.
ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ
ನಿರುದ್ಯೋಗ ಭತ್ಯೆ ಪಡೆಯಲು ಪ್ರತಿ ತಿಂಗಳು ಈ ದಾಖಲೆ ಸಲ್ಲಿಸಬೇಕು!
ಸರ್ಕಾರದಿಂದ ಪ್ರತಿ ತಿಂಗಳು ತಲಾ 3,000 ರೂಪಾಯಿ ಅಥವಾ 1,500 ನಿರುದ್ಯೋಗ ಭತ್ಯೆ ಆಗಿ ಪಡೆದುಕೊಳ್ಳುತ್ತಿರುವ ಯುವಕ ಯುವತಿಯರು, ಇನ್ನು ಮುಂದೆ ಪ್ರತಿ ತಿಂಗಳು ಹಣ ಖಾತೆಗೆ (Bank Account) ಮಂಜೂರು ಆಗಬೇಕು ಅಂದ್ರೆ ಇದೊಂದು ದಾಖಲೆಯನ್ನು ಕೊಡಬೇಕು
ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವ ಯುವಕ ಯುವತಿಯರು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ವಂಚನೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಹೊಸ ನಿಯಮವನ್ನು ತರಲಾಗಿದೆ.
ಸ್ವಯಂ ಘೋಷಣಾ ಪ್ರಮಾಣ ಪತ್ರವನ್ನು ಪ್ರತಿ ತಿಂಗಳು ಹಣ ಜಮಾ ಆಗಲು ಸರ್ಕಾರದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ತಮಗೆ ಇನ್ನು ಕೆಲಸ ಸಿಕ್ಕಿಲ್ಲ ಎನ್ನುವುದರ ಪ್ರಮಾಣ ಪತ್ರ ಇದಾಗಿರುತ್ತದೆ.
ಈ ಪಟ್ಟಿಯಲ್ಲಿ ಹೆಸರು ಇದ್ರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ!
NAD (National Academy Depository) ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣಪತ್ರಗಳನ್ನು ಹೊಂದಿರುತ್ತದೆ. ಅಲ್ಲಿಂದ ಸರ್ಕಾರ ಮಾಹಿತಿಯನ್ನು ಪಡೆದುಕೊಳ್ಳುತ್ತದೆ
ಇನ್ನು ನಿರುದ್ಯೋಗಿ ಯುವಕ ಯುವತಿಯರು ಸಲ್ಲಿಸಿದ ದೃಢೀಕರಣ ಪ್ರಮಾಣ ಪತ್ರದೊಂದಿಗೆ ಟ್ಯಾಲಿ ಮಾಡಲಾಗುತ್ತದೆ. ಒಂದು ವೇಳೆ ಕೆಲಸ ಸಿಕ್ಕಿಯು ಸಿಕ್ಕಿಲ್ಲ ಎಂದು ಯುವಕ ಯುವತಿಯರು ಸುಳ್ಳು ಹೇಳುವಂತಿಲ್ಲ ಅಥವಾ ಉನ್ನತ ಅಭ್ಯಾಸಕ್ಕೆ ಹೋಗಿದ್ದು ಹೋಗಿಲ್ಲ ಎಂದು ಹೇಳುವಂತಿಲ್ಲ.
ಸರ್ಕಾರದ ನಿಯಮವನ್ನು ಪಾಲಿಸಿದರೆ ಮಾತ್ರ ಯುವನಿಧಿ ಯೋಜನೆಯ ಹಣ ಯುವಕ ಯುವತಿಯರ ಖಾತೆಗೆ (Bank Account) ಪ್ರತಿ ತಿಂಗಳು ಜಮಾ ಆಗಲಿದೆ.
This document is mandatory to get money for yuva Nidhi scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.