ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ 3 ಲಕ್ಷ ತನಕ ಬಡ್ಡಿ ರಹಿತ ಸಾಲ

Loan Scheme : ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆ ಕೂಡ ಸ್ವಾವಲಂಬನೆ (independence life) ಇಂದ ಜೀವನ ನಡೆಸಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶ.

ಮಹಿಳೆಯರ ಸ್ವಾವಲಂಬಿ ಹಾಗೂ ಸಬಲೀಕರಣ (women empowerment) ಕ್ಕಾಗಿ ಸರ್ಕಾರ ಈಗಾಗಲೇ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಕೂಡ ಬಹುತೇಕ ಮಹಿಳೆಯರಿಗೆ ಮೀಸಲಾಗಿದೆ ಎನ್ನಬಹುದು.

ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?

ರಾಜ್ಯ ಸರ್ಕಾರ ಈಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಮಹಿಳೆಯರು ತಮ್ಮ ಸ್ವಂತ ಉದ್ಯೋಗ ಆರಂಭಿಸುವುದಕ್ಕೆ ಸರ್ಕಾರ ಸಬ್ಸಿಡಿ (subsidy) ದರದಲ್ಲಿ ಸಾಲ ಸೌಲಭ್ಯ (loan facility) ಒದಗಿಸುತ್ತದೆ.

ಒಂದೇ ಒಂದು ರೂಪಾಯಿಗಳ ಬಡ್ಡಿ (rate of interest) ಯನ್ನು ಕೂಡ ಚಾರ್ಜ್ ಮಾಡದೆ ತೆಗೆದುಕೊಂಡು ಸಾಲಕ್ಕೆ ಮತ್ತೆ ಸಬ್ಸಿಡಿ ನೀಡುವುದರ ಮೂಲಕ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರದಿಂದ ಧನ ಸಹಾಯ ಪಡೆಯಬಹುದು.

ಮಹಿಳೆಯರಿಗಾಗಿ ಮತ್ತೊಂದು ಯೋಜನೆ; ಸಿಗಲಿದೆ 2.25 ಲಕ್ಷ ರೂಪಾಯಿ ಸಬ್ಸಿಡಿ ಹಣ

ಉದ್ಯೋಗಿನಿ ಯೋಜನೆ! (Udyogini scheme)

ವಿಶೇಷವಾಗಿ ಮಹಿಳೆಯರಿಗಾಗಿಯೇ ಆರಂಭಗೊಂಡಿರುವ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸುಮಾರು 88 ಸ್ವಯಂ ಉದ್ಯಮ (own business) ಮಾಡಲು ಮಹಿಳೆಯರು ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಾರೆ. ಯೋಜನೆಯ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಯೋಜನೆ ಅಡಿಯಲ್ಲಿ ಸುಮಾರು 48,000 ಮಹಿಳೆಯರು ಈಗಾಗಲೇ ಸ್ವಂತ ಉದ್ಯಮ (Own Business) ಆರಂಭಿಸಲು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ.

Loanಯಾರು ಅರ್ಜಿ ಸಲ್ಲಿಸಬಹುದು?

18 ರಿಂದ 55 ವರ್ಷ ವಯಸ್ಸಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಗಮನ ನೀಡಲಾಗುತ್ತಿರುವ ಈ ಯೋಜನೆಯ ಅಡಿಯಲ್ಲಿ ಮನೆಯಲ್ಲಿಯೇ ಕುಳಿತು ಮಾಡುವಂತ ಕೆಲವು ಉದ್ಯಮಗಳಿಗೂ ಕೂಡ ಉದ್ಯೋಗಿನಿ ಹಣ ಸಿಗುತ್ತದೆ.

ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!

ಉದ್ಯೋಗಿನಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು (documents)

ಮಹಿಳೆಯ ಆಧಾರ್ ಕಾರ್ಡ್

ಜಾತಿ ಪ್ರಮಾಣ

ಆದಾಯ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವ ಮಹಿಳೆ ವಿಧವೆಯಾಗಿದ್ದರೆ ಅಥವಾ ಅಂಗವಿಕಲರಾಗಿದ್ದರೆ ಸರಕಾರದಿಂದ ದೃಢೀಕರಣ ಪ್ರಮಾಣ ಪತ್ರ

ಯಾವ ಉದ್ಯೋಗ ಮಾಡಲು ಬಯಸುತ್ತೀರಿ ಎಂಬುದರ ಬಗ್ಗೆ ವಿವರ

ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 3,00,000ಗಳಿಗೆ 1,50,000 ರೂಪಾಯಿಗಳವರೆಗೆ ಸಬ್ಸಿಡಿ ಅಥವಾ 40% ಸಬ್ಸಿಡಿ ನೀಡಲಾಗುತ್ತದೆ. ಅದೇ ಸಾಮಾನ್ಯ ಮಹಿಳೆಯರಿಗೆ 3 ಲಕ್ಷಗಳ ಸಾಲಕ್ಕೆ 90 ಸಾವಿರ ರೂಪಾಯಿಗಳ ಸಬ್ಸಿಡಿ ಅಥವಾ 30% ಸಬ್ಸಿಡಿ ನೀಡಲಾಗುತ್ತದೆ. ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಪಾವತಿಸುವ ಅಗತ್ಯವಲ್ಲ.

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ಪಡೆದುಕೊಳ್ಳಲು ಉದ್ಯೋಗಿನಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ (Bank Account) ಭೇಟಿ ನೀಡಿ ಅಲ್ಲಿಯೂ ಅರ್ಜಿ ಸಲ್ಲಿಸಬಹುದು.

Women will get interest free loan up to 3 lakhs, By this Scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories