ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!
ಸರ್ಕಾರದ ಮಾನದಂಡಗಳನ್ನು ನಿರ್ಲಕ್ಷಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವವರನ್ನು ಅನರ್ಹರ ಲಿಸ್ಟ್ ಗೆ ಸರ್ಕಾರ ಸೇರಿಸಿದೆ. ಪಡಿತರ ಚೀಟಿ ರದ್ದುಪಡಿಗೆ (Ration Card Cancellation) ಸರ್ಕಾರ ನಿರ್ಧರಿಸಿದೆ.
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ (Ration Card) ಎನ್ನುವುದು, ಅದರಲ್ಲೂ ರಾಜ್ಯದಲ್ಲಿ ವಿಶೇಷವಾಗಿ ಎಷ್ಟು ಮಹತ್ವ ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅರ್ಜಿ ಸಲ್ಲಿಸಿ ಎರಡು ವರ್ಷಗಳವರೆಗೆ ಸುಮ್ಮನೆ ಇದ್ದವರು ಕೂಡ ತಮಗೆ ಹೊಸ ಬಿಪಿಎಲ್ ಕಾರ್ಡ್ (BPL card) ಯಾವಾಗ ವಿತರಣೆ ಮಾಡುತ್ತೀರಿ ಎಂದು ಸರ್ಕಾರಕ್ಕೆ ದಂಬಾಲು ಬಿದ್ದಿದ್ದಾರೆ.
ಇಷ್ಟಕ್ಕೂ ಪಡಿತರ ಚೀಟಿ ಯಾಕೆ ಬೇಕು ಎನ್ನುವುದರ ಬಗ್ಗೆ ನಿಮಗೂ ಮಾಹಿತಿ ಇರುತ್ತೆ. ಅದರಲ್ಲೂ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ (Antyodaya Card) ಇತ್ತೀಚಿನ ದಿನಗಳಲ್ಲಿ ಹೆಚ್ಚು ಮ್ಯಾಂಡೇಟರಿ (mandatory) ಎನ್ನುವಂತೆ ಆಗಿದೆ.
ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
ಅರ್ಜಿ ಪರಿಶೀಲನೆ! (Application verification)
ಗರಿಬ್ ಕಲ್ಯಾಣ ಯೋಜನೆ (Garib Kalyan Yojana) ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಮತ್ತು ಬಡವರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ. 540,000 ಕುಟುಂಬಗಳು ಬಿಬಿಎಲ್ ಕಾರ್ಡ್ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. 60,000 ಕುಟುಂಬಗಳು ಅಂತ್ಯೋದಯ ಕಾರ್ಡ್ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಇದರಲ್ಲಿ ಅನರ್ಹರ ಸಂಖ್ಯೆ ಕೂಡ ಜಾಸ್ತಿ. ಆಸ್ತಿ, ಜಮೀನು, ಕಾರು, ಬಂಗಲೆ ಇಟ್ಟುಕೊಂಡವವರು, ಸರ್ಕಾರದ ಮಾನದಂಡಗಳನ್ನು ನಿರ್ಲಕ್ಷಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವವರನ್ನು ಅನರ್ಹರ ಲಿಸ್ಟ್ ಗೆ ಸರ್ಕಾರ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪಡಿತರ ಚೀಟಿ ರದ್ದುಪಡಿಗೆ (Ration Card Cancellation) ಸರ್ಕಾರ ನಿರ್ಧರಿಸಿದೆ.
ಗೃಹಜ್ಯೋತಿ ಯೋಜನೆಯ ಜೀರೋ ವಿದ್ಯುತ್ ಬಿಲ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್
ಪಡಿತರ ಪಡೆದುಕೊಳ್ಳಲು ಹೊಸ ನಿಯಮ! (New rules for ration card)
ಈಗಾಗಲೇ ಹೊಸ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಹಾಗಾಗಿ ಸದ್ಯದಲ್ಲಿ ಸಾಕಷ್ಟು ಬಿಪಿಎಲ್ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲಿದ್ದಾರೆ.
ಇನ್ನು ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರುಗಳನ್ನು ಕೂಡ ಸೇರಿಸಲಾಗಿದೆ. ಸರ್ಕಾರ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಪಡಿತರ ಪಡೆದುಕೊಳ್ಳುವಾಗ ಮನೆಯ ಪ್ರತಿಯೊಬ್ಬ ಸದಸ್ಯರ ಬೆರಳಚ್ಚು ತೆಗೆದುಕೊಳ್ಳಲಾಗುತ್ತದೆ.
ರೈತರ ಖಾತೆಗೆ ಈ ದಿನ ಜಮಾ ಆಗಲಿದೆ 2,000 ರೂಪಾಯಿ, ಅಧಿಕೃತ ಘೋಷಣೆ
ಮನೆ ಯಜಮಾನನಿಂದ ಹಿಡಿದು ರೇಷನ್ ಕಾರ್ಡ್ ನಲ್ಲಿ ಇರುವ ಕೊನೆಯ ಸದಸ್ಯರ ಹೆಸರಿನವರೆಗೂ ಕೂಡ biometric ಬೆರಳಚ್ಚು (thumb impression) ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಹಾಗಾಗಿ ಪ್ರತಿ ತಿಂಗಳು ಪಡಿತರ ವಿತರಣೆ ಮಾಡುವಾಗ ಒಬ್ಬ ಸದಸ್ಯರಂತೆ ಎಷ್ಟು ಸದಸ್ಯರಿದ್ದಾರೋ ಅಷ್ಟು ತಿಂಗಳು ರೇಷನ್ ಪಡೆಯುವಾಗ ಬೆರಳಚ್ಚು ದಾಖಲೆ ಮಾಡಿಸಬೇಕು. ಎಲ್ಲ ಸದಸ್ಯರ ಬೆರಳಚ್ಚು ಪರಿಶೀಲನೆ ಆಗುವವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ನಂತರ ಮನೆಯ ಯಾವುದೇ ಸದಸ್ಯ ಬಂದು ಪಡಿತರ ಪಡೆದುಕೊಳ್ಳಬಹುದು.
ಪಡಿತರ ಚೀಟಿಯಲ್ಲಿ ಹೆಸರು ಇಲ್ಲದೆ ಇರುವವರು ಕೂಡ ಬಂದು ಪಡಿತರ ಪಡೆದುಕೊಳ್ಳಬಾರದು ಎನ್ನುವ ಸಲುವಾಗಿ, ವಂಚನೆ ತಡೆಗಟ್ಟುವುದಕ್ಕಾಗಿ ಈ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತರಲಿದೆ.
A new rule regarding the distribution of new ration card