ರೈತರ ಖಾತೆಗೆ ಈ ದಿನ ಜಮಾ ಆಗಲಿದೆ 2,000 ರೂಪಾಯಿ, ಅಧಿಕೃತ ಘೋಷಣೆ

ರಾಜ್ಯದಲ್ಲಿ ಬರ ಪರಿಹಾರದ ಹಣ (Drought Relief Fund) ಯಾವಾಗ ಕೈ ಸೇರುತ್ತದೆ ಎಂದು ರೈತರು (Farmers) ಕಾದು ಕುಳಿತಿದ್ದಾರೆ. ಕಳೆದ ಎರಡು ಮೂರು ತಿಂಗಳ ಹಿಂದೆ ರಾಜ್ಯದಲ್ಲಿ ಸುಮಾರು 227 ಪ್ರದೇಶಗಳನ್ನು ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತು. ಹಾಗೂ ಇಂತಹ ಸ್ಥಳದಲ್ಲಿ ವಾಸಿಸುವ ರೈತರಿಗೆ ಬರ ಪರಿಹಾರ ನೀಡುವುದಾಗಿ ತಿಳಿಸಿತ್ತು. ಆದರೆ ಇಲ್ಲಿಯವರೆಗೆ ರೈತರಿಗೆ ಬರ ಪರಿಹಾರದ ಹಣ ಸಿಕ್ಕಿಲ್ಲ!
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 4 ಸಾವಿರ ಮಾಡಿಕೊಳ್ಳಿ! ಹೊಸ ಅಪ್ಡೇಟ್
ಬರ ಪರಿಹಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಇತ್ತೀಚಿಗೆ ಪಿರಿಯಾಪಟ್ಟಣದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಬರ ಪರಿಹಾರದ ಹಣವನ್ನು ಸದ್ಯದಲ್ಲಿಯೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಿಲ್ಲ ಹಣ!
ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಅಮಿತ್ ಶಾ (central minister Amit Shah ) ಅವರನ್ನು ಭೇಟಿಯಾಗಿ ತಿಳಿಸಲಾಗಿದೆ ಅವರು ಕೂಡ ಬರ ಪರಿಹಾರ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಹಣ ಬಿಡುಗಡೆ ಆಗಿಲ್ಲ ಇನ್ನೊಮ್ಮೆ ಸಭೆಯನ್ನು ನಡೆಸಿ ಕಾರಣಾಂತರಗಳಿಂದ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಮಾನ್ಯ ಪ್ರಧಾನಮಂತ್ರಿ (prime minister) ಯವರು ರಾಜ್ಯಕ್ಕೆ ಬಂದಾಗಲೂ ಕೂಡ ನಾನು ಈ ವಿಚಾರವನ್ನು ಅವರ ಗಮನಕ್ಕೆ ತಂದಿದ್ದೇನೆ. ಬರ ಪರಿಹಾರದ ಹಣ ಬಿಡುಗಡೆ ಮಾಡುವಂತೆ ನೆನಪಿಸಿದ್ದೇನೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ 3 ಲಕ್ಷ ತನಕ ಬಡ್ಡಿ ರಹಿತ ಸಾಲ
ರಾಜ್ಯದಿಂದಲೇ ಬರ ಪರಿಹಾರದ ಹಣ ಬಿಡುಗಡೆ!
ರಾಜ್ಯದಲ್ಲಿ ರೈತರಿಗೆ ಕುಡಿಯುವ ನೀರಿಗೆ, ಧನಕರುಗಳನ್ನ ಮೇಯಿಸಲು ಅಥವಾ ಇತರ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕಿಲ್ಲ. ಜನರನ್ನು ಗುಳೆ ಹೋಗುವುದಕ್ಕೂ ಬಿಟ್ಟಿಲ್ಲ. ಅದೇ ರೀತಿ ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದಲೇ 550 ಕೋಟಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ.
ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?
ಹಾಗಾಗಿ ಇನ್ನೂ ಒಂದು ವಾರಗಳಲ್ಲಿ ರೈತರ ಖಾತೆಗೆ ಮೊದಲ ಕಂತಿನ 2000ಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ವರ್ಷದ ಮಳೆಯ ಅಭಾವದಿಂದ ರೈತರಿಗೆ ಬೆಳೆ ಬೆಳೆಯುವುದಕ್ಕೆ ಬಹಳ ತೊಂದರೆ ಆಗುತ್ತಿದೆ. ಜಮೀನಿಗೆ ನೀರು ಒದಗಿಸುವುದು ಕೂಡ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಬರ ಪರಿಹಾರ ಹಣವನ್ನು ನೀಡಿದರೆ ರೈತರಿಗೆ ತುಸು ಅನುಕೂಲವಾಗಬಹುದು.
2,000 rupees will be credited to the farmer’s account on this day
ರಾಜ್ಯದಿಂದಲೇ ಬರ ಪರಿಹಾರದ ಹಣ ಬಿಡುಗಡೆ!



